ನಟಿ ನಿವೇದಿತಾ ಗೌಡ (Niveditha Gowda) ಅವರು ಸೋಷಿಯಲ್ ಮೀಡಿಯಾ (Social Media) ಮೂಲಕ ಸಖತ್ ಸೌಂಡ್ ಮಾಡುತ್ತಲೇ ಇರುತ್ತಾರೆ. ರೀಲ್ಸ್ (Reels) ಮೂಲಕ ಸಖತ್ ಫೇಮ್ ಪಡೆದಿರುವ ನಟಿ, ಹೊಸ ವರ್ಷಾಚರಣೆಯಲ್ಲಿ (New Year) ಸಾಂಗ್ ಮೂಲಕ ಫ್ಯಾನ್ಸ್ ಗಮನ ಸೆಳೆದಿದ್ದರು. ಇದೀಗ ಮೈ ಮೇಲೆ ಓತಿಕ್ಯಾತ ಪ್ರಭೇದಕ್ಕೆ ಸೇರಿದ ಪ್ರಾಣಿಗಳನ್ನು ಮೈಮೇಲೆ ಬಿಟ್ಟುಕೊಂಡು ಇದೇ ಲೇಸು ಎಂದು ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡ ಬದಲಾಗಿ ಹೋದ್ರು. ಬೊಂಬೆ ತರ ಇದ್ದ ನಿವಿ ಬೋಲ್ಡ್ ಆಗಿ ಬಿಟ್ಟಿದ್ದಾರೆ ನಿವಿ ಇದೀಗ ಬೋಲ್ಡ್ ಲೇಡಿ ಥರವೇ ಹೊಳೆಯುತ್ತಿದ್ದಾರೆ. ಬೀಚ್‌ನಲ್ಲೆಲ್ಲಾ ಓಡಾಟ, ಬೋಟ್‌ನಲ್ಲಿ ಸುತ್ತಾಟ, ಹಾಟ್ ಫೋಟೋ ಪೋಸ್ ಹೀಗೆ ಎಲ್ಲಾ ಅಪ್ಡೇಟ್ ಕೊಡ್ತಾ ಇದ್ದಾರೆ. ಇದೀಗ ಮೈ ಮೇಲೆ ಓತಿಕ್ಯಾತ ಪ್ರಭೇದಕ್ಕೆ ಸೇರಿದ ಪ್ರಾಣಿಗಳನ್ನು ಮೈಮೇಲೆ ಬಿಟ್ಟುಕೊಂಡು ಇದೇ ಲೇಸು ಎಂದು ಬರೆದುಕೊಂಡಿದ್ದಾರೆ.
ತಮ್ಮ ಜೀವನದಲ್ಲಿ ಬಂದಿರುವ ಕೆಲವು ವ್ಯಕ್ತಿಗಳು ಎನ್ನುವ ಅರ್ಥದಲ್ಲಿ ನಿವೇದಿತಾ ಹೀಗೆ ಬರೆದಿದ್ದರೂ, ಇದು ಯಾರೋ ಒಬ್ಬ ವ್ಯಕ್ತಿಗೆ ಕೊಟ್ಟಿರೋ ಟಾಂಟ್ ಎಂಬ ಚರ್ಚೆ ಶುರುವಾಗಿದೆ. ನಾನು ಭೇಟಿಯಾದ ಕೆಲವು ಜನರಂತೆ ಖಂಡಿತವಾಗಿಯೂ ಭಯಾನಕವಲ್ಲ! ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇದೀಗ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ತುಂಬಾ ಸ್ಟ್ರಾಂಗ್ ಗರ್ಲ್ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗೆ ನಿವೇದಿತಾ ಅವರು ಥೈಲ್ಯಾಂಡ್‌ನಲ್ಲಿ ಸಖತ್ ಆಗಿ ಹಾಡಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ನಿವ್ವಿ ಕೂಡ ಕ್ಯೂಟ್ ಆಗಿ ಹಾಡಿದ್ದರು. ಈ ಹಾಡನ್ನು ಕೇಳಿದ ಫ್ಯಾನ್ಸ್ ಚಂದನ್ ಶೆಟ್ಟಿ ಬಿಡುಗಡೆ ಮಾಡಿದ ಕಾಟನ್ ಕ್ಯಾಂಡಿ ಹಾಡನ್ನು ಒಮ್ಮೆ ಹಾಡಿ ಮೇಡಂ ಎಂದು ಕಮೆಂಟ್ ಕೂಡ ಮಾಡಿದ್ದರು. ಕೆಲವರು ನೆಗೆಟಿವ್ ಕಮೆಂಟ್ ಕೂಡ ಮಾಡಿದ್ದರು.
ನಿವೇದಿತಾ ಗೌಡ ಒಂದು ಚಿತ್ರ ಮಾಡಿದ್ದಾರೆ. ಚಂದನ್ ಶೆಟ್ಟಿ ಈ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಇದಕ್ಕೆ ಮುದ್ದು ರಾಕ್ಷಸಿ ಅನ್ನುವ ಹೆಸರು ಇದೆ. ಸಿನಿಮಾ ಬಿಟ್ರೆ, ನಿವಿ ಬೇರೆ ಯಾವುದೇ ಸಿನಿಮಾಗಳನ್ನ ಒಪ್ಪಿದಂತೆ ಕಾಣಿಸುದಿಲ್ಲ. ಇನ್ನುಳಿದಂತೆ ನಿವಿ ತಮ್ಮ ಬೋಲ್ಡ್ ಲುಕ್ ಅಲ್ಲಿಯೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಅಂತಲೇ ಹೇಳಬಹುದು.