ಹೀರಾನಗರ್: ಜಮ್ಮು-ಕಾಶ್ಮೀರದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, (Amit Shah) ಅಂತಾರಾಷ್ಟ್ರೀಯ ಗಡಿ ಭಾಗವಾಗಿರುವ ಕಥುವಾ ಜಿಲ್ಲೆಯ ಹೀರಾನಗರ್ ಗೆ ಭೇಟಿ ನೀಡಿ, ಗಡಿಯಾಚೆಯ ನುಸುಳುವಿಕೆ ತಡೆಯಲು ಗಡಿ ಭದ್ರತಾ ಪಡೆ ನಿಯೋಜಿಸಿರುವ ತಾಂತ್ರಿಕ ಸಲಕರಣೆಗಳ ಪರಿವೀಕ್ಷಣೆ ನಡೆಸಿದ್ದಾರೆ.
ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
ಬೋಬಿಯಾ ಮತ್ತು ಗುರ್ನಾಮ್ ಗಳಲ್ಲಿರುವ – ಬಿಎಸ್ ಎಫ್ (BSF) ಕೇಂದ್ರಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಬೋಬಿಯಾದಲ್ಲಿ ಅವರು, ಬಿಎಸ್ ಎಫ್ (BSF) ಸಿಬ್ಬಂದಿಗಾಗಿ ಆರು ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಬಿಎಸ್ ಎಫ್ (BSF) ಯೋಧರೊಂದಿಗೆ ಸಂವಾದ ನಡೆಸಿ, ಆಪರೇಷನ್ ಸಿಂಧೂರದಲ್ಲಿ ಗಡಿ ಭದ್ರತಾ ಪಡೆ ಸ್ಮರಣೀಯ ಸೇವೆ ಸಲ್ಲಿಸಿದೆ. ದೇಶದ ಗಡಿ ಪ್ರದೇಶಗಳ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಬಿಎಸ್ ಎಫ್ (BSF) ಯೋಧರ ಕಲ್ಯಾಣಕ್ಕಾಗಿ ಗೃಹ ಸಚಿವಾಲಯ ವಿಶೇಷಯೋಜನೆ ರೂಪಿಸುತ್ತಿದ್ದು, ಪಡೆಯ ಆಧುನೀಕರಣಕ್ಕೆ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನ್ಯಾನೋ ಮೀಟರ್ ಚಿಪ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಅಶ್ವಿನಿ ವೈಷ್ಣವ್
