ದೇಶ-ವಿದೇಶ

ಚೀನಾದಲ್ಲಿ HMPV ವೈರಸ್‌ ಆಕ್ರಮಣ, ಆಸ್ಪತ್ರೆಗಳಲ್ಲಿ ಜನವೋ ಜನ; ವಿಡಿಯೋಗಳಿಂದ ಸತ್ಯ ಬಹಿರಂಗ!

china virus spread

ನಿಮಗೆ ನೆನಪಿದೆಯೇ 2019ರ ಕೊನೆಯಲ್ಲಿ ಮತ್ತು 2020ರ ಆರಂಭದಲ್ಲಿ ನಾವು ಚೀನಾದಲ್ಲಿ (China) ಕೊರೋನಾಗೆ (Corona) ಸಂಬಂಧಿಸಿದ ಅನೇಕ ವಿಡಿಯೋಗಳನ್ನು (Video) ನೋಡಿದ್ದೇವೆ. ಆ ಸಮಯದಲ್ಲಿ, ಎಲ್ಲಾ ಆಸ್ಪತ್ರೆಗಳಲ್ಲಿ, ಎಲ್ಲೆಲ್ಲೂ ಕೋವಿಡ್ (Covid) ಪೀಡಿತರು ಇದ್ದರು. ಈಗ ಚೀನಾದಲ್ಲಿ ಇಂತಹ ದೃಶ್ಯಗಳು ಕಂಡು ಬರುತ್ತಿವೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಚೀನಾದಲ್ಲಿ ಈಗ ವಿವಿಧ ವೈರಸ್‌ಗಳು (virus) ಮತ್ತು ಬ್ಯಾಕ್ಟೀರಿಯಾಗಳಿಂದ ಸಮಸ್ಯೆ ಹೆಚ್ಚಾಗಿದೆ. HMPV ವೈರಸ್​ನಿಂದ ಹೆಚ್ಚು ತೊಂದರೆಯಾಗಿದ್ದು, ಬಲಿಯಾದವರಲ್ಲಿ ಹೆಚ್ಚಿನವರು 14 ವರ್ಷದೊಳಗಿನ ಮಕ್ಕಳು. ಅವರಿಗೆ ಕೆಮ್ಮು, ಜ್ವರ, ಉಸಿರಾಟದ ತೊಂದರೆ, ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದ ಲಕ್ಷಣಗಳಿವೆ ಎಂದು ವರದಿಗಳು ಹೇಳಿವೆ.

ಈ ವೈರಸ್ ಅನ್ನು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ಎಂದು ಕರೆಯಲಾಗುತ್ತದೆ. ಸರಳವಾಗಿ HMPV ಎಂದು ಕರೆಯಲಾಗುತ್ತದೆ, ಇದಕ್ಕೆ ಲಸಿಕೆ ಇಲ್ಲ. ಕೆಮ್ಮು ಮತ್ತು ನೆಗಡಿಗೆ ನೀಡಲಾಗು ಔಷಧಿಗಳಿಂದ ಅದನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ವೇಗವಾಗಿ ಹರಡುತ್ತಿದೆ. ಅದರೊಂದಿಗೆ, ಚೀನಾ ಸರ್ಕಾರವು ಸ್ಕ್ರೀನಿಂಗ್, ಪತ್ತೆ ಮತ್ತು ಪ್ರತ್ಯೇಕತೆಯ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದೆ. HMPV ಮಾತ್ರವಲ್ಲ, ಇನ್ನೂ ಕೆಲವು ಅಪರಿಚಿತ ವೈರಾಣುಗಳು ರೋಗಿಗಳಲ್ಲಿ ಕಂಡುಬರುತ್ತಿವೆ ಎನ್ನಲಾಗಿದೆ. ಆದರೆ HMPV ಕೊರೋನಾದಷ್ಟು ಅಪಾಯಕಾರಿ ಅಲ್ಲ ಎಂದು ಚೀನಾ ಹೇಳಿದೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಚೀನಾಕ್ಕೆ ಸಂಬಂಧಿಸಿದ ವಿಡಿಯೋಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ನಾವು ಕಾಣಬಹುದು. ಹಲವರು ಮಾಸ್ಕ್ ಧರಿಸಿದ್ದು, ಕೆಮ್ಮುವುದು ಸೇರಿದಂತೆ ಅವರಿಗೆ ಉಸಿರಾಟದ ತೊಂದರೆ ಇರುವಂತೆ ತೋರುತ್ತಿದೆ.

HMPV ಹೊಸ ವೈರಸ್ ಅಲ್ಲ

ಚೀನಾದಲ್ಲಿ HMPV ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜ. ಉತ್ತರ ಚೀನಾದ ಪ್ರಾಂತ್ಯಗಳಲ್ಲಿ ಇದು ವಿಶೇಷವಾಗಿ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ HMPV ಹೊಸ ವೈರಸ್ ಅಲ್ಲ. ಹಳೆಯದು. ಆದರೆ, ಈಗ ಅದು ಹೆಚ್ಚಾಗಿದೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಚೀನಾದ ಅಧಿಕಾರಿಗಳು ಹೇಳಿದ್ದರೂ ಜನರಿಗೆ ಹಲವು ಅನುಮಾನಗಳಿವೆ.

You may also like

plain crash
ದೇಶ-ವಿದೇಶ

Plane Crash: ಸೌತ್ ಕೊರಿಯಾ, ಕೆನಡಾ ಬೆನ್ನಲ್ಲೇ ಇದೀಗ ಮತ್ತೊಂದು ವಿಮಾನ ಪತನ! 2 ಸಾವು, 18 ಮಂದಿ ಗಂಭೀರ

ಕ್ಯಾಲಿಫೋರ್ನಿಯಾ: ದಕ್ಷಿಣ ಕೊರಿಯಾ ಮತ್ತು ಕೆನಡಾ ನಂತರ ಇದೀಗ ಅಮೆರಿಕದಲ್ಲಿ ಕೂಡ ವಿಮಾನ ದುರಂತ (Plane Crashes) ಸಂಭವಿಸಿದೆ. ಬೆರೆಳೆಣಿಕೆಯ ದಿನದ ಅಂತರದಲ್ಲಿ ಮೂರು ವಿಮಾನ ಅಪಘಾತ