EdCIL: ಕನ್ಸಲ್ಟಂಟ್ ಸೇರಿ 31 ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

EdCIL recruitment for 31 pots here is how to apply

ಬೆಂಗಳೂರು: ಎಜುಕೇಷನಲ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ (EdCIL) ಸಂಸ್ಥೆ 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಕನ್ಸಲ್ಟಂಟ್, MTS ಸೇರಿದಂತೆ ಒಟ್ಟು 31 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಹೀಗಿದೆ.

ಕೆಲಸದ ವಿವರ:

ಸಂಸ್ಥೆ: ಎಜುಕೇಷನಲ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್

ಒಟ್ಟು ಹುದ್ದೆಗಳು: 31

ಸ್ಥಳ: ನೋಯ್ಡಾ – ಉತ್ತರ ಪ್ರದೇಶ

ಹುದ್ದೆಗಳು: ಕನ್ಸಲ್ಟಂಟ್, MTS

ವೇತನ: ₹35,000 ರಿಂದ ₹1,50,000 ರೂ

ವಿದ್ಯಾರ್ಹತೆ: 12ನೇ ತರಗತಿ, ಡಿಪ್ಲೊಮಾ / ಪದವಿ, BE/B.Tech, ಮಾಸ್ಟರ್ಸ್ ಡಿಗ್ರಿ / MBA, ಪೋಸ್ಟ್ ಗ್ರಾಜುಯೇಷನ್ ಡಿಪ್ಲೊಮಾ, CA / Ph.D

ಅರ್ಜಿಸಲ್ಲಿಸುವ ವಿಧಾನ

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಅದರಲ್ಲಿ ಅಗತ್ಯ ದಾಖಲೆಗಳನ್ನ ಸರಿಯಾಗಿ ನಮೂದಿಸಿರಬೇಕು. ನಂತರ ಅದನ್ನ [merite@edcil.co.in](mailto:merite@edcil.co.in) ಅಥವಾ [tsgmerite@edcil.co.in](mailto:tsgmerite@edcil.co.in) ಗೆ ಇ-ಮೇಲ್ ಮೂಲಕ ಡಿಸೆಂಬರ್ 10ರ ಒಳಗೆ ಕಳುಹಿಸಬೇಕು.

ಇದನ್ನೂ ಓದಿ: ಬರೋಬ್ಬರಿ 124 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಿಬಿಎಸ್‌ಯಿಂದ ಬಂಪರ್‌ ಆಫರ್

Leave a Reply

Your email address will not be published. Required fields are marked *