ಲಂಡನ್: ಒಲಿಂಪಿಕ್ಸ್ (Olympics) ಕಂಚಿನ ಪದಕ ವಿಜೇತೆ ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ (Saina Nehwal) ಅವರು ಬ್ಯಾಡ್ಮಿಂಟನ್ ಆಟಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ.
ಎರಡು ವರ್ಷದ ಹಿಂದೆಯೇ ಆಟ ನಿಲ್ಲಿಸಿದ್ದ ಸೈನಾ
ತಮ್ಮ ನಿವೃತ್ತಿ ವಿಚಾರವಾಗಿ ಮಾತನಾಡಿದ ಅವರು, ನಾನು ಸುಮಾರು ಎರಡು ವರ್ಷಗಳ ಹಿಂದೆಯೇ ಆಟ ಆಡುವುದನ್ನು ನಿಲ್ಲಿಸಿದ್ದೇನೆ. ತುಂಬಾ ಇಷ್ಟಪಟ್ಟು ನಾನು ಈ ಆಟವನ್ನ ಆಡುತ್ತಿದ್ದೆ. ಹಾಗೆಯೇ, ನನ್ನ ಇಷ್ಟದಂತೆಯೇ ಅದನ್ನ ನಿಲ್ಲಿಸಿದ್ದೇನೆ. ಮೊದಲು ನಾನು ಪ್ರತ್ಯೇಕವಾಗಿ ವಿದಾಯ ಹೇಳುತ್ತಿರುವುನದನ ಘೋಷಣೆ ಮಾಡುವ ಅಗತ್ಯ ಇಲ್ಲ ಎಂದು ನಿರ್ಧಾರ ಮಾಡಿದ್ದೆ. ನಾನು ಆಡುವುದನ್ನ ನಿಲ್ಲಿಸಿದಾಗ ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ಆದರೂ ಮತ್ತೊಮ್ಮೆ ನಿವೃತ್ತಿಯ ಬಗ್ಗೆ ಘೋಷಣೆ ಮಾಡುತ್ತಿದ್ದೇನೆ ಎಂದು ಅಧಿಕೃತವಾಗಿ ತಮ್ಮ ಆಟಕ್ಕೆ ಬೈ ಹೇಳಿದ್ದಾರೆ.
ಮೊಣಕಾಲಿನ ಸಮಸ್ಯೆಯಿಂದ ವಿದಾಯ
ಸೈನಾ ಅವರು ಹೇಳಿರುವ ಪ್ರಕಾರ ಅವರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಮುಖ್ಯವಾಗಿ ಮೊಣಕಾಲಿನ ಕಾರ್ಟಿಲೆಜ್ ಸಮಸ್ಯೆಯ ಕಾರಣದಿಂದ ಅವರಿಗೆ ಅಭ್ಯಾಸ ಮಾಡಲು ಆಗುತ್ತಿಲ್ಲ. ಹಾಗಾಗಿ ಮೊಣಕಾಲಿನ ತೀವ್ರ ಕ್ಷೀಣತೆ ಮತ್ತು ಸಂಧಿವಾತದ ಸಮಸ್ಯೆಯಿಂದಾಗಿ ಅವರು ಆಟಕ್ಕೆ ವಿದಾಯ ಹೇಳುತ್ತಿದ್ದಾರೆ.
ಇದನ್ನೂ ಓದಿ: ದಾಖಲೆ ಬರೆದ ವಿರಾಟ್ ಕೊಹ್ಲಿ, 7ನೇ ಏಕದಿನ ಶತಕ ಬಾರಿಸಿದ ಕಿಂಗ್
