Dhana Samruddhi Yoga: ಶುಕ್ರ-ಗುರು ಸಂಯೋಗದಿಂದ ಈ ರಾಶಿಯವರಿಗೆ ಲಾಟರಿ

astrology venus transit dhana samruddhi yoga

ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಸುಖ-ಸಂಪತ್ತು, ಐಷಾರಾಮಿ ಜೀವನದ ಗ್ರಹ  ಎಂದರೆ ಅದು ಶುಕ್ರ. ಈ ಶುಕ್ರ ನಮ್ಮ ಜಾತಕದಲ್ಲಿ ಉತ್ತಮವಾದ ಸ್ಥಾನದಲ್ಲಿ ಇದ್ದರೆ ಅದರಿಂದ ಒಳ್ಳೆಯ ಫಲಗಳನ್ನ ಪಡೆದುಕೊಳ್ಳಬಹುದು. ಈ ಶುಕ್ರ ಆಗಾಗ ತನ್ನ ರಾಶಿ ಬದಲಾವಣೆ ಮಾಡುತ್ತಿರುತ್ತದೆ. ಅದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೂ ಆಗುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಶುಕ್ರನು ತನ್ನ ಸ್ಥಾನವನ್ನು ಬದಲಾಯಿಸಿ, ಗುರು ಅಧಿಪತ್ಯದ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ.  ಈ ಶುಕ್ರ ಸಂಚಾರದ ಕಾರಣದಿಂದ ಗುರು ಹಾಗೂ ಶುಕ್ರ ಸಂಯೋಗವಾಗುತ್ತದೆ, ಈ ಸಂಯೋಗದಿಂದ ಧನ ಸಮೃದ್ಧಿಯ ಯೋಗ ಸೃಷ್ಟಿ (Dhana Samruddhi Yoga) ಆಗುತ್ತದೆ. ಈ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

ಮೇಷ ರಾಶಿ: ಸಕಾರಾತ್ಮಕತೆ ಮತ್ತು ಹೊಸ ಶಕ್ತಿಯ ಪೂರ್ಣ ಸಮಯ ಇದಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆ ಇಡಿ ಮತ್ತು ಮುಂದೆ ಸಾಗುತ್ತಿರಿ. ಆರೋಗ್ಯದ ವಿಷಯದಲ್ಲಿ, ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮರೆಯಬೇಡಿ. ಧ್ಯಾನ ಮತ್ತು ಯೋಗದಲ್ಲಿ ಸಮಯ ಕಳೆಯುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ನಿಮಗೆ ಉಲ್ಲಾಸ ಸಿಗುತ್ತದೆ.

ವೃಷಭ ರಾಶಿ: ಆರ್ಥಿಕ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಹೊಂದುವಿರಿ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯಗಳಿಂದ ಆರ್ಥಿಕ ಲಾಭಗಳನ್ನು ಪಡೆಯಬಹುದು. ವೃತ್ತಿಪರ ಉದ್ಯೋಗದಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ. ಬಂಧು ಮಿತ್ರರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುತ್ತೀರಿ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ವ್ಯಾಪಾರದಲ್ಲಿ ಸ್ನೇಹಿತರಿಂದ ಸಹಾಯ ಸಿಗುತ್ತದೆ.

ಧನಸ್ಸು ರಾಶಿ: ಇದೇ ರಾಶಿಯಲ್ಲಿ ಗುರು ಹಾಗೂ ಶುಕ್ರ ಸಂಯೋಗವಾಗುತ್ತದೆ. ಇದರಿಂದ ತುಂಬಾ ಲಾಭ ಸಿಗುತ್ತದೆ. ದೂರದ ಪ್ರದೇಶಗಳಿಂದ ಆತ್ಮೀಯರಿಂದ ಮಹತ್ವದ ಮಾಹಿತಿ ದೊರೆಯುತ್ತದೆ. ಕೈಗೊಂಡ ಕಾರ್ಯಕ್ರಮಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸ್ಥಿರಾಸ್ತಿ ವಿವಾದಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಆರ್ಥಿಕ ಸ್ಥಿತಿಯು ಹಿಂದಿನಿಂದ ಸುಧಾರಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಸಂತೋಷದಿಂದ ಸಮಯ ಕಳೆಯಬಹುದು ಉದ್ಯೋಗದಲ್ಲಿ ಮೇಲಾಧಿಕಾರಿಗಳ ಬೆಂಬಲ ದೊರೆಯುತ್ತದೆ.

ಇದನ್ನೂ ಓದಿ: ಅಡುಗೆ ಮಾಡುವಾಗ ಈ ರೂಲ್ಸ್‌ ಫಾಲೋ ಮಾಡಿ ಶ್ರೀಮಂತಿಕೆ ಬರುತ್ತೆ

Leave a Reply

Your email address will not be published. Required fields are marked *