ಕಬಾಬ್ ಎಂದರೆ ಎಲ್ಲರಿಗೂ ನಾನ್ ವೆಜ್ ಅಂತ ಅನಿಸುತ್ತೆ, ಆದ್ರೆ ನಾವು ವೆಜ್ ಕಬಾಬ್ ಸಹ ಮಾಡಿ ತಿನ್ನಬಹುದು. ಅದರಲ್ಲೂ ವೆರೈಟಿ ವೆರೈಟಿ ಕಬಾಬ್‌ಗಳನ್ನ ಮಾಡಬಹುದು. ಸಂಜೆ ಸ್ನ್ಯಾಕ್ಸ್ ಏನಪ್ಪಾ ಮಾಡೋದು ಅಂತ ಯೋಚನೆ ಮಾಡುತ್ತಿದ್ದರೆ ನಿಮಗಾಗಿ ಪನೀರ್ ಪಾಪಡ್ ಕಬಾಬ್ (Paneer Papad Kabab) ರೆಸಿಪಿ ಇಲ್ಲಿದೆ.
ಕಬಾಬ್ ಮಿಶ್ರಣಕ್ಕಾಗಿ:
1 ಕಪ್ ಪನ್ನೀರ್ (ತುರಿದುಕೊಳ್ಳಿ)
1 ಬೇಯಿಸಿದ ಆಲೂಗಡ್ಡೆ (ಅದನ್ನ ಮ್ಯಾಶ್ ಮಾಡಿಕೊಳ್ಳಿ)
1 ಹಸಿ ಮೆಣಸಿನಕಾಯಿ
1 ಟೀಸ್ಪೂನ್ ಶುಂಠಿ ಪೇಸ್ಟ್
1/2 ಟೀಸ್ಪೂನ್ ಚಾಟ್ ಮಸಾಲ
1/2 ಟೀಸ್ಪೂನ್ ಜೀರಿಗೆ ಪುಡಿ (ಇದನ್ನ ಹುರಿದು ಪುಡಿ ಮಾಡಿರಬೇಕು)
1/4 ಟೀಸ್ಪೂನ್ ಕರಿಮೆಣಸು
1 ಚಮಚ ಕೊತ್ತಂಬರಿ ಎಲೆಗಳು (ಸಣ್ಣಗೆ ಕತ್ತರಿಸಿಕೊಳ್ಳಿ)
ಉಪ್ಪು – ರುಚಿಗೆ ತಕ್ಕಷ್ಟು
ಕಾರ್ನ್‌ಫ್ಲೋರ್ – 2 ಚಮಚ
ಉದ್ದಿನ ಬೇಳೆ – 2–3 ಚಮಚ (ಹುರಿದು ಪುಡಿ ಮಾಡಿಕೊಳ್ಳಿ)
ಕಾರ್ನ್‌ಫ್ಲೋರ್ ಸ್ಲರಿ – 2 ಚಮಚ
ಹಪ್ಪಳ: ಪುಡಿ ಪುಡಿ ಮಾಡಿಕೊಳ್ಳಿ

ಪನೀರ್ ಪಾಪಡ್ ಕೆ ಕಬಾಬ್ ಮಾಡುವ ಸುಲಭ ವಿಧಾನ
ಕಬಾಬ್ ಮಿಶ್ರಣವನ್ನು ತಯಾರಿಸುವುದು ಹೇಗೆ?
ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ತುರಿದುಕೊಂಡಿರುವ ಪನೀರ್, ಹಿಸುಕಿಕೊಂಡಿರುವ ಆಲೂಗಡ್ಡೆ, ಹಸಿರ ಮೆಣಸಿನಕಾಯಿ, ಶುಂಠಿ ಪೇಸ್ಟ್, ಚಾಟ್ ಮಸಾಲ, ಜೀರಿಗೆ ಪುಡಿ, ಕರಿಮೆಣಸು, ಕತ್ತರಿಸಿದ ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಈಗ ಅದಕ್ಕೆ ಕಾರ್ನ್‌ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟಿಗೆ ನೀರು ಜಾಸ್ತಿ ಹಾಕಬಾರದು, ಹಾಗೆಯೇ ತುಂಬಾ ಗಟ್ಟಿಯಾಗಿ ಸಹ ಕಲಸಬಾರದು. ಕಬಾಬ್ ಮಾಡುವಾಗ ಪುಡಿ ಪುಡಿ ಆಗದಂತೆ ಆಕಾರಕ್ಕೆ ಬರುವ ರೀತಿ ಮಾಡಿಕೊಳ್ಳಿ.
ಈಗ ಈ ಮಿಶ್ರಣವನ್ನ ಕಬಾಬ್ ಆಕಾರದಲ್ಲಿ ಮಾಡಿಕೊಳ್ಳಿ. ನಿಮಗೆ ರೌಂಡ್ ಆಕಾರ ಬೇಕು ಎಂದರೆ ಆ ರೀತಿ ಮಾಡಿ, ಇಲ್ಲ ಪ್ಯಾಟೀಸ್ ರೀತಿ ಚೌಕಾಕಾರದಲ್ಲಿ ಸಹ ಮಾಡಬಹುದು. ಈಗ ಪ್ರತಿಯೊಂದು ಕಬಾಬ್ ಅನ್ನು ಕಾರ್ನ್‌ಫ್ಲೋರ್ ಸ್ಲರಿಯಲ್ಲಿ ಅದ್ದಿ. ಈಗ ಪುಡಿ ಮಾಡಿದ ಹಪ್ಪಳದ ಮೇಲೆ ಈ ಕಬಾಬ್ ಹಾಕಿ, ಪೂರ್ತಿಯಾಗಿ ಲೇಪಿಸಿ.
ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಕಾದ ನಂತರ, ಕಬಾಬ್‌ಗಳನ್ನು ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಡೀಪ್ ಫ್ರೈ ಮಾಡಿ. ನಿಮಗೆ ಡೀಪ್ ಫ್ರೈ ಮಾಡಲು ಇಷ್ಟ ಇಲ್ಲ ಎಂದರೆ ಏರ್ ಫ್ರೈ ಸಹ ಮಾಡಬಹುದು. ಈಗ ಫ್ರೈ ಮಾಡಿದ ಕಬಾಬ್‌ಗಳನ್ನ ಪುದೀನಾ ಚಟ್ನಿ ಜೊತೆ ತಿಂದರೆ ಆಹಾ, ಅದರ ರುಚಿ ಅದ್ಭುತ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಗೋಡಂಬಿ ತಿನ್ನಿ, ನೆನಪಿನ ಶಕ್ತಿ ಡಬಲ್ ಆಗುತ್ತೆ
