Pralhad Joshi: ದಾವೋಸ್‌ನಿಂದ ಮರಳಿ ಬಂದ ಪ್ರಲ್ಹಾದ ಜೋಶಿಗೆ ಅದ್ದೂರಿ ಸ್ವಾಗತ

Pralhad Joshi warmly welcomed after davos visit

ದಾವೋಸ್:  ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಯಶಸ್ವಿ ಅಧಿವೇಶನದ ಬಳಿಕ ತವರಿಗೆ ಆಗಮಿಸಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರಿಗೆ ಹುಬ್ಬಳ್ಳಿಯಲ್ಲಿಂದು ಅದ್ಧೂರಿ ಸ್ವಾಗತ ಕೋರಲಾಗಿದೆ.  

ಜಿಲ್ಲೆಯ ಪ್ರಮುಖರಿಂದ ಸ್ವಾಗತ

ವಿಮಾನ ನಿಲ್ದಾಣದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಜಿಲ್ಲೆಯ ಪ್ರಮುಖರು, ಬಿಜೆಪಿ ಮುಖಂಡರು, ಅಭಿಮಾನಿಗಳು ಸ್ವಾಗತ ಕೋರಿದರು.  ದಾವೋಸ್ ನಲ್ಲಿ ಐದು ದಿನಗಳ ಕಾಲ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ವಿಶೇಷ ಸಭೆ, ಯಶಸ್ವಿ ಅಧಿವೇಶನ ನಡೆಸಿ, ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. 

ವಿಶೇಷ ಪ್ರತಿನಿಧಿಯಾಗಿ ಹೋಗಿದ್ದ ಜೋಶಿ

ರಾಜ್ಯದಿಂದ ತೆರಳಿದ ಮೊದಲ ಕೇಂದ್ರ ಸಚಿವ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಲ್ಹಾದ ಜೋಶಿ, ವಿಶ್ವಮಟ್ಟದಲ್ಲಿ ಮಹತ್ವ ಪಡೆದಿರುವ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಕೇಂದ್ರ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿಭಟನೆ, ಅಬಕಾರಿ ಹಗರಣ ಸಿಬಿಐ ತನಿಖೆಗೆ ಆಗ್ರಹ

Leave a Reply

Your email address will not be published. Required fields are marked *