ಜನವರಿ 8 ರಾಕಿಭಾಯ್ ಯಶ್ (Yash) ಅವರಿಗೆ ಜನುಮದಿನದ (Birthday) ಸಂಭ್ರಮ. ಆದರೆ ಈ ಬಾರಿಯೂ ಯಶ್ ಫ್ಯಾನ್ಸ್ ಜತೆ ಸೆಲೆಬ್ರೇಷನ್ ಮಾಡಿಕೊಳ್ಳುತ್ತಿಲ್ಲ. ಆದರೆ ಯಶ್ ಕಡೆಯಿಂದ ಬಿಗ್ ಸರ್ಪ್ರೈಸ್ (Big Surprise) ಅಂತೂ ಇದೆ ಎನ್ನಲಾಗುತ್ತಿದೆ. ಟಾಕ್ಸಿಕ್ ಸಿನಿಮಾ ತಂಡದ ಬಗ್ಗೆ ಸುದ್ದಿಯೊಂದು ಸಖತ್ ಚರ್ಚೆಯಾಗುತ್ತಿದೆ. ಏನದು?
ಯಶ್ ಬರ್ತ್ ಡೇ ದಿನ ಟಾಕ್ಸಿಕ್ ಚಿತ್ರದ ಪೋಸ್ಟರ್ ಲಾಂಚ್ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ ಎನ್ನಲಾಗಿದೆ. ಈ ವರ್ಷವೂ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸದಿರಲು ಯಶ್ ನಿರ್ಧಿರಿಸಿದ್ದು ಗೊತ್ತೇ ಇದೆ. ಬರ್ತ್ ಡೇ ಸೆಲೆಬ್ರೇಶನ್ ಬದಲಿಗೆ ಟಾಕ್ಸಿಕ್ ಅಪ್ಡೇಟ್
ಕೊಡಲು ರಾಕಿ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಟಾಕ್ಸಿಕ್ ರಿಲೀಸ್ ಅಗೋದು ಡೌಟ್
ಟಾಕ್ಸಿಕ್ ಟೈಟಲ್ ಲಾಂಚ್ಮಾಡಿದ ದಿನವೇ ರಿಲೀಸ್ ಡೇಟ್ ಚಿತ್ರತಂಡ ರಿವೀಲ್ ಮಾಡಿತ್ತು. 2025 ಏಪ್ರಿಲ್ 10 ಟಾಕ್ಸಿಕ್ ರಿಲೀಸ್ ಪ್ಲಾನ್ ಕೆವಿಎನ್ ಪ್ರೊಡಕ್ಷನ್ ಮಾಡಿತ್ತು. ಶೂಟಿಂಗ್ ಕಂಪ್ಲೀಟ್ ಆಗದ ಹಿನ್ನೆಲೆಯಲ್ಲಿ ಏಪ್ರಿಲ್ 10 ಕ್ಕೆ ಟಾಕ್ಸಿಕ್ ರಿಲೀಸ್ ಅಗೋದು ಡೌಟ್ ಎನ್ನಲಾಗುತ್ತಿದೆ.