ಬೆಂಗಳೂರು: ಹವಾಮಾನ ಬದಲಾವಣೆಯ ಕಾರಣದಿಂದ ಈ ಬಾರಿ ವಿದ್ಯಾರ್ಥಿಗಳಿಗೆ ಶೂ ಬದಲಾಗಿ ಚಪ್ಪಲಿ (Big News) ನೀಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
ಬೇಡಿಕೆ ಇರುವ ಜಿಲ್ಲೆಗಳ ಮಾಹಿತಿ ಸಂಗ್ರಹ
ವಿದ್ಯಾರ್ಥಿಗಳಿಗೆ ಈ ಬಾರಿ ಶೂ ಬದಲು ಚಪ್ಪಲಿ ಭಾಗ್ಯ ನೀಡಲು ಇಲಾಖೆ ಪ್ಲ್ಯಾನ್ ಮಾಡುತ್ತಿದ್ದು, ಬೇಡಿಕೆ ಇರುವ ಜಿಲ್ಲೆ ಮಾಹಿತಿ ಸಂಗ್ರಹಕ್ಕೆ ಉರ್ದು & ಇತರೆ ಅಲ್ಪ ಸಂಖ್ಯಾತ ಭಾಷಾ ಶಾಲೆ ನಿರ್ದೇಶನಾಲಯ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.
ಹವಾಮಾನ ಅನುಗುಣವಾಗಿ ಚಪ್ಪಲಿ
ಈ ಬಾರಿ ಮಕ್ಕಳಿಗೆ ಹವಾಮಾನ ಅನುಗುಣವಾಗಿ ಚಪ್ಪಲಿ ನೀಡಲು ತಯಾರಿ ಮಾಡಲಾಗುತ್ತಿದೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಶೂ ಸಾಕ್ಸ್ ಧರಿಸಲು ಅನೇಕ ಪ್ರದೇಶಗಳಲ್ಲಿ ಕಷ್ಟವಾಗುತ್ತದೆ. ಹಾಗಾಗಿ ಆ ರೀತಿಯ ಜಿಲ್ಲೆಗಳಲ್ಲಿ ಈ ಹಿಂದೆಯೇ ಅಂದರೆ 2015ರಲ್ಲಿಯು ಶೂ ಬದಲು ಚಪ್ಪಲಿ ನೀಡುವ ಪ್ಲಾನ್ ಮಾಡಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಆ ಪ್ಲ್ಯಾನ್ ಕೈ ಬಿಡಲಾಗಿತ್ತು. ಆದರೆ ಈಗ ಮತ್ತೊಮ್ಮೆ ಅದೇ ನಿರ್ಧಾರಕ್ಕೆ ಬಂದಿದ್ದು, ಯಾವ ಜಿಲ್ಲೆಗಳಲ್ಲಿ ಶೂ ಧರಿಸಲು ಕಷ್ಟವಾಗುತ್ತದೆಯೋ ಆ ಜಿಲ್ಲೆಗಳ ಪಟ್ಟಿ ಮಾಡಲು ನಿರ್ಧಾರ ಮಾಡಲಾಗಿದೆ.
ಮಳೆ ಹಾಗೂ ಬೇಸಿಗೆ ಸಮಯದಲ್ಲಿ ಚಪ್ಪಲಿ ಧರಿಸಲು ಸುಲಭ ಆಗುತ್ತದೆ. ಅದರಲ್ಲೂ ಹೆಚ್ಚು ಕಾಲ ಶೂ ಧರಿಸುವುದರಿಂದ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಮಳೆಗಾಲದಲ್ಲಿ ಸಾಕ್ಸ್ ಒದ್ದೆ ಆಗಿ ಅದರಿಂದ ವಾಸನೆ ಸಹ ಬರುತ್ತದೆ. ಹಾಗಾಗಿ ಚಪ್ಪಲಿ ಕೊಟ್ಟರೆ ಉತ್ತಮ ಎಂದು ಆಲೋಚನೆ ಮಾಡಲಾಗಿದೆ.
ಅನೇಕ ವರ್ಷಗಳಿಂದ ಸರ್ಕಾರಿ & ಅನುದಾನಿತ ಶಾಲೆಗಳಿಗೆ ಇಲಾಖೆಯಿಂದ ಶೂ ಹಾಗೂ ಎರಡು ಜತೆ ಸಾಕ್ಸ್ ವಿತರಣೆ ಮಾಡಲಾಗುತ್ತದೆ. ಒಂದರಿಂದ 5 ನೇ ತರಗತಿ ವಿದ್ಯಾರ್ಥಿಗೆ ತಲಾ 265 ರೂಪಾಯಿ. 6 ರಿಂದ 8 ನೇ ತರಗತಿ ವಿದ್ಯಾರ್ಥಿಗೆ ತಲಾ 295 ರೂಪಾಯಿ ಹಾಗೂ 9ರಿಂದ 10 ನೇ ತರಗತಿ ವಿದ್ಯಾರ್ಥಿಗೆ ತಲಾ 325 ರೂಪಾಯಿ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: 10 ದಿನ ರಜೆ ಹಾಕಿ ರಹಸ್ಯ ಸ್ಥಳಕ್ಕೆ ತೆರಳಿದ ರಾಮಚಂದ್ರರಾವ್
