Narenda Modi: ನರೇಂದ್ರ ಮೋದಿಗೆ ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ ಪ್ರಶಸ್ತಿ

Narenda Modi thanks Ethiopian people for the award

ಪ್ರಧಾನಿ ನರೇಂದ್ರ ಮೋದಿ (Narenda Modi) ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ಪ್ರಶಸ್ತಿಯನ್ನು ಇಥಿಯೋಪಿಯಾದ ಸಹವರ್ತಿ ಡಾ.ಅಬಿ ಅಹ್ಮದ್ ಅಲಿ ಅವರು ಪ್ರಧಾನ ಮಾಡಿದ್ದಾರೆ.

ಈ ಪ್ರಶಸ್ತಿ ಭಾರತೀಯರಿಗೆ ಸಲ್ಲುತ್ತದೆ

ಪ್ರಧಾನಿ ಅವರು  ಭಾರತದೊಂದಿಗೆ ಐತಿಹಾಸಿಕ ಬಾಂಧವ್ಯ ಹಂಚಿಕೊಂಡಿರುವ ಆಫ್ರಿಕನ್ ದೇಶಕ್ಕೆ ಎರಡು ದಿನಗಳ ಭೇಟಿ ನೀಡಿದ್ದು, ಭಾರತ-ಇಥಿಯೋಪಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಅಸಾಧಾರಣ ಕೊಡುಗೆ ನೀಡಿದ ಮತ್ತು ಜಾಗತಿಕ ರಾಜನೀತಿಜ್ಞರಾಗಿ ದೂರದೃಷ್ಟಿಯ ನಾಯಕತ್ವಕ್ಕಾಗಿ ಇಥಿಯೋಪಿಯಾದ ರಾಜಧಾನಿ ಆಡ್ಡೀಸ್ ಅಬಾಬಾದ ಅಡಿಸ್ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ನರೇಂದ್ರ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ , ಪ್ರಾಚೀನ ಕಾಲದಿಂದಲೂ ದ್ವಿಪಕ್ಷೀಯ ಸಂಬಂಧವನ್ನು ಪೋಷಿಸಿದ ಭಾರತೀಯರು ಮತ್ತು ಇಥಿಯೋಪಿಯನ್ನರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸಿದರು.

ಒಮಾನ್‌ಗೆ ಭೇಟಿ ನೀಡಿದ ಪ್ರಧಾನಿ

ಜತೆಗೆ ಈ ಗೌರವವನ್ನು ಪಡೆದಿದ್ದಕ್ಕಾಗಿ 1.4 ಶತಕೋಟಿ ಭಾರತೀಯರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ತಿಳಿಸಿದರು. ಪ್ರಧಾನಿಗೆ ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ ಪ್ರಶಸ್ತಿ ಈ ಮಧ್ಯೆ,  ಪ್ರಧಾನಿ ನರೇಂದ್ರ ಮೋದಿ, ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತದಲ್ಲಿ ನಿನ್ನೆ ಸಂಜೆ ಒಮಾನ್ ಗೆ ಆಗಮಿಸಿದ್ದಾರೆ. ಒಮಾನ್ ಸುಲ್ತಾನರ ಮುಖ್ಯಸ್ಥ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಒಮಾನ್ ಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉನ್ನತ ಮಟ್ಟದ ನಿಯೋಗವೂ ಇರಲಿದೆ. ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಒಮಾನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

ಇದನ್ನೂ ಓದಿ: ಭಾರತದಲ್ಲಿ ಕಡಿಮೆ ಆಯ್ತು ನಿರುದ್ಯೋಗ

Leave a Reply

Your email address will not be published. Required fields are marked *