Jai Shankar: 2026 ರ ಬ್ರಿಕ್ಸ್‌ ಶೃಂಗ ಸಭೆಗೆ ಭಾರತ ಅಧ್ಯಕ್ಷತೆ

Jai Shankar inaugurated 2026 bricks logo

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ (Jai Shankar) ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ 2026ರ ಬ್ರಿಕ್ಸ್ ಶೃಂಗಸಭೆಯ ಲಾಂಛನ, ಘೋಷವಾಕ್ಯ ಮತ್ತು ವೆಬ್ ಸೈಟ್ ಗೆ ಚಾಲನೆ ನೀಡಿದ್ದಾರೆ.

ಬ್ರಿಕ್ಸ್ ಶೃಂಗ ಸಭೆಗೆ ಭಾರತ ಅಧ್ಯಕ್ಷತೆ

 2026ರ ಬ್ರಿಕ್ಸ್ ಶೃಂಗದ ಅಧ್ಯಕ್ಷತೆಯನ್ನು ಭಾರತ ವಹಿಸಲಿದ್ದು, ಹೆಚ್ಚಿನ ಜಾಗತಿಕ ಕಲ್ಯಾಣಕ್ಕಾಗಿ ಬ್ರಿಕ್ಸ್ ದೇಶಗಳ ಸಾಮರ್ಥ್ಯವನ್ನು ಒಗ್ಗೂಡಿಸಲು ಭಾರತ ಪ್ರಯತ್ನ ನಡೆಸಲಿದೆ ಎಂದು ತಿಳಿಸಿದರು. ಬ್ರಿಕ್ಸ್ ಒಕ್ಕೂಟ ಈ ಬಾರಿ 20 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಹೊಸ ಮಾರುಕಟ್ಟೆಗಳು ಮತ್ತು ಅಭ್ಯುದಯ ಹೊಂದುತ್ತಿರುವ ಆರ್ಥಿಕತೆಗಳ ನಡುವೆ ಗಮನಾರ್ಹ ಸಹಕಾರ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.

 ಕಾರ್ಯಕ್ರಮದಲ್ಲಿ ಜೈಶಂಕರ್ ಹೇಳಿದ್ದೇನು?

ಬ್ರಿಕ್ಸ್ ತನ್ನ ಧ್ಯೇಯೋದ್ದೇಶಗಳು ಮತ್ತು ಸದಸ್ಯತ್ವವನ್ನು ವಿಸ್ತರಿಸುತ್ತಿದ್ದು, ನಾಗರಿಕ ಕೇಂದ್ರಿತ ಅಭಿವೃದ್ಧಿಗೆ ಆದ್ಯತೆ ನೀಡುತ್ತಲೇ ಬದಲಾಗುತ್ತಿರುವ ಜಾಗತಿಕ ವಾಸ್ತವತೆಗಳಿಗೂ ಪ್ರತಿಕ್ರಿಯೆ ನೀಡುತ್ತಿದೆ. ಮಾತುಕತೆ ಮತ್ತು ಪ್ರಾಯೋಗಿಕ ಸಹಕಾರವನ್ನು ಉತ್ತೇಜಿಸುವುದು ಬ್ರಿಕ್ಸ್ ಹೆಚ್ಚುಗಾರಿಕೆಯಾಗಿದೆ ಎಂದು ಹೇಳಿದರು. ಜಗತ್ತು ಇಂದು ಅತ್ಯಂತ ಸಂಕೀರ್ಣವಾದ ಸವಾಲುಗಳನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಪರಿಣಾಮಕಾರಿ ಬಹುಪಕ್ಷೀಯ ಕ್ರಮಗಳು ಹೆಚ್ಚು ಅಗತ್ಯವಾಗಿವೆ.  ಸಮಕಾಲೀನ ವಾಸ್ತವಗಳನ್ನು ಬಿಂಬಿಸುವ ವಿಶ್ವಸಂಸ್ಥೆ, WTO, ಅಂತಾರಾಷ್ಟ್ರೀಯ ವಿತ್ತ ನಿಧಿ ಮತ್ತು ವಿಶ್ವಬ್ಯಾಂಕ್ ನಂತಹ ಪ್ರಾತಿನಿಧಿಕ ಸಂಸ್ಥೆಗಳು ಮತ್ತು  ಸುಧಾರಿತ ಬಹುಪಕ್ಷೀಯ ನಿಲುವಿಗೆ ಬ್ರಿಕ್ಸ್ ಬದ್ಧವಾಗಿರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಎಸ್‌ಟಿ-ಎಸ್‌ಸಿ ಮೀಸಲಾತಿ ವಿಚಾರ, ರಾಜ್ಯ-ಕೇಂದ್ರಕ್ಕೆ ಸುಪ್ರೀಂ ನೋಟಿಸ್

Leave a Reply

Your email address will not be published. Required fields are marked *