ಬೆಂಡೆಕಾಯಿ ಅಂದ್ರೆ ಅನೇಕ ಜನರು ಮೂಗು ಮುರಿತಾರೆ. ಮಕ್ಕಳು ಮಾತ್ರವಲ್ಲದೇ ದೊಡ್ಡವರು ಸಹ ಈ ಬೆಂಡೆಕಾಯಿ ತಿನ್ನುವುದಿಲ್ಲ. ಆದರೆ ಈ ಹಸಿರು ತರಕಾರಿ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನ ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ರಾತ್ರಿ ನೀರಿನಲ್ಲಿ ಬೆಂಡೆಕಾಯಿ ನೆನಸಿಟ್ಟು ಕುಡಿಯುವುದರಿಂದ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದಾಗಿದೆ. ಹಾಗಾದ್ರೆ ಬೆಂಡೆಕಾಯಿ ನೀರು (Okra Water) ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತದೆ ಎಂಬುದು ಇಲ್ಲಿದೆ.
ಮೂತ್ರಪಿಂಡಗಳಿಗೆ
ಬೆಂಡೆಕಾಯಿ ನೀರು ಮೂತ್ರಪಿಂಡದ ಆರೋಗ್ಯಕ್ಕೆ ಅತ್ಯುತ್ತಮವಾದ ನೈಸರ್ಗಿಕ ಕ್ಲೆನ್ಸರ್ ಎನ್ನಲಾಗುತ್ತದೆ. ಈ ಬೆಂಡೆಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಲೋಳೆಯು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ದೇಹದಿಂದ ಹೆಚ್ಚುವರಿ ನೀರು ಮತ್ತು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ,
ಯಕೃತ್ತಿಗೆ
ಈ ನೀರು ಯಕೃತ್ತಿನ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಬೆಂಡೆಕಾಯಿ ನೀರಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಹಾನಿಯಿಂದ ರಕ್ಷಿಸುತ್ತದೆ.
ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
ಬೆಂಡೆಕಾಯಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಂಡೆಕಾಯಿಯಲ್ಲಿರುವ ಫೈಬರ್ ಮತ್ತು ಲೋಳೆಯು ಕರುಳಿನಲ್ಲಿ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಇದು ಇನ್ಸುಲಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಮತ್ತು ಕೊಲೆಸ್ಟ್ರಾಲ್ಗೆ ಸಹಾಯಕಾರಿ
ಬೆಂಡೆಕಾಯಿ ನೀರು ಕರಗುವ ನಾರಿನಂಶದಿಂದ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಗೆ ಪರಿಹಾರ ನೀಡುತ್ತದೆ. ಈ ನಾರು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಿಸ್ ಮಾಡದೇ ಕುಂಬಳಕಾಯಿ ಬೀಜ ತಿನ್ನಿ, ನೂರಾರು ಆರೋಗ್ಯ ಲಾಭ ನಿಮ್ಮದಾಗುತ್ತೆ
