ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಮತ್ತೆ ಗುಂಡಿನ ಚಕಮಕಿ ನಡೆದಿದೆ (Encounter) ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೂರನೇ ಎನ್ಕೌಂಟರ್
ಕಳೆದ ಒಂದು ವಾರದಿಂದ ಈ ಚತ್ರೂ ಬೆಲ್ಟ್ನಲ್ಲಿ ನಡೆದ ಮೂರನೇ ಎನ್ಕೌಂಟರ್ ಇದಾಗಿದ್ದು, ಈ ಪ್ರದೇಶದಲ್ಲಿ ಭಾರೀ ಹಿಮಪಾತದ ನಡುವೆಯೂ ಸೇನೆ ಮತ್ತು ಪೊಲೀಸರು ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಮೂವರು ಪಾಕಿಸ್ತಾನಿ ಭಯೋತ್ಪಾದಕರ ಹುಡುಕಾಟವನ್ನ ಮುಂದುವರೆಸಲಾಗಿದೆ.
ಜಾನ್ಸೀರ್-ಕಂಡಿವಾರ್ ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರ ಜಂಟಿ ಶೋಧ ತಂಡವು ಕಾರ್ಯಾಚರಣೆ ನಡೆಸುತ್ತಿದ್ದಾಗ ರಾತ್ರಿ 10.20 ರ ಸುಮಾರಿಗೆ ಇತ್ತೀಚಿನ ಎನ್ಕೌಂಟರ್ ಆರಂಭ ಆಗಿದೆ ಎನ್ನುವ ಮಾಹಿತಿ ಇದ್ದು, ಮೊದಲು ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ಆರಂಭ ಮಾಡಿದು, ನಂತರ ಭದ್ರತಾ ಪಡೆಗಳು ಪ್ರತಿಯಾಗಿ ಗುಂಡು ಹಾರಿಸಿದವು.
7 ಸೈನಿಕರಿಗೆ ಗಾಯ
ಇನ್ನು ಈ ಗುಂಡಿನ ಚಕಮಕಿಯಲ್ಲಿ ಒಬ್ಬ ಪ್ಯಾರಾಟ್ರೂಪರ್ ಸಾವನ್ನಪ್ಪಿದ್ದು, ಇತರ ಏಳು ಸೈನಿಕರು ಗಾಯಗೊಂಡಿದ್ದಾರೆ. ದಟ್ಟವಾದ ಭೂಪ್ರದೇಶವನ್ನು ಬಳಸಿಕೊಂಡು ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಜನವರಿ 22 ರಂದು ಮೊದಲ ಎನ್ಕೌಂಟರ್ ನಡೆದ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಅವರನ್ನು ಹಿಡಿಯಲಾಗಿದೆ ಎನ್ನುವ ಮಾಹಿತಿ ಇದೆ.
ಇದನ್ನೂ ಓದಿ: 77ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾರತ, ದೇಶದ ಜನರಿಗೆ ಮೋದಿ ಶುಭಾಶಯ
