ಟಾಲಿವುಡ್ (Tollywood) ನಟ, ಮೆಗಾ ಹೀರೋ ರಾಮ್ ಚರಣ್ (Ram Charan) ಅಭಿನಯದ ಗೇಮ್ ಚೇಂಜರ್ ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ರಿಲೀಸ್ಗೆ ಕೆಲವೇ ದಿನಗಳು ಬಾಕಿ ಇರುವಾಗ್ಲೆ ‘ಗೇಮ್ ಚೆಂಜರ್’ ಟ್ರೇಲರ್ (Game Changer Trailer) ಕೂಡ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ರಾಮ್ ಚರಣ್ ಮಾಸ್ ಅವತಾರ, ಸಖತ್ ಡೈಲಾಗ್ಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾ ಬೆನಿಫಿಟ್ ಶೋ ಹಾಗೂ ಟಿಕೆಟ್ ದರ ಏರಿಕೆಗೆ ಆಂಧ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಬೆನಿಫಿಟ್ ಶೋ, ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್!
ಗೇಮ್ ಚೇಂಜರ್ ಸಿನಿಮಾ ಬೆನಿಫಿಟ್ ಶೋನ ಟಿಕೆಟ್ ದರವನ್ನ 600 ರೂಪಾಯಿಗೆ ನಿಗದಿಪಡಿಸಲಾಗಿದೆ. ಅದಾದ ಬಳಿಕ 11 ರಿಂದ 23 ರವರೆಗೆ 6 ಶೋಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜನವರಿ 10 ರಿಂದ ಜನವರಿ 23 ರವರೆಗೆ 5 ಶೋಗಳ ಟಿಕೆಟ್ ದರವನ್ನ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಇದರ ಪ್ರಕಾರ ಮಲ್ಟಿಪ್ಲೆಕ್ಸ್ ಟಿಕೆಟ್ ಗೆ ಹೆಚ್ಚುವರಿಯಾಗಿ 175 ರೂಪಾಯಿಗಳನ್ನು ಹೆಚ್ಚಿಸಬಹುದು. ಸಿಂಗಲ್ ಸ್ಕ್ರೀನ್ ಗಳಲ್ಲಿ ಟಿಕೆಟ್‌ಗೆ ಹೆಚ್ಚುವರಿಯಾಗಿ 135 ರೂಪಾಯಿಗಳನ್ನು ಹೆಚ್ಚಿಸಬಹುದು ಎಂದ ಆಂಧ್ರ ಸರ್ಕಾರ ಆದೇಶ ಹೊರಡಿಸಿದೆ.
ಜನವರಿ 10ಕ್ಕೆ ಸಿನಿಮಾ ರಿಲೀಸ್
ಈಗಾಗಲೇ ಭಾರೀ ಹೈಪ್ ಕ್ರಿಯೇಟ್ ಮಾಡಿರುವ ಗೇಮ್ ಚೇಂಜರ್ ಸಿನಿಮಾ ಸಂಕ್ರಾಂತಿ ಉಡುಗೊರೆಯಾಗಿ ಜನವರಿ 10 ರಂದು ವಿಶ್ವದಾದ್ಯಂತ ರಿಲೀಸ್ ಆಗ್ತಿದೆ. ತೆಲುಗು ಅಲ್ಲದೆ, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ.
ಚಿತ್ರತಂಡದಿಂದ ಭರ್ಜರಿ ಪ್ರಚಾರ!
ರಾಮ್ ಚರಣ್ ಸೇರಿದಂತೆ ಇಡೀ ಚಿತ್ರತಂಡ ದೇಶದಾದ್ಯಂತ ಭರ್ಜರಿ ಪ್ರಚಾರ ಮಾಡ್ತಿದೆ. ಈಗಾಗಲೇ ಅಮೆರಿಕದ ಡಲ್ಲಾಸ್ ನಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೀಗ ಮತ್ತೊಂದು ಪ್ರಚಾರ ಕಾರ್ಯಕ್ರಮವನ್ನು ಎಪಿಯ ರಾಜಮಂಡ್ರಿಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಆಗಮಿಸಿದ್ರು.
ನಟ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ಗೆ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ನಟಿ ಅಂಜಲಿ ಮತ್ತು ಶ್ರೀಕಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಸಂಭಾವನೆ ಇಳಿಸಿದ ರಾಮ್ ಚರಣ್!
‘ಗೇಮ್ ಚೇಂಜರ್’ ಚಿತ್ರಕ್ಕೆ ರಾಮ್ ಚರಣ್ 100 ಕೋಟಿ ಪಡೆಯುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಒಪ್ಪಂದವನ್ನೂ ಸಹ ಮಾಡಿಕೊಳ್ಳಲಾಗಿತ್ತು. ಆದ್ರೆ ಈಗ ರಾಮ್ ಚರಣ್ ಪಡೆದಿರುವುದು ಕೇವಲ 65 ಕೋಟಿ ರೂ. ಸಂಭಾವನೆ ಮಾತ್ರವಂತೆ.