ನವದೆಹಲಿ: ದೇಶದಲ್ಲಿ 2025ರಲ್ಲಿ ಹೊಸದಾಗಿ ನೋಂದಣಿಯಾದ ಎಲ್ಲಾ ವಾಹನಗಳ (Vehicle) ಪೈಕಿ ಶೇಕಡ 8ರಷ್ಟು ಎಲೆಕ್ಟ್ರಿಕ್ ವಾಹನಗಳಿವೆ ಎಂದು ವಾಹನ್ ಪೋರ್ಟಲ್ ದತ್ತಾಂಶದಿಂದ ತಿಳಿದುಬಂದಿದೆ.
23 ಲಕ್ಷ ತಲುಪಿದ ಎಲೆಕ್ಟ್ರಿಕ್ ವಾಹನಗಳ ಮಾರಾಟ
ಒಟ್ಟಾರೆ, ಎಲೆಕ್ಟ್ರಿಕ್ ವಾಹನಗಳ ಮಾರಾಟದ ಸಂಖ್ಯೆ 23 ಲಕ್ಷ ತಲುಪಿದೆ. ಅದರಲ್ಲಿ 12 ಲಕ್ಷದ 80 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಾಲು ಇದ್ದು, ಇದು ಒಟ್ಟಾರೆ ವಾಹನದ ಶೇಕಡ 57ರಷ್ಟಾಗಲಿದೆ. ಉಳಿದಂತೆ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮಾರಾಟ 8 ಲಕ್ಷ ದಾಟಿದ್ದು, ಅದು ಶೇಕಡ 35ರಷ್ಟಾಗಲಿದೆ. ಸಣ್ಣ ಹಾಗೂ ಮಧ್ಯಮ ವಲಯದಲ್ಲಿ 1 ಲಕ್ಷ 75 ಸಾವಿರಕ್ಕೂ ಅಧಿಕ ಕಾರುಗಳ ಮಾರಾಟವಾಗಿದೆ. ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಉತ್ತರ ಪ್ರದೇಶ ಅಗ್ರ ಸ್ಥಾನದಲ್ಲಿದ್ದರೆ, ಆನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿವೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಮುಂದುವರೆದಿದೆ: ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ
