Sweet Potato: ಕ್ಯಾನ್ಸರ್‌ ತಡೆಯುತ್ತೆ ಈ ಸಿಹಿ ಗೆಣಸು, ಶೀತಕ್ಕೂ ಇದೇ ಪರಿಹಾರ

health benefits of super food Sweet Potato

ಸಿಹಿ ಗೆಣಸು ಅನೇಕ ಜನರಿಗೆ ಇಷ್ಟದ ತರಕಾರಿ ಇದು. ಇದನ್ನ ತರಕಾರಿ ಎನ್ನುವುದಕ್ಕಿಂತ ಒಂದು ರೀತಿಯ ಹಣ್ಣು ಎಂದರೂ ಸಹ ತಪ್ಪಲ್ಲ. ಇದನ್ನ ಬರೀ ಬೇಯಿಸಿ ಸಹ ತಿನ್ನಬಹುದು ಅಥವಾ ಅಡುಗೆಯಲ್ಲಿ ಬಳಕೆ ಮಾಡಬಹುದು, ಈ ಸಿಹಿ ಗೆಣಸನ್ನ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನ ಪಡೆಯಬಹುದಾಗಿದೆ. ಹಾಗಾದ್ರೆ ಗೆಣಸು (Sweet Potato) ಸೇವನೆಯಿಂದ ಏನೆಲ್ಲಾ ಲಾಭ ಇದೆ ಎಂಬುದು ಇಲ್ಲಿದೆ.

ಜೀರ್ಣಕ್ರಿಯೆಗೆ ಉತ್ತಮ

ಸಿಹಿ ಗೆಣಸಿನಲ್ಲಿರುವ ವಿಟಮಿನ್ ಬಿ6 ಹೋಮೋಸಿಸ್ಟೀನ್ ಎನ್ನುವ ಅಮೈನೋ ಆಮ್ಲದ ಶೇಖರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕವಾಗಿ ಕಂಡುಬರುವ ಅಮೈನೋ ಆಮ್ಲವಾಗಿದ್ದು, ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಸಿಹಿ ಗೆಣಸನ್ನ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ. ಅಲ್ಲದೇ, ಆಮ್ಲದಿಂದ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಬರಬಹುದು. ಅದನ್ನ ಕೂಡ ಈ ಸಿಹಿ ಗೆಣಸು ತಡೆಯುತ್ತದೆ.

ಶೀತಕ್ಕೆ ಪರಿಹಾರ

ಪದೇ ಪದೇ ಶೀತ ಹಾಗೂ ಜ್ವರ ಕಾಡುತ್ತಿದ್ದರೆ ಅದಕ್ಕೆ ಸಿಹಿ ಗೆಣಸು ಪರಿಹಾರ ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಶೀತ ಬರದಂತೆ ತಡೆಯುತ್ತದೆ. ಹಾಗೆಯೇ, ಇದನ್ನ ಸೇವನೆ ಮಾಡುವುದರಿಂದ ಹಲ್ಲು ಮತ್ತು ಮೂಳೆಗಳ ರಚನೆಗೆ ಸಹಾಯ ಮಾಡುತ್ತದೆ.  

ಕಬ್ಬಿಣದ ಕೊರತೆಗೆ ಪರಿಹಾರ

ಇನ್ನು ಸಿಹಿ ಗೆಣಸಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಯಾರಿಗೆಲ್ಲಾ ಕಬ್ಬಿಣದ ಕೊರತೆ ಇರುತ್ತದೆಯೋ ಅವರಿಗೆ ಯಾವಾಗಲೂ ಆಯಾಸ ಆಗುತ್ತದೆ. ಅದಕ್ಕೆ ಈ ಸಿಹಿ ಗೆಣಸು ಪರಿಹಾರ ನೀಡುತ್ತದೆ. ಇದನ್ನ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕ್ಯಾನ್ಸರ್‌ನಿಂದ ರಕ್ಷಣೆ

ಸಿಹಿ ಗೆಣಸಿನಲ್ಲಿರುವ ವಿಟಮಿನ್ ಎ ಅಂದರೆ ಬೀಟಾ ಕ್ಯಾರೋಟಿನ್ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ನಮ್ಮ ಚರ್ಮವನ್ನು ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ.

ಇದನ್ನೂ ಓದಿ: ಒಂದು ಪೀಸ್‌ ಶುಂಠಿಯಲ್ಲಿದೆ ಸಾವಿರ ಶಕ್ತಿ, ಹೃದಯಕ್ಕೆ ತುಂಬಾ ಸಹಾಯಕಾರಿ

Leave a Reply

Your email address will not be published. Required fields are marked *