ನವದೆಹಲಿ: ಭಾರತದ ಅತ್ಯಂತ ಗೌರವಾನ್ವಿತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನ ಘೋಷಣೆ (Padma Awards 2026) ಮಾಡಲಾಗಿದ್ದು, ಕರ್ನಾಟಕದ ಸಾಧರಿಗೆ ಸಹ ಕೊಡಲಾಗಿದೆ.
ಏನಿದು ಪದ್ಮ ಪ್ರಶಸ್ತಿ?
ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ಪ್ರತಿ ವರ್ಷ ಗಣರಾಜ್ಯೋತ್ಸವದಂದು ಘೋಷಿಸಲಾಗುತ್ತದೆ. ಈ ಬಾರಿ 131 ಪ್ರಶಸ್ತಿ ಪುರಸ್ಕೃತರು ಇದ್ದಾರೆ. ಮಾಜಿ ಯುಜಿಸಿ ಮುಖ್ಯಸ್ಥ ಮಾಮಿದಲ ಜಗದೇಶ್ ಕುಮಾರ್ ಅವರಿಂದ ಹಿಡಿದು ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿಯವರೆಗೆ, ಭಾರತದಾದ್ಯಂತ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಗಮನಾರ್ಹವಾಗಿ ಮುನ್ನಡೆಸಿದ ಕೆಲಸ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಈ ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿಗಳು ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಧ್ಯುಕ್ತ ಸಮಾರಂಭಗಳಲ್ಲಿ ಪ್ರಧಾನ ಮಾಡುತ್ತಾರೆ.
ಪದ್ಮ ಪ್ರಶಸ್ತಿಯಅರ್ಥವೇನು?
ಪದ್ಮವಿಭೂಷಣ ಪ್ರಶಸ್ತಿಯನ್ನು ಅಸಾಧಾರಣ ಮತ್ತು ಅತ್ಯುತ್ತಮ ಸೇವೆಗಾಗಿ ನೀಡಲಾಗುತ್ತದೆ.
ಪದ್ಮಭೂಷಣವನ್ನ ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗೆ ನೀಡಲಾಗುತ್ತೆ
ಯಾವುದೇ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತದೆ
| ಪ್ರಶಸ್ತಿ ಪುರಸ್ಕೃತರು | ಪ್ರಶಸ್ತಿ | ರಾಜ್ಯ |
| ಶತವಧಾನಿ ಆರ್. ಗಣೇಶ್ | ಪದ್ಮ ಭೂಷಣ | ಕರ್ನಾಟಕ |
| ಶುಭ ವೆಂಕಟೇಶ ಅಯ್ಯಂಗಾರ್ | ಪದ್ಮಶ್ರೀ | ಕರ್ನಾಟಕ |
| ಶಶಿ ಶೇಖರ್ ವೆಂಪತಿ | ಪದ್ಮಶ್ರೀ | ಕರ್ನಾಟಕ |
| ಡಾ.ಪ್ರಭಾಕರ ಬಸವಪ್ರಭು ಕೋರೆ | ಪದ್ಮಶ್ರೀ | ಕರ್ನಾಟಕ |
| ನಟ ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ) | ಪದ್ಮವಿಭೂಷಣ | ಮಹಾರಾಷ್ಟ್ರ |
| ಮಮ್ಮುಟ್ಟಿ | ಪದ್ಮಭೂಷಣ | ಕೇರಳ |
| ಅಲ್ಕಾ ಯಾಗ್ನಿಕ್ | ಪದ್ಮಭೂಷಣ | ಮಹಾರಾಷ್ಟ್ರ |
| ಆರ್ ಮಾಧವನ್ | ಪದ್ಮಶ್ರೀ | ತಮಿಳುನಾಡು |
| ಸತೀಶ್ ಶಾ (ಮರಣೋತ್ತರ) | ಪದ್ಮಶ್ರೀ | ಮಹಾರಾಷ್ಟ್ರ |
| ಶ್ರೀ ಪಿ ನಾರಾಯಣನ್ | ಪದ್ಮವಿಭೂಷಣ | ಕೇರಳ |
| ಕುಮಾರಸಾಮಿ ತಂಗರಾಜ್ | ಪದ್ಮಶ್ರೀ | ತೆಲಂಗಾಣ |
| ಗೋಪಾಲ್ ಜಿ ತ್ರಿವೇದಿ | ಪದ್ಮಶ್ರೀ | ಬಿಹಾರ |
| ಅಶೋಕ್ ಕುಮಾರ್ ಸಿಂಗ್ | ಪದ್ಮಶ್ರೀ | ಉತ್ತರ ಪ್ರದೇಶ |
| ಕೃಷ್ಣಮೂರ್ತಿ ಬಾಲಸುಬ್ರಮಣಿಯನ್ | ಪದ್ಮಶ್ರೀ | ತೆಲಂಗಾಣ |
| ಪ್ರೇಮ್ ಲಾಲ್ ಗೌತಮ್ | ಪದ್ಮಶ್ರೀ | ಹಿಮಾಚಲ ಪ್ರದೇಶ |
| ವೀಳಿನಾಥನ್ ಕಾಮಕೋಟಿ | ಪದ್ಮಶ್ರೀ | ತಮಿಳುನಾಡು |
| ಶ್ರೀಮತಿ ಶಿವಶಂಕರಿ | ಪದ್ಮಶ್ರೀ | ತಮಿಳುನಾಡು |
| ವೆಂಪತಿ ಕುಟುಂಬ ಶಾಸ್ತ್ರಿ | ಪದ್ಮಶ್ರೀ | ಆಂಧ್ರ ಪ್ರದೇಶ |
| ಮಹೇಂದ್ರ ಕುಮಾರ್ ಮಿಶ್ರಾ | ಪದ್ಮಶ್ರೀ | ಒಡಿಶಾ |
ಇನ್ಈನು ವರ್ಷ ಎರಡು “ಜೋಡಿ ಪ್ರಶಸ್ತಿ ಪ್ರಕರಣಗಳು” ನಡೆದಿವೆ, ಇದರಲ್ಲಿ ಒಂದೇ ಪದ್ಮ ಪ್ರಶಸ್ತಿಯನ್ನು ಇಬ್ಬರು ವ್ಯಕ್ತಿಗಳಿಗೆ ಜಂಟಿಯಾಗಿ ನೀಡಲಾಗಿದೆ.
ತಮಿಳುನಾಡಿನ ಶ್ರೀಮತಿ ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ಶ್ರೀಮತಿ ರಂಜನಿ ಬಾಲಸುಬ್ರಮಣಿಯನ್ ಅವರಿಗೆ ಕಲಾ ಕ್ಷೇತ್ರದಲ್ಲಿ ಜಂಟಿಯಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಅದೇ ರೀತಿ, ಛತ್ತೀಸ್‌ಗಢದ ಶ್ರೀ ರಾಮಚಂದ್ರ ಗೋಡ್‌ಬೋಲೆ ಮತ್ತು ಶ್ರೀಮತಿ ಸುನೀತಾ ಗೋಡ್‌ಬೋಲೆ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿಯನ್ನು ಒಟ್ಟಿಗೆ ನೀಡಲಾಗಿದೆ.
ಇದನ್ನೂ ಓದಿ: ಕಣಿವೆ ರಾಜ್ಯದಲ್ಲಿ ಮತ್ತೆ ಗುಂಡಿನ ಸದ್ದು, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಲಾಕ್
