Shocking News: ಸಾಲು ಸಾಲು ರಜೆ, ಜನರ ಜೇಬಿಗೆ ಬರೆ: ದುಪ್ಪಟ್ಟು ದರ ಹೆಚ್ಚಿಸಿದ ಖಾಸಗಿ ಬಸ್‌ಗಳು

Shocking News private bus price hiked due to long weekend

ಬೆಂಗಳೂರು: ನಾಳೆಯಿಂದ ಸತತ ಮೂರು ದಿನ ರಜೆ ಹಿನ್ನೆಲೆ ರಜೆಗೆ ಊರುಗಳಿಗೆ ಹೋಗುವವರಿಗೆ ಶಾಕಿಂಗ್ ನ್ಯೂಸ್ (Shocking News) ಕಾದಿದ್ದು, ಖಾಸಗಿ ಬಸ್‌ಗಳು ಪ್ರಯಾಣ ದರ ದುಪ್ಪಟ್ಟು ಮಾಡಿದೆ.

ದುಪ್ಪಟ್ಟು ಏರಿಕೆ ಮಾಡಿದ ಖಾಸಗಿ ಬಸ್‌ಗಳು

3 ದಿನ ರಜೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ಗಳು 500 ರೂ. ಇದ್ದ ಟಿಕೆಟ್ ದರ 800 ರೂಪಾಯಿಗೆ ಏರಿಕೆ ಮಾಡಿದೆ. ಅಲ್ಲದೇ, 1000 ರೂ. ಇದ್ದ ಟಿಕೆಟ್ ದರ 2,000 ರೂ.ಗೆ ಏರಿಕೆ ಆಗಿದ್ದು, ಯಾವುದೇ ಲಗಾಮು ಇಲ್ಲದೆ ದುಪ್ಪಟ್ಟು ದರ ನಿಗದಿ ಮಾಡಿದ್ದು, ಇದು ಜನಸಾಮಾನ್ಯರಿಗೆ ಹೊರೆ ಆಗಿದೆ.

ಸಾರಿಗೆ ಸಂಸ್ಥೆ ಅಭಯ

ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೇರೆ ಊರಿಗೆ ಹೋಗುವ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಅಭಯ ನೀಡಿದ್ದು, ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ. KSRTC-BMTCಯಿಂದ ಹೆಚ್ಚುವರಿ ಬಸ್ ಸೇವೆ ಆರಂಭ ಮಾಡಲಾಗಿದ್ದು, ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್‌ನಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಇದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಬಿಎಂಟಿಸಿ ಬಸ್‌ಗಳನ್ನ ಬಳಸಿಕೊಳ್ಳಲಿ ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ: ಅತ್ಯಾ*ಚಾರ-ಕೊ*ಲೆಯನ್ನ ಸಣ್ಣ ಪ್ರಕರಣ ಎಂದ ಸಂಸದ ರಾಜಶೇಖರ್ ಹಿಟ್ನಾಳ್‌

Leave a Reply

Your email address will not be published. Required fields are marked *