Unemployment: ಭಾರತದಲ್ಲಿ ಕಡಿಮೆ ಆಯ್ತು ನಿರುದ್ಯೋಗ

Unemployment in india decreased

ಕಳೆದ ನವೆಂಬರ್ ತಿಂಗಳಿನಲ್ಲಿ ಭಾರತದ ನಿರುದ್ಯೋಗ (Unemployment) ದರ ಶೇಕಡ 4.7ರಷ್ಟು ಇಳಿಕೆಯಾಗಿದೆ. ಇದು ಏಪ್ರಿಲ್ ನಿಂದೀಚೆಗೆ ಅತಿ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದ್ದು, 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕುತ್ತಿವೆ.  ಸಾಂಖಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಮಾಸಿಕ ದುಡಿಯುವ ಪಡೆ ಮತ್ತು ನಿರುದ್ಯೋಗ ದರದ  ಅಂಕಿ-ಅಂಶಗಳಂತೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಪ್ರಮಾಣ ಶೇಕಡ 3.9ಕ್ಕೆಏರಿದ್ದರೆ, ನಗರ ಪ್ರದೇಶಗಳಲ್ಲಿ ಶೇಕಡ 6.5ಕ್ಕೆ ಇಳಿಕೆಯಾಗಿದೆ.  ಇದೇ ವೇಳೆ ದುಡಿಯುವ ಪಡೆ ಕೆಲಸದಲ್ಲಿ ಪಾಲ್ಗೊಳ್ಳುವ ಪ್ರಮಾಣ ಶೇಕಡ 55.8ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಉದ್ಯೋಗಿಗಳಿಗೆ ಗುಡ್‌ನ್ಯೂಸ್‌, ಲೋಕಸಭೆಯಲ್ಲಿ ಹೊಸ ಬಿಲ್ ಮಂಡನೆ

Leave a Reply

Your email address will not be published. Required fields are marked *