Fruits Benefits: ಚಳಿಗಾಲದಲ್ಲಿ ಈ ಹಣ್ಣುಗಳನ್ನ ಮಿಸ್‌ ಮಾಡದೇ ತಿನ್ನಿ

winter Fruits Benefits must know by everyone

ಕನ್ನಡದಲ್ಲಿ ಒಂದು ಮಾತಿದೆ, ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬುದು. ಹಾಗೆಯೇ, ಕಾಲಗಳು ಬದಲಾದಂತೆ ಅವುಗಳಿಗೆ ಸರಿಹೊಂದುವ ಹಣ್ಣು ಹಾಗೂ ಆಹಾರಗನ್ನ ನಾವು ತಪ್ಪದೇ ಸೇವನೆ ಮಾಡಬೇಕು. ಸದ್ಯ ಭರ್ಜರಿ ಚಳಿಗಾಲ ಆರಂಭ ಆಗಿದೆ. ಈ ಸಮಯದಲ್ಲಿ ಅದಕ್ಕೆ ಸರಿಯಾದ ಹಣ್ಣುಗಳನ್ನ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಹಾಗಾದ್ರೆ ಚಳಿಗಾಲದಲ್ಲಿ ಯಾವೆಲ್ಲಾ ಹಣ್ಣುಗಳನ್ನ (Fruits Benefits) ಸೇವನೆ ಮಾಡಬೇಕು ಹಾಗೂ ಅದರಿಂದ ಯಾವ ರೀತಿ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂಬುದು ಇಲ್ಲಿದೆ.

ಕಿತ್ತಳೆ ಅಥವಾ ಮೋಸಂಬಿ:

ಚಳಿಗಾಲ ರಿಫ್ರೆಶ್ ಸಿಟ್ರಸ್ ಹಣ್ಣುಗಳ ಕಾಲ. ಹಾಗಾಗಿ ಈ ಸಮಯದಲ್ಲಿ ತಪ್ಪದೇ ಕಿತ್ತಳೆ ಹಾಗೂ ಮೋಸಂಬಿ ಹಣ್ಣುಗಳನ್ನ ತಪ್ಪದೇ ಸೇವನೆ ಮಾಡಬೇಕು. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಚರ್ಮದ ಆರೋಗ್ಯವನ್ನು ಕಾಪಾಡಲು ಮತ್ತು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಕಿತ್ತಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು:

ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳು ಜಾಸ್ತಿ ಇದೆ

ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ

ಕಬ್ಬಿಣದ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ

ಉಸಿರಾಟದ ಸೋಂಕುಗಳನ್ನು ಕಡಿಮೆ ಮಾಡುತ್ತದೆ

ಪೇರಳೆ ಹಣ್ಣು

ವಿಟಮಿನ್ ಸಿ ಯನ್ನ ಅತ್ಯಂತ ಶ್ರೀಮಂತವಾಗಿ ಹೊಂದಿರುವ ಪೇರಳೆ ಹಣ್ಣು ಚಳಿಗಾಲದಲ್ಲಿ ಆರೋಗ್ಯವನ್ನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೇರಳವಾಗಿ ಹೆಚ್ಚಿಸುತ್ತದೆ.

ಇದರಲ್ಲಿರುವ ಹೆಚ್ಚಿನ ನಾರಿನ ಅಂಶವು ನಿಮ್ಮ ಜೀರ್ಣಕ್ರಿಯೆಯನ್ನು ಸರಾಗವಾಗಿಡುತ್ತದೆ, ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸುತ್ತದೆ ಮತ್ತು ಕರುಳಿನ ಸೂಕ್ಷ್ಮಜೀವಿಗೆ ಹಾನಿ ಆಗದಂತೆ ತಡೆಯುತ್ತದೆ. ಇದರಲ್ಲಿ ನಾರಿನಾಂಶ ಜಾಸ್ತಿ ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.

ಸೇಬು ಹಣ್ಣು

ಚಳಿಗಾಲದಲ್ಲಿ ಸಿಗುವ ಸೇಬುಗಳು ಪಾಲಿಫಿನಾಲ್‌ಗಳನ್ನ ಜಾಸ್ತಿ ಹೊಂದಿರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ಇದು ತುಂಬಾ ಅಗತ್ಯವಾಗುದೆ. ಅಲ್ಲದೇ, ಈ ಸೇಬುಗಳು ಫೈಬರ್‌ನಿಂದ ಸಮೃದ್ಧವಾಗಿವೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಜಾಸ್ತಿ ಆಗಿದೆಯಾ? ಈ ಮನೆಮದ್ದು ಮಾಡಿ

Leave a Reply

Your email address will not be published. Required fields are marked *