ಬೆಂಗಳೂರು: ದೇಶದ ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿದ್ದ ಕಾಂತಾರ ಚಾಪ್ಟರ್ ಒನ್ (Kantara Chapter 1) ಸಿನಿಮಾ ಮತ್ತೊಂದು ಹೊಸ ದಾಖಲೆಯನ್ನ ಬರೆದಿದ್ದು, ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.
ಅಧಿಕೃತ ಮಾಹಿತಿ ನೀಡಿದ ಹೊಂಬಾಳೆ
ಈ ವಿಚಾರವಾಗಿ ಕಾಂತಾರ ಚಾಪ್ಟರ್ 1 ಸಿನಿಮಾವನ್ನ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಮಾಹಿತಿ ನೀಡಿದ್ದು, ಕಾಂತಾರ ಚಾಪ್ಟರ್ ಒನ್ ಸಿನಿಮಾ ಅತ್ಯುತ್ತಮ ಸಿನಿಮಾ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಆದರೆ ಈ ಸಿನಿಮಾವನ್ನ ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾವಲ್ಲ. ಇದಕ್ಕೆ ಪ್ರತ್ಯೇಕವಾಗಿ ಅರ್ಜಿ ಹಾಕಲಾಗಿದೆ. ಇದು ಭಾರತಕ್ಕೆ ನಿಜಕ್ಕೂ ಹೆಮ್ಮೆಯ ವಿಚಾರವಾಗಿದ್ದು, ನಮ್ಮ ಕನ್ನಡಿಗರಿಗಂತೂ ಒಂದು ಪಟ್ಟು ಜಾಸ್ತಿ ಸಂತೋಷ ನೀಡುವ ವಿಚಾರವಾಗಿದೆ.
ದಾಖಲೆ ಬರೆದಿದ್ದ ಕಾಂತಾರ ಸಿನಿಮಾ
2022 ರಲ್ಲಿ ಬಿಡುಗಡೆ ಆಗಿದ್ದ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿದ್ದ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಅಲೆಯನ್ನ ಸೃಷ್ಟಿ ಮಾಡಿತ್ತು. ಇದರ ನಂತರ 2025ರಲ್ಲಿ ಬಿಡುಗಡೆ ಆದ ಕಾಂತಾರ ಚಾಪ್ಟರ್ 1 ಕೂಡ ದೊಡ್ಡ ಮಟ್ಟದಲ್ಲಿ ಹೆಸರು ಪಡೆದುಕೊಂಡಿತ್ತು. ಇದಲ್ಲದೇ, ಬಾಲಿವುಡ್ ಸಿನಿಮಾಗಳ ಅನೇಕ ದಾಖಲೆಯನ್ನ ಸಹ ಇದು ಪುಡಿ ಮಾಡಿತ್ತು. ಇದೀಗ ಆಸ್ಕರ್‌ಗೆ ಪ್ರವೇಶ ಮಾಡುವ ಮೂಲಕ ಮತ್ತೊಂದು ದಾಖಲೆ ಬರೆದಿದೆ ಎನ್ನಬಹುದು.
ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಬಂದ್ರು ಸ್ಟಾರ್ ಹೀರೋ, ಕಾವ್ಯ-ಸ್ಪಂದನಾ ಜೊತೆ ಡ್ಯಾನ್ಸ್
