ಯಾದಗಿರಿ

ಪೊಲೀಸರನ್ನೇ ಹನಿ ಟ್ರ್ಯಾಪ್ ಖೆಡ್ಡಾಗೆ ಕೆಡವಿದ ಖತರ್ನಾಕ ಮಹಿಳೆ! ಬರೊಬ್ಬರಿ 8 ಲಕ್ಷ ರೂ. ಹಣ ವಸೂಲು

lady made honeytrap to police

ನಗರದಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ (Honey Trap Case) ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಉದ್ಯಮಿಗಳು (Business Man) ರಾಜಕಾರಣಿಗಳು (Politicians) ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಖತರ್ನಾಕ್ ಮಹಿಳೆ ಪೊಲೀಸ್ ಕಾನ್ಸಟೇಬಲ್‌ ಒಬ್ಬರನ್ನು ಹನಿ ಟ್ರ್ಯಾಪ್ ಖೆಡ್ಡಾಗೆ ಖೆಡವಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.

ಪಲೀಸನ ಪತ್ನಿಂದ 8 ಲಕ್ಷ ಹಣ ವಸೂಲು

ಹೌದು, ಕಲಬುರಗಿಯ ಸೆನ್ ಪೊಲೀಸ್ ಠಾಣೆಯ ಕಾನ್ಸಟೇಬಲ್‌ನನ್ನು ಪೂಜಾ ಡೊಂಗರಗಾಂವ್ ಎಂಬ ಮಹಿಳೆ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದಾಳೆ. ಆ ಬಳಿಕ ಕಾನ್ಸಟೇಬಲ್‌ ಪತ್ನಿಯಿಂದ ಎಂಟು ಲಕ್ಷ ಹಣ ವಸೂಲಿ ಮಾಡಿದ್ದಾಳಂತೆ!

ಪೂಜಾ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸನ ಪತ್ನಿ

ಆರೋಪಿ ಪೂಜಾ ಡೊಂಗರಗಾಂವ್ ಕಾಟಕ್ಕೆ ಬೇಸತ್ತು ಕಾನ್ಸಟೇಬಲ್‌ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಹಿಂದೆ ಕಲಬುರಗಿಯಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಈ ಪೂಜಾ ಭಾಗಿಯಾಗಿದ್ದಳು. ಪೂಜಾ ಮತ್ತು ಅಮರ್ ಸಿಂಗ್ ಎಂಬುವರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟು 8 ಲಕ್ಷ ಹಣ ವಸೂಲಿ ಮಾಡಿದ್ದಳು. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಇನ್ನೊಂದು ಹನಿಟ್ರ್ಯಾಪ್ ಪ್ರಕರಣದಲ್ಲೂ ಈ ಪೂಜಾ ಭಾಗಿಯಾಗಿದ್ದಳು. ಈ ಪ್ರಕರಣದಲ್ಲಿ ಪ್ರಭು ಹಿರೇಮಠ, ರಾಜು ಲೇಂಗಟಿ ಪ್ರಮುಖ ಆರೋಪಿಗಳಾಗಿದ್ದರು. ಆರೋಪಿಗಳು ಹನಿಟ್ರ್ಯಾಪ್​ ಮೂಲಕ ಉದ್ಯಮಿ ವಿನೋದಕುಮಾರ ಖೇಣಿ ಅವರಿಂದ 34 ಲಕ್ಷ ರೂ. ದೋಚಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ರಾಜು ಲೇಂಗಟಿ, ಪ್ರಭು ಹಿರೇಮಠ ಸೇರಿಂದತೆ ಏಳು ಜನರ ವಿರುದ್ಧ ದೂರು ದಾಖಲಾಗಿತ್ತು.

ವಿನೋದಕುಮಾರ್ ಅವರಿಗೆ ಮೆಸೆಜ್​ ಮಾಡಿದ್ದ ಪೂಜಾ

ಉದ್ಯಮಿ ವಿನೋದಕುಮಾರ ಖೇಣಿ ವ್ಯಾಪಾರಿಯಾಗಿದ್ದು, ಇವರ ಅಂಗಡಿಗೆ ಆರೋಪಿ ಪ್ರಭು ಹಿರೇಮಠ ಖಾಯಂ ಬರುತ್ತಿದ್ದನು. ಆರೋಪಿ ಪ್ರಭು ಹಿರೇಮಠ ಖಾಯಂ ಗ್ರಾಹಕನಾಗಿದ್ದರಿಂದ ಉದ್ಯಮಿ ವಿನೋದಕಮಾರ್​ ಆತನ ಜೊತೆ ಗೆಳೆತನ ಬೆಳಸಿದ್ದರು. ಈ ನಡುವೆ, ಇದೇ ವರ್ಷ ಮೇನಲ್ಲಿ ಈ ಪೂಜಾ ವಿನೋದಕುಮಾರ್ ಅವರಿಗೆ ಮೆಸೆಜ್​ ಮಾಡಿದ್ದಾಳೆ. ಆದರೆ, ಈ ಮೆಸೆಜ್‌ಗಳಿಗೆ ವಿನೋದಕುಮಾರ್​ ರಿಪ್ಲೈ ಮಾಡಿರಲ್ಲ.

You may also like

makar sankranti
ಯಾದಗಿರಿ

ಮಕರ ಸಂಕ್ರಾಂತಿಯಂದು ಈ ಐದು ಮಂತ್ರವನ್ನು ಪಠಿಸಿ! ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತೆ!

ಮಕರ ಸಂಕ್ರಾಂತಿ (Makara Sankranti) ಹಿಂದೂ ಧರ್ಮದಲ್ಲಿ (Hindu Religion) ಒಂದು ಪ್ರಮುಖ ಹಬ್ಬವಾಗಿದೆ (Festival). ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ನಂತರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.