BJP: ಸದನದ ಬಾವಿಗಿಳಿದು ಬಿಜೆಪಿ ಪ್ರತಿಭಟನೆ, ತಿಮ್ಮಾಪುರ ರಾಜೀನಾಮೆಗೆ ಆಗ್ರಹ

Bjp asking for resignation of minister timmapura

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ (BJP) ವಿಧಾನಸಭೆಯಲ್ಲಿಂದು  ಬಾವಿಗಿಳಿದು ಧರಣಿ ನಡೆಸಿದೆ.

ಸಚಿವರ ರಾಜೀನಾಮೆಗೆ ಒತ್ತಾಯ

ಈ ಸಂದರ್ಭದಲ್ಲಿ   ಅಬಕಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು. ಈ ವೇಳೆ ಆರ್. ಅಶೋಕ,  ಈ ಹಿಂದೆ  ಮಾಜಿ ಸಚಿವ  ಬಿ. ನಾಗೇಂದ್ರ ಅವರ ವಿರುದ್ಧ ಭ್ರಷ್ಚ್ರಾಚಾರದ ಆರೋಪ ಎದುರಾದಾಗ  ಅವರ ರಾಜೀನಾಮೆಯನ್ನು ಪಡೆದುಕೊಳ್ಳಲಾಯಿತು. ಆದರೆ ತಿಮ್ಮಾಪುರ ಅವರ ರಾಜೀನಾಮೆ ಪಡೆಯಲು  ಹಿಂದೇಟು  ಹಾಕುತ್ತಿದೆ ಎಂದು ಆರೋಪಿಸಿದರು.

 ಸಭಾಧ್ಯಕ್ಷ ಯು.ಟಿ. ಖಾದರ್, ಈ ವಿಚಾರವಾಗಿ ಮಧ್ಯಾಹ್ನದ ಬಳಿಕ  ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ  ಧರಣಿಯನ್ನು ಹಿಂಪಡೆಯಲಾಯಿತು.  ಇದಕ್ಕೂ ಮುನ್ನ ಸದನದಲ್ಲಿ ಪದ್ಮಪ್ರಶಸ್ತಿ ಪುರಸ್ಕೃತರು  ಹಾಗೂ ಉತ್ತಮ ಸೇವೆಗಾಗಿ ರಾಷ್ಟ್ರಪತಿಯವರ ಪದಕ ಪಡೆದ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿದರು .

ಇದನ್ನೂ ಓದಿ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿಭಟನೆ, ಅಬಕಾರಿ ಹಗರಣ ಸಿಬಿಐ ತನಿಖೆಗೆ ಆಗ್ರಹ

Leave a Reply

Your email address will not be published. Required fields are marked *