ಗದಗ

ಮನಮೋಹನ್ ಸಿಂಗ್ ಆರ್ಥಿಕ ಸೂತ್ರಕ್ಕೆ ಮನಸೋತ ಚೀನಾ! 2008ರ ಸಿಂಗ್ ತಂತ್ರವನ್ನೇ ಅಳವಡಿಸಿಕೊಳ್ಳಲು ನಿರ್ಧಾರ!

china adopted manmohan singh rules

2008 ರ ಭಾರತದ ಆರ್ಥಿಕ ಹಿಂಜರಿತವನ್ನು (Indian Economy) ನೀವು ನೆನಪಿಸಿಕೊಳ್ಳಬೇಕು. ಆಗ ಷೇರುಪೇಟೆ (Share Market) ಎಲ್ಲರನ್ನು ಬೆಚ್ಚಿ ಬೀಳಿಸುವಷ್ಟು ವೇಗವಾಗಿ ಕುಸಿದಿತ್ತು. ಒಂದು ರೀತಿಯಲ್ಲಿ, ದೇಶದ ದೊಡ್ಡ ಮಾರುಕಟ್ಟೆಗಳಲ್ಲಿ ಉತ್ಸಾಹವು ಕಳೆಗುಂದಿತ್ತು. ಹೆಚ್ಚಿನ ಸಂಖ್ಯೆಯ ಜನರು ತಮ್ಮ ಕೆಲಸ ಕಳೆದುಕೊಂಡು ದಿಕ್ಕಾಪಾಲಾಗಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ (Dr Manmohan Singh) ಅವರಿಗೆ ದೇಶದ ಆರ್ಥಿಕತೆಯನ್ನು ಮರಳಿ ಹಳಿಗೆ ತರುವುದೇ ದೊಡ್ಡ ಸವಾಲಾಗಿತ್ತು.

10 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ನುರಿತ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಇಡೀ ವಿಶ್ವವೇ ಆರ್ಥಿಕವಾಗಿ ಪಾತಾಳಕ್ಕೆ ಕುಸಿಯುತ್ತಿದ್ದರೆ ಇತ್ತ ಮನಮೋಹನ್ ಸಿಂಗ್ ಅವರು ಭಾರತದ ಆರ್ಥಿಕತೆಯನ್ನು ಮೇಲ್ಮುಖವಾಗಿ ಚಲಿಸುವಂತೆ ಮಾಡಿದ್ದರು. ಜೀವಂತವಾಗಿ ಇದ್ದಾಗ ಮನಮೋಹನ್ ಸಿಂಗ್ ಅವರನ್ನು ಮನಸ್ಸಿಗೆ ಬಂದಂತೆ ಟೀಕಿಸಿದ್ದವರೆಲ್ಲ, ಅವರ ನಿಧನದ ನಂತರ ಗುಣಗಾಣ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಅಂತಹ ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರು ಭಾರತದ ಆರ್ಥಿಕತೆಯನ್ನು ಮರಳಿ ಹಳಿಗೆ ತಂದ ಅದೇ ಸೂತ್ರವನ್ನು ಇದೀಗ ಚೀನಾ ಸರ್ಕಾರವೂ ಅನುಸರಿಸುತ್ತಿದೆ.

ಹೌದು.. ಸದ್ಯ ಚೀನಾದ ಆರ್ಥಿಕತೆಯು ಕುಸಿತದತ್ತ ಮುಖ ಮಾಡಿದೆ. ಜಗತ್ತಿನ ಕಾರ್ಖಾನೆ ಎಂದೇ ಹೆಸರಾಗಿರುವ ಚೀನಾಕ್ಕೆ ತನ್ನ ವಸ್ತುಗಳನ್ನು ಮಾರಲು ಮಾರುಕಟ್ಟೆಯೂ ಸಿಗುತ್ತಿಲ್ಲ. ಯುರೋಪ್, ಅಮೆರಿಕ ಮತ್ತು ಕೆನಡಾದಂತಹ ದೇಶಗಳು ಚೀನಾದ ಮೇಲೆ ಭಾಗಶಃ ನಿರ್ಬಂಧಗಳನ್ನು ವಿಧಿಸಿವೆ. ಇಂತಹ ಪರಿಸ್ಥಿತಿಯಲ್ಲಿ, ಶೀಘ್ರದಲ್ಲೇ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರಳುವುದರಿಂದ ಕ್ಸಿ ಜಿನ್‌ಪಿಂಗ್ ಈಗಾಗಲೇ ಟೆನ್ಷನ್‌ನಲ್ಲಿದ್ದಾರೆ. ಅವರು ಅಮೆರಿಕದೊಂದಿಗೆ ಮತ್ತೊಂದು ವ್ಯಾಪಾರ ಯುದ್ಧದ ಭಯದಲ್ಲಿದ್ದಾರೆ. ಹೀಗಾಗಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯನ್ನು ಅನುಸರಿಸಿ ಚೀನಾ ತನ್ನ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ನಿರ್ಧರಿಸಿದೆ.

You may also like

contractor
ಗದಗ

ಗುತ್ತಿಗೆದಾರರೊಬ್ಬರು ದಯಾಮರಣ ಕೋರಿ ಸಿಎಂಗೆ ಪತ್ರ ಬರೆದಿದ್ದಾರೆ

ಬೀದರ್​ನ ಗುತ್ತಿಗೆದಾರ (contractor) ಸಚಿನ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು, ರಾಜ್ಯ ಸರ್ಕಾರ (State Government) ಮತ್ತು ಸಚಿವ ಪ್ರಿಯಾಂಕ್ ಖರ್ಗೆ (Priyank Kharge)