ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರಕ್ಕೆ ಹಾಗೂ ಅವುಗಳ ಸಂಯೋಗಕ್ಕೆ ಬಹಳ ಹೆಚ್ಚಿನ ಮಹತ್ವ ಇದೆ. ಈ ಗ್ರಹಗಳ ಸಂಚಾರದ ಕಾರಣದಿಂದ ಮತ್ತು ಸಂಯೋಗದಿಂದ ಅನೇಕ ವಿಶೇಷ ಯೋಗಗಳು ಸೃಷ್ಟಿ ಆಗುತ್ತದೆ. ಈ ಯೋಗಗಳು ಅದೃಷ್ಟವನ್ನ ನೀಡುತ್ತದೆ. ಮುಖ್ಯವಾಗಿ ಗ್ರಹಗಳ ಸಂಯೋಗದಿಂದ ಸೃಷ್ಟಿ ಆಗುವ ಯೋಗದಿಂದ ಜೀವನವೇ ಬದಲಾಗುತ್ತದೆ. ಇದೀಗ, ಶುಕ್ರ ಹಾಗೂ ಬುಧ ಗ್ರಹಗಳ ಸಂಯೋಗವಾಗುತ್ತದೆ. ಈ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗ (Special Yoga) ಸೃಷ್ಟಿ ಆಗಲಿದೆ. ಈ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಎಂಬುದು ಇಲ್ಲಿದೆ.
ಮೇಷ ರಾಶಿ: ನಿಮ್ಮ ವೃತ್ತಿ ಜೀವನ ವೃದ್ಧಿಯಾಗುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರ ಲಾಭದಾಯಕವಾಗಿರುತ್ತದೆ. ದೂರದ ಸಂಬಂಧಿಕರೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಹೆಚ್ಚು ಅನುಕೂಲಕರವಾಗಿರುತ್ತದೆ.
ವೃಷಭ ರಾಶಿ: ಕೆಲಸದಲ್ಲಿ ಸಂಬಳ ಮತ್ತು ಭತ್ಯೆಗಳ ಬಗ್ಗೆ ನಿಮಗೆ ಒಳ್ಳೆಯ ಸುದ್ದಿ ಕೇಳುವಿರಿ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗುತ್ತದೆ. ನಿಮ್ಮ ಸಂಗಾತಿಯ ಸಹಾಯದಿಂದ ನಿಮ್ಮ ಹೆಚ್ಚಿನ ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ನೀವು ಪ್ರತಿಯೊಂದು ಕೆಲಸ ಮತ್ತು ಪ್ರತಿಯೊಂದು ವ್ಯವಹಾರವನ್ನು ಪರಿಶ್ರಮದಿಂದ ಪೂರ್ಣಗೊಳಿಸುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಸಿಗುತ್ತವೆ..
ಕಟಕ ರಾಶಿ: ಈ ಸಮಯದಲ್ಲಿ ಸೆಲೆಬ್ರಿಟಿಗಳೊಂದಿಗಿನ ನಿಮ್ಮ ಸಂಪರ್ಕಗಳು ಹೆಚ್ಚಾಗುತ್ತವೆ. ಬಹಳ ಸಮಯದಿಂದ ಕಾಡಿದ್ದ ನಿಮ್ಮ ಆರೋಗ್ಯ ಸ್ಥಿರವಾಗಿರುತ್ತದೆ. ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸುತ್ತಾರೆ. ಪ್ರೇಮ ವ್ಯವಹಾರಗಳಲ್ಲಿ ನೀವು ಪ್ರಗತಿ ಸಾಧಿಸುವಿರಿ. ಒಟ್ಟಾರೆ ಈ ಯೋಗ ನಿಮ್ಮ ಕನಸುಗಳನ್ನ ನನಸು ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ತುಲಾ ರಾಶಿ: ಕೆಲಸದ ಜೀವನವು ರೋಮಾಂಚಕವಾಗಿರುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ನೀವು ಪಡೆಯುತ್ತೀರಿ. ಆಪ್ತ ಸ್ನೇಹಿತರಿಂದ ನಿಮಗೆ ಹಲವು ರೀತಿಯಲ್ಲಿ ಸಹಾಯ ಮತ್ತು ಬೆಂಬಲ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಪ್ರಗತಿ ಸಾಧಿಸುತ್ತಾರೆ. ಪ್ರೇಮ ವ್ಯವಹಾರಗಳು ಸಂತೋಷದಿಂದ ಮುಂದುವರಿಯುತ್ತವೆ
ಧನಸ್ಸು ರಾಶಿ: ಈ ಯೋಗದ ಕಾರಣದಿಂದ ನಿಮ್ಮ ವೃತ್ತಿಜೀವನವು ಮಹತ್ವ ಪಡೆಯುತ್ತದೆ. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಕಾರ್ಯನಿರತರಾಗಿರುತ್ತೀರಿ. ವ್ಯವಹಾರದಲ್ಲಿ ಲಾಭದ ಕೊರತೆ ಇರುವುದಿಲ್ಲ. ನಿಮ್ಮ ಪೋಷಕರ ಹಸ್ತಕ್ಷೇಪದಿಂದ ಆಸ್ತಿ ವಿವಾದ ಬಗೆಹರಿಯುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಮೋಜು ಮಾಡುತ್ತೀರಿ.
ಇದನ್ನೂ ಓದಿ: ಮನೆಯಲ್ಲಿ ಡ್ರೀಮ್ ಕ್ಯಾಚರ್ ಹಾಕ್ಬೇಕಾ? ಈ ರೂಲ್ಸ್ ಮರಿಬೇಡಿ
