ಧಾರವಾಡ

ಅವೈಜ್ಞಾನಿಕ ರೋಡ್ ಹಂಪ್‌ಗೆ ಕೈ ಮುಖಂಡನ ಪುತ್ರ ಬಲಿ! ಕೊನೆಗೂ ಎಚ್ಚೆತ್ತ ಪ್ರಾಧಿಕಾರ

unscientific hamps problem

ರಸ್ತೆ ಅಪಘಾತ (Accident) ತಪ್ಪಿಸಲು ವಾಹನ ಸವಾರರ ಸ್ಪೀಡ್ ಕಂಟ್ರೋಲ್‌ಗೆ (Speed Control) ಅಂತಾ ರೋಡ್ ಹಂಪಗಳನ್ನು (Road Hump) ಮಾಡಲಾಗುತ್ತದೆ. ಆದರೆ ಅದೇ ರೋಡ್ ಹಂಪ್‌ನಿಂದ ಕಾಂಗ್ರೆಸ್ ಮುಖಂಡರ (Congress Leader) ಮಗನೊಬ್ಬ ಜೀವ ಕಳೆದುಕೊಂಡಿರುವ ಘಟನೆ ಮಂಡ್ಯದ ವಿಸಿ ಫಾರಂ ಗೇಟ್ ಬಳಿ ನಡೆದಿದೆ.

ಅವೈಜ್ಞಾನಿಕ ರಸ್ತೆ ಹಂಪ್‌ನಿಂದ ಕಾಂಗ್ರೆಸ್ ಮುಖಂಡನ ಪುತ್ರ ಬಲಿ

ಬೆಂಗಳೂರು-ಮೈಸೂರು ಹಳೆ ಹೆದ್ದಾರಿಯಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ ಹಾಕಿರುವುದರಿಂದ ಕಾಂಗ್ರೆಸ್ ಮುಖಂಡನ ಪುತ್ರ ಬಲಿಯಾಗಿದ್ದಾನೆ. ಮಂಡ್ಯದ ವಿಸಿ ಫಾರಂ ಗೇಟ್ ಬಳಿ ಹೆದ್ದಾರಿಯಲ್ಲಿ ಹಾಕಿದ್ದ ಅವೈಜ್ಞಾನಿಕ ರೋಡ್ ಹಂಪ್‌ನಿಂದ ಮೊನ್ನೆ ರಾತ್ರಿ ದ್ಯಾಪಸಂದ್ರ ಗ್ರಾಮದ ಕೈ ಮುಖಂಡ ಶಂಕರಲಿಂಗೇಗೌಡ ಪುತ್ರನಿಗೆ ಅಪಘಾತವಾಗಿತ್ತು. ಬೈಕ್‌ನಿಂದ ಬಿದ್ದು ರಸ್ತೆಯಲ್ಲಿ ನರಳಾಡಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸಾವಿನ ಬಳಿಕ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ

ಕಾಂಗ್ರೆಸ್ ಮುಖಂಡನ ಪುತ್ರ ಸಾವಿಗೀಡಾದ ಬಳಿಕ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ, ರಸ್ತೆಗೆ ಹಾಕಿದ್ದ ಹಂಪ್ ತೆರವುಗೊಳಿಸಿದ್ದಾರೆ. ಒಂದು ವಾರದ ಹಿಂದೆ ಹೆದ್ದಾರಿ ಪ್ರಾಧಿಕಾರ ಈ ರೋಡ್ ಹಂಪ್ ನಿರ್ಮಿಸಿದ್ದರು. ಸ್ಥಳೀಯರ ಮನವಿ ಹಿನ್ನೆಲೆ ಕಾಟಾಚಾರಕ್ಕೆ ರಸ್ತೆ ಹಂಪ್ ನಿರ್ಮಾಣ ಮಾಡಿದ್ದರು.

ಭಾರೀ ಗಾತ್ರದ ಹಂಪ್ ನಿರ್ಮಾಣ ಮಾಡಿ ರಿಫ್ಲೆಕ್ಟರ್ ಹಾಕದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 15ಕ್ಕೂ ಹೆಚ್ಚು ಅಪಘಾತಗಳಾಗಿದ್ದು, ಹಲವರಿಗೆ ಗಾಯ, ಒಂದು ಸಾವು ಸಂಭವಿಸಿದೆ. ಅಪಘಾತಗಳ ಬಳಿಕ ರೋಡ್ ಹಂಪ್ ಬಗ್ಗೆ ಸಾಕಷ್ಟು ದೂರುಗಳು ಬಂದರೂ ಅಧಿಕಾರಿಗಳು ನಿರ್ಲಕ್ಷ್ಯತೋರಿದ್ದಾರೆ. ಮೊನ್ನೆ ರಾತ್ರಿಯ ಕೈ ಮುಖಂಡನ ಮಗನ ಅಪಘಾತದ ಬಳಿಕ ಎಚ್ಚೆತ್ತು ನಿನ್ನೆ ಸಂಜೆ ರೋಡ್ ಹಂಪ್ ತೆರವುಗೊಳಿಸಿದ್ದಾರೆ.

You may also like

new year prediction
ಧಾರವಾಡ

2025ರಲ್ಲಿ 12 ರಾಶಿಯವರಿಗೂ ಆರೋಗ್ಯದ ಸಮಸ್ಯೆ ಕಾಡುತ್ತೆ! ಜೀವನದಲ್ಲಿ ವಿವಿಧ ಬದಲಾವಣೆ ಉಂಟಾಗುತ್ತೆ

2025ರ ಆರಂಭದಲ್ಲಿ (New Year) ನೀವು ಈ ವಿಷಯಗಳನ್ನು ತಿಳಿದಿಟ್ಟುಕೊಂಡರೆ ಯಾವುದೇ ತೊಂದರೆಗಳನ್ನು (Problems) ಎದುರಿಸಬೇಕಾಗಿಲ್ಲ. ನಿಮ್ಮ ಜೀವನವು (Life) ಕ್ರಿಯಾತ್ಮಕವಾಗಿರುತ್ತದೆ. ಅಡೆತಡೆಗಳನ್ನು ನಿವಾರಿಸುವ ಮೂಲಕ ಮತ್ತು