Shubman Gill: ದಕ್ಷಿಣ ಆಫ್ರಿಕಾ ಪಂದ್ಯದಿಂದ ಗಿಲ್ ಔಟ್? ಕಳಪೆ ಫಾರ್ಮ್ ಕಾರಣನಾ?
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ನಾಲ್ಕನೇ ಟಿ20ಐ ಪಂದ್ಯದಿಂದ ಭಾರತ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ (Shubman Gill) ಅವರನ್ನು ಹೊರಗೆ ಇಟ್ಟಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದು, ಅನೇಕ ಅನುಮಾನಗಳನ್ನ ಸೃಷ್ಟಿ ಮಾಡಿದೆ. ಗಿಲ್‌ಗೆ ಕಾಲ್ಬೆರಳಿನ ಗಾಯ ಮಾಹಿತಿಗಳ ಪ್ರಕಾರ, ಗಿಲ್ ಅವರಿಗೆ ಕಾಲ್ಬೆರಳಿನ ಗಾಯದಿಂದಾಗಿ ಗಿಲ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯಗಳಿಂದ ಹೊರಕ್ಕೆ ಇಡಲಾಗಿದೆ ಎನ್ನಲಾಗುತ್ತಿದೆ. ಈ ಪಂದ್ಯಗಳಿಗೆ ತರಬೇತಿ ಪಡೆಯುತ್ತಿರುವಾಗ ಅವರಿಗೆ ಗಾಯವಾಗಿದೆ ಎನ್ನಲಾಗುತ್ತಿದೆ. ಆದರೆ ಈ ವಿಚಾರವಾಗಿ ಅವರ ಅಭಿಮಾನಿಗಳಲ್ಲಿ ಅನೇಕ…
