ರಾಜ್ಯ

Cabinet Meeting: ಪ್ರಿಯಾಂಕ್ ಖರ್ಗೆ ವಿಚಾರವಾಗಿ ಮುತ್ತಿಗೆ ಹಾಕೋಕೆ ಬಂದ್ರೆ ಮುಲಾಜಿಲ್ಲದೆ ಬಂಧಿಸಿ! ಸಿಎಂ ಖಡಕ್ ಸಂದೇಶ

priyank kharge matter

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramiah) ನೇತೃತ್ವದಲ್ಲಿ 2025ರ ಮೊದಲ ಸಚಿವ ಸಂಪುಟ ಸಭೆ (Cabinet Meeting) ಇಂದು (ಗುರುವಾರ) ನಡೆಯಿತು. ಸಚಿವ ಸಂಪುಟದ ಸಭೆಯಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್‌ಗೆ (Sachin Suicide Case) ಸಂಬಂಧಿಸಿದಂತೆ ಬಿಜೆಪಿಯವರ (BJP) ಆರೋಪಗಳಿಗೆ ಕೌಂಟರ್ ನೀಡಬೇಕು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪರವಾಗಿ ನಿಲ್ಲಬೇಕು ಎಂದು ಸಚಿವರುಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.

ಪ್ರಿಯಾಂಕ್ ಖರ್ಗೆ ಪರ ಸಿಎಂ ಬ್ಯಾಟಿಂಗ್

ಸಚಿವ ಸಂಪುಟ ಸಭೆಯಲ್ಲಿ ಪ್ರಿಯಾಂಕ್ ಖರ್ಗೆ ವಿಚಾರ ಚರ್ಚೆಗೆ ಬಂದಿದೆ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರು ಸಚಿವ ಪ್ರಿಯಾಂಕ್ ಖರ್ಗೆ ಪರ ಬ್ಯಾಟ್ ಬೀಸಿದ್ದಾರೆ. ಪ್ರಿಯಾಂಕ್ ಖರ್ಗೆ ಯಾವುದೇ ತಪ್ಪೆಸಗಿಲ್ಲ. ಬಿಜೆಪಿ ರಾಜಕಾರಣಕ್ಕಾಗಿ ಆರೋಪ ಮಾಡ್ತಾ ಇದೆ. ಎಲ್ಲಾ ಸಚಿವರು ಗಟ್ಟಿಯಾಗಿ ಕೌಂಟರ್ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.

ಬಿಜೆಪಿ ನಾಯಕರ ಮೇಲಿನ ಕೇಸ್‌ಗಳ ದಾಖಲೆ ಬಿಡುಗಡೆ

ಇನ್ನೂ ಸಂಪುಟ ಸಭೆಯಲ್ಲಿ ಬಿಜೆಪಿ ನಾಯಕರ ಮೇಲಿನ ಕೇಸ್ ಗಳ ದಾಖಲೆಗಳನ್ನು ಎಲ್ಲಾ ಸಚಿವರುಗಳಿಗೆ ಸಿಎಂ ಹಂಚಿಕೆ ಮಾಡಿದ್ದಾರೆ. ಬಿಜೆಪಿ ನಾಯಕರ ವಿರುದ್ದ ಇರುವ ಕೇಸ್ ಗಳ ದಾಖಲೆಗಳ ವಿವರವನ್ನು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಎಲ್ಲಾ ಸಚಿವರಿಗೆ ನೀಡಿದರು. ಯಡಿಯೂರಪ್ಪ, ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿ ನಾಯಕರುಗಳ ರಾಜೀನಾಮೆ ಯಾವಾಗ ಎಂದು ಸಿಎಂ ಪ್ರಶ್ನಿಸುವಂತೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಮುಲಾಜಿಲ್ಲದೆ ಬಂಧಿಸಿ

ಇನ್ನೂ ಸಚಿವ ಪ್ರಿಯಾಂಕ್ ಖರ್ಗೆ ಕೇಸ್‌ಗೆ ಸಂಬಂಧಿಸಿದಂತೆ ಮುತ್ತಿಗೆ ಹಾಕೋಕೆ ಬಂದವರನ್ನು ಮುಲಾಜಿಲ್ಲದೇ ಬಂಧಿಸಿ ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು. ಇನ್ನೊಂದೆಡೆ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಿಎಂ ಹೇಳಿದರು. ಜಾತಿಗಣತಿ ವರದಿಯನ್ನು ಕ್ಯಾಬಿನೆಟ್ ಗೆ ತರುವ ಬಗ್ಗೆ ಸಿಎಂ ಮಾಹಿತಿ ನೀಡಿದರು.

You may also like

chitra sante
ರಾಜ್ಯ

ಬೆಂಗಳೂರಿನಲ್ಲಿಂದು 22ನೇ ಚಿತ್ರಸಂತೆ! ವಾಹನ ಸವಾರರೇ ಗಮನಿಸಿ, ಇಂದು ದಿನವಿಡೀ ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್!

ನಗರದ ಚಿತ್ರಕಲಾ ಪರಿಷತ್‌ನಲ್ಲಿ (Chitrakala Parishath) 22ನೇ ಚಿತ್ರಸಂತೆಗೆ (Chitra Santhe) ಕ್ಷಣಗಣನೆ ಆರಂಭವಾಗಲಿದೆ. ‘ಹೆಣ್ಣು ಭ್ರೂಣ ಹತ್ಯೆ’ (Female foeticide) ಕುರಿತು ಜನರಲ್ಲಿ ಜಾಗೃತಿ ಮೂಡಿಸುವ