Vasanta Panchami: ನಾಳೆ ರೂಪುಗೊಳ್ಳಲಿದೆ 5 ಅಪರೂಪದ ಯೋಗ, ಈ ರಾಶಿಯವರ ಕಷ್ಟಗಳಿಗೆ ಫುಲ್‌ಸ್ಟಾಪ್

special yoga on Vasanta Panchami lucky to these zodiac sign

ಜನವರಿ 23ರಂದು ಅಂದರೆ ನಾಳೆ ವಸಂತ ಪಂಚಮಿಯನ್ನ ಆಚರಣೆ ಮಾಡಲಾಗುತ್ತದೆ. ಈ ದಿನವನ್ನ ಬಹಳ ವಿಶೇಷ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ದಿನ ಅಪರೂಪದಐದುರಾಜಯೋಗಗಳು ಸೃಷ್ಟಿ ಅಗುತ್ತದೆ. ಹಾಗಾದ್ರೆ ವಸಂತ ಪಂಚಮಿಯ (Vasanta Panchami) ದಿನದಂದು ಸೃಷ್ಟಿ ಆಗುವ 5 ಅಪರೂಪದ ರಾಜಯೋಗಗಳು ಯಾವುವು ಹಾಗೂ ಅದರಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.

ಯಾವೆಲ್ಲಾ ಯೋಗಗಳು ಸೃಷ್ಟಿ ಆಗುತ್ತದೆ?

ಈ ವಸಂತ ಪಂಚಮಿಯ ಸಮಯದಲ್ಲಿಮಕರ ರಾಶಿಯಲ್ಲಿ ಬುಧ, ಸೂರ್ಯ, ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಗವಾಗುತ್ತದೆ. ಇದರಿಂದ ಬುಧಾದಿತ್ಯ ಮತ್ತು ಲಕ್ಷ್ಮಿ ನಾರಾಯಣ ಯೋಗ ಸೃಷ್ಟಿ ಆಗುತ್ತದೆ. ಹಾಗೆಯೇ, ‘ರುಚಕ ರಾಜಯೋಗ’ ಸಹ ಜೊತೆಗೆ ರೂಪುಗೊಳ್ಳಲಿದೆ. ಇನ್ನು ಮೀನ ರಾಶಿಯಲ್ಲಿರುವ ಚಂದ್ರ ಮತ್ತು ಮಿಥುನದಲ್ಲಿರುವ ಗುರು ಕೇಂದ್ರ ಸ್ಥಾನದಲ್ಲಿರುವುದರಿಂದ ‘ಗಜಕೇಸರಿ ರಾಜಯೋಗ’ ಸೃಷ್ಟಿಯಾಗುತ್ತದೆ.

ಯಾವ ರಾಶಿಯವರಿಗೆ ಯೋಗಗಳಿಂದ ಅದೃಷ್ಟ?

ಕನ್ಯಾ ರಾಶಿ: ಈ ಯೋಗಗಳ ಕಾರಣದಿಂದ ಕನ್ಯಾ ರಾಶಿಯವರ ಕೆಲಸದ ಜೀವನ ಸುಗಮವಾಗಿ ಸಾಗುತ್ತದೆ. ವ್ಯವಹಾರವು ಆಶಾದಾಯಕವಾಗಿರುತ್ತದೆ. ರಾಜಕೀಯ ವ್ಯಕ್ತಿಗಳೊಂದಿಗಿನ ಸಂಪರ್ಕಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರಿಂದ ನಿಮಗೆ ಸ್ವಲ್ಪ ಆರ್ಥಿಕ ಲಾಭ ಸಿಗುತ್ತದೆ. ವೈದ್ಯರು, ವಕೀಲರು, ಎಂಜಿನಿಯರ್‌ಗಳು ಮತ್ತು ಐಟಿ ತಜ್ಞರಂತಹ ವೃತ್ತಿಯಲ್ಲಿರುವ ಜನರು ಪ್ರಗತಿ ಸಾಧಿಸುತ್ತಾರೆ.

ಕಟಕ ರಾಶಿ: ಈ ಸಮಯದಲ್ಲಿ  ಹಣಕಾಸಿನ ಪ್ರಯತ್ನಗಳಿಂದ ನೀವು ಬಯಸಿದ ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರಮುಖ ವಿಷಯಗಳು ಕಡಿಮೆ ಖರ್ಚಿನಲ್ಲಿ ಪೂರ್ಣಗೊಳ್ಳುತ್ತವೆ. ನಿರುದ್ಯೋಗಿಗಳಿಗೆ ಒಂದು ಅಥವಾ ಎರಡು ಶುಭ ಸುದ್ದಿಗಳು ಬರುತ್ತವೆ. ಮದುವೆಯ ಪ್ರಯತ್ನಗಳು ಸಹ ಯಶಸ್ವಿಯಾಗುತ್ತವೆ. ಉದ್ಯೋಗಿಗಳು ಉತ್ತಮ ಉದ್ಯೋಗಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.

ಮಕರ ರಾಶಿ: ಈ ಯೋಗದ ಸಮಯದಲ್ಲಿ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತದೆ. ವ್ಯವಹಾರವು ಖಂಡಿತವಾಗಿಯೂ ಬೆಳವಣಿಗೆ ಕಾಣಲಿದೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಇದು ತುಂಬಾ ಅನುಕೂಲಕರ ಸಮಯ. ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ನಿರ್ಧಾರಗಳು ಮತ್ತು ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತವೆ. ನೀವು ಅನಾರೋಗ್ಯದಿಂದ ಮುಕ್ತರಾಗುತ್ತೀರಿ.

ಇದನ್ನೂ ಓದಿ: ಫೆಬ್ರವರಿಯಲ್ಲಿ ಡಬಲ್‌ ಧಮಾಕ, ಪಂಚಗ್ರಹಿ ಯೋಗದಿಂದ ಹಣೆಬರಹವೇ ಬದಲು

Leave a Reply

Your email address will not be published. Required fields are marked *