ಚಿತ್ರದುರ್ಗ

ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ; ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಲಿದ್ದಾರೆ ದ್ರೌಪದಿ ಮುರ್ಮು

Droupadi Murmu

ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಇಂದು ಬೆಂಗಳೂರು (Bengaluru) ಮತ್ತು ಬೆಳಗಾವಿಗೆ (Belagavi) ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ಅವರು ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ (NIMHANS) ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಕೆಎಲ್‌‌ಇ ಕ್ಯಾನ್ಸರ್ ಆಸ್ಪತ್ರೆ (Cancer Hospital) ಉದ್ಘಾಟನೆ ಮಾಡಲಿದ್ದಾರೆ.

ವಿವಿಧ ಸೌಲಭ್ಯಗಳ ಲೋಕಾರ್ಪಣೆ

ಬೆಳಗ್ಗೆ 8 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ರಾಷ್ಟ್ರಪತಿ ಅವರು ಪ್ರಯಾಣ ಬೆಳೆಸಲಿದ್ದು, ಬೆಳಗ್ಗೆ 10-50ಕ್ಕೆ ಹೆಚ್​​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯರಲಿದ್ದಾರೆ. HAL ವಿಮಾನ ನಿಲ್ದಾಣದಿಂದ ನೇರವಾಗಿ ನಿಮ್ಹಾನ್ಸ್ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕೆಎಲ್‌‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ

ನಿಮ್ಹಾನ್ಸ್ ಕಾರ್ಯಕ್ರಮ ಮುಗಿಸಿ HAL ಏರ್‌ಪೋರ್ಟ್‌ಗೆ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನ 2-20ಕ್ಕೆ HAL ಏರ್ಪೋರ್ಟ್ ನಿಂದ ಬೆಳಗಾವಿಗೆ ತೆರಳಲಿದ್ದಾರೆ. ಮದ್ಯಾಹ್ನ 3-55ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ವಿಮಾನ‌ ನಿಲ್ದಾಣದಂದ ಕೆ‌ಎಲ್‌ಇ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಕೆಎಲ್‌‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದು, ಕಾರ್ಯಕ್ರಮ ಮುಗಿಸಿ ಸಂಜೆ 5-30ಕ್ಕೆ ಬೆಳಗಾವಿ ಏರ್‌ಪೋರ್ಟ್‌ನಿಂದ ದೆಹಲಿಗೆ ವಾಪಾಸ್ಸಾಗಲಿದ್ದಾರೆ.

You may also like

never share these things with anyone
ಚಿತ್ರದುರ್ಗ

ಈ 9 ವಿಚಾರಗಳನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ! ಶೇರ್ ಮಾಡಿದ್ರೋ ಅಷ್ಟೇ ನಿಮ್ಮ ಕಥೆ!

ಪ್ರಾಮಾಣಿಕತೆ ಸಾಮಾನ್ಯವಾಗಿ ಒಳ್ಳೆಯ ನಡುವಳಿಕೆ, ಆದರೆ ನಿಮ್ಮ ಬಗ್ಗೆ ಕೆಲವು ವಿಷಯಗಳನ್ನು ಖಾಸಗಿಯಾಗಿ ಇಡುವುದು ನಿಮ್ಮ ಜೀವನದಲ್ಲಿ ಶಾಂತಿ ಹಾಗೂ ಆನಂದವನ್ನು ಮೂಡಿಸುತ್ತದೆ ಎಂದು ಹೇಳಲಾಗುತ್ತದೆ. ಮನೋವಿಜ್ಞಾನವು