FOOD RULES: ಅಡುಗೆ ಮಾಡುವಾಗ ಈ ರೂಲ್ಸ್‌ ಫಾಲೋ ಮಾಡಿ ಶ್ರೀಮಂತಿಕೆ ಬರುತ್ತೆ

astrology food rules must follow for money benefits

ನಮ್ಮ ಸಂಪ್ರದಾಯದಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಅನೇಕ ನಿಯಮಗಳನ್ನ ಪಾಲಿಸಬೇಕಾಗುತ್ತದೆ ಒಟ್ಟಾರೆ ತಿನ್ನಬೇಕು ಎಂದು ಅಡುಗೆ ಮಾಡುವ ಹಾಗಿಲ್ಲ. ಕೇವಲ ಅಡುಗೆ ಮಾಡುವ ವಿಚಾರದಲ್ಲಿ ಮಾತ್ರವಲ್ಲದೇ, ಅದರ ಜೊತೆಗೆ ತಿನ್ನುವ ವಿಚಾರದಲ್ಲಿ ಸಹ ಅನೇಕ ಪದ್ಧತಿಗಳನ್ನ ಫಾಲೋ ಮಾಡಲಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ ಆಹಾರವನ್ನ ದೇವರು ಎಂದು ಪರಿಗಣಿಸಲಾಗುತ್ತದೆ. ಆಹಾರ ಇಲ್ಲದೇ ಇದ್ದರೆ ಬದುಕುವುದು ಬಹಳ ಕಷ್ಟ. ಆಹಾರಕ್ಕೆ ನಾವು ತುಂಬಾ ಗೌರವ ಕೊಡುತ್ತೇವೆ. ಈ ಕಾರಣದಿಂದ ನಾವು ಆಹಾರದ (Food Rules) ವಿಚಾರದಲ್ಲಿ ತುಂಬಾ ನಿಯಮಗಳನ್ನ ಪಾಲಿಸಬೇಕಾಗುತ್ತದೆ.

ನಾವು ಜ್ಯೋತಿಷ್ಯದ ನಿಯಮದ ಪ್ರಕಾರ ಆಹಾರವನ್ನ ತಯಾರಿಸಿ ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯ ಫಲಗಳು ಸಿಗುತ್ತದೆ. ಅಲ್ಲದೇ, ಇದರಿಂದ ನಾವು ಲಕ್ಷ್ಮಿ ದೇವಿಯ ಕೃಪೆಗೆ ಸಹ ಪಾತ್ರರಾಗಬಹುದು. ಹಾಗಾದ್ರೆ ಅಡುಗೆ ಮಾಡುವಾಗ ಯಾವ ನಿಯಮಗಳನ್ನ ಪಾಲಿಸಬೇಕಾಗುತ್ತದೆ ಎಂಬುದು ಇಲ್ಲಿದೆ.

ಸ್ವಚ್ಛತೆ ಕಾಪಾಡಿಕೊಳ್ಳಬೇಕು: ಯಾವಾಗಲೂ ಅಡುಗೆ ಮಾಡುವಾಗ ನಾವು ತುಂಬಾ ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು. ದೇಹ ಹಾಗೂ ಮನಸ್ಸು ಎರಡೂ ಶುದ್ಧವಾಗಿರಬೇಕು. ಇಲ್ಲದಿದ್ದರೆ ಮಾಡಿದ ಅಡುಗೆಯಿಂದ ಪುಣ್ಯ ಸಿಗುವುದಿಲ್ಲ. ಇದಲ್ಲದೇ, ಮನೆಯಲ್ಲಿ ಕೆಟ್ಟ ಶಕ್ತಿಗಳ ಸಂಚಾರ ಹೆಚ್ಚಾಗುತ್ತದೆ. ಹಾಗಾಗಿ ಅಡುಗೆ ಮಾಡುವ ಮೊದಲು ಸ್ನಾನ ಮಾಡಬೇಕು ಹಾಗೂ ಸ್ವಚ್ಛವಾದ ಜಾಗದಲ್ಲಿ ತಯಾರಿ ಮಾಡುವುದು ಬಹಳ ಮುಖ್ಯವಾಗುತ್ತದೆ.

ಪ್ರಾರ್ಥನೆ ಮಾಡಬೇಕು: ಜ್ಯೋತಿಷ್ಯದ ಪ್ರಕಾರ, ಆಹಾರ ಸೇವನೆ ಮಾಡುವ ಮೊದಲು ಪ್ರಾರ್ಥನೆ ಮಾಡಬೇಕು. ಮೊದಲೆಲ್ಲಾ ನಾವು ಚಿಕ್ಕವರಿದ್ದಾಗ ಅದನ್ನ ತಪ್ಪದೇ ಮಾಡುತ್ತಿದ್ದೆವು. ಆದರೆ ಈಗ ಅದು ಯಾವುದೂ ಇಲ್ಲ. ಆದರೆ ನಾವು ಪ್ರತಿ ಹೊತ್ತು ಊಟ ಮಾಡುವಾಗ ಅದನ್ನ ಕೊಟ್ಟ ದೇವರಿಗೆ ಧನ್ಯವಾದ ತಿಳಿಸಬೇಕು. ಇದಕ್ಕಿಂತ ಮುಖ್ಯವಾಗಿ ಯಾವುದೇ ಕಾರಣಕ್ಕೂ ಎಡಗೈಯಿಂದ ಆಹಾರ ಸೇವನೆ ಮಾಡಬಾರದು.

ಊಟ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ಕುಳಿತು ಊಟ ಮಾಡಿದರೆ ಉತ್ತಮ ಫಲಗಳು ಸಿಗುತ್ತದೆ. ಇದಲ್ಲದೇ, ಪಶ್ಚಿಮ ದಿಕ್ಕಿಗೆ ಕುಳಿತು ಆಹಾರವನ್ನ ಸಹ ಸೇವನೆ ಮಾಡಬಹುದು. ನಂಬಿಕೆಗಳ ಪ್ರಕಾರ,  ಪಶ್ಚಿಮ ದಿಕ್ಕಿನಲ್ಲಿ ಕುಳಿತು ಊಟ ಮಾಡಿದ್ರೆ ಬೇಗ ಹಣ ಸಿಗುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ: ಜೀವನದಲ್ಲಿ ನೆಮ್ಮದಿಯೇ ಇಲ್ವಾ? ಗಣೇಶನ ಈ ಪರಿಹಾರ ಮಾಡಿ

Leave a Reply

Your email address will not be published. Required fields are marked *