ಕ್ರೀಡೆ

ಕೈಕೊಟ್ಟ ಸೀನಿಯರ್ಸ್, ಜೈಸ್ವಾಲ್ ಹೋರಾಟ ವ್ಯರ್ಥ! ಭಾರತಕ್ಕೆ 184 ರನ್​ಗಳ ಸೋಲು, WTC ಫೈನಲ್​ ಕನಸು ಬಹುತೇಕ ಭಗ್ನ

ಜೈಸ್ವಾಲ್

ಬಾರ್ಡರ್​ ಗವಾಸ್ಕರ್ ಟ್ರೋಫಿಯ (Border Gavaskar Trophy) 4ನೇ ಪಂದ್ಯದಲ್ಲಿ ಭಾರತ ತಂಡ 184 ರನ್​ಗಳ ಹೀನಾಯ ಸೋಲು ಕಂಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ (World Test Championship) ನಿರ್ಧರಿಸುವ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಸೋಲು ಕಂಡಿದೆ. ಆಸೀಸ್ ನೀಡಿದ್ದ 340 ರನ್​ಗಳ ಗುರಿಯನ್ನ ಬೆನ್ನಟ್ಟಿದ ರೋಹಿತ್ ಪಡೆ 155ಕ್ಕೆ ಆಲೌಟ್ ಆಗುವ ಮೂಲಕ 4ನೇ ಟೆಸ್ಟ್​ ಪಂದ್ಯದಲ್ಲಿ ಸೋಲು ಕಂಡಿದೆ. ಈ ಸೋಲಿನೊಂದಿಗೆ ಭಾರತ ಸರಣಿಯಲ್ಲಿ 1-2ರಲ್ಲಿ ಹಿನ್ನಡೆ ಅನುಭವಿಸಿದೆ. ಅಲ್ಲದೆ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ನೇರವಾಗಿ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ.

ಕೈಕೊಟ್ಟ ಹಿರಿಯ ಆಟಗಾರರು

340 ರನ್​ಗಳ ಕಠಿಣ ಗುರಿ ಪಡೆದ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ದೊರೆಕಿಸಿಕೊಡುವಲ್ಲಿ ಸೀನಿಯರ್​ ಆಟಗಾರರು ವಿಫಲರಾದರು. ರೋಹಿತ್ ಶರ್ಮಾ ಕೇವಲ 9 ರನ್​ಗಳಿಸಿ ಬೇಜವಾಬ್ದಾರಿ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರೆ, ರಾಹುಲ್ 5 ಎಸೆತಗಳನ್ನೆದುರಿಸಿ ಡಕ್​ ಔಟ್ ಆದರು. ನಂತರ ಬಂದ ವಿರಾಟ್ ಕೊಹ್ಲಿ ಕೇವಲ 5 ರನ್​ಗಳಿಸಿ ಎಂದಿನಂತರ ವಿಕೆಟ್​ನಿಂದ ಹೊರ ಹೋಗುವ ಚೆಂಡನ್ನ ಆಡುವ ಯತ್ನದಲ್ಲಿ ಸ್ಲಿಪ್​ಗೆ ಕ್ಯಾಚ್ ನೀಡಿದರು.

ಕೇವಲ 33ರನ್​ಗಳಾಗುವಷ್ಟರಲ್ಲಿ ಭಾರತ 3 ವಿಕೆಟ್ ಕಳೆದುಕೊಂಡಿತು. ಈ ಮೂರು ವಿಕೆಟ್ ನಂತರ ಟೀಮ್ ಇಂಡಿಯಾ ಪಂದ್ಯ ಗೆಲುವಿನ ಆಸೆ ಕೈಬಿಟ್ಟು ಡ್ರಾ ಮಾಡಿಕೊಳ್ಳುವುದಕ್ಕೆ ಮುಂದಾಯಿತು. ಹಿಂದೆಲ್ಲಾ ಹೊಡಿಬಡಿ ಆಟವಾಡುತ್ತಿದ್ದ ಪಂತ್​ ಡಿಫೆನ್ಸ್ ಆಟಕ್ಕೆ ಮೊರೆ ಹೋದರು. ಅವರು ಯಶಸ್ವಿ ಜೈಸ್ವಾಲ್  ಜೊತೆಗೂಡಿ 32. 3 ಓವರ್​ಗಳ ಕಾಲ ಬ್ಯಾಟಿಂಗ್ ಮಾಡಿದರು. ಇವರಿಬ್ಬರು ಇರುವವರೆಗೆ ಭಾರತ ಸುಲಭವಾಗಿ ಡ್ರಾ ಮಾಡಿಕೊಳ್ಳುತ್ತದೆ ಎಂದೇ ಭಾವಿಸಲಾಗಿತ್ತು.

ಪಂತ್​ ಔಟ್​ ಆಗುತ್ತಿದ್ದಂತೆ ಭಾರತದ ಪತನ

ಆದರೆ 104 ಎಸೆತಗಳನ್ನು ಸಮಾಧಾನವಾಗಿ ಎದುರಿಸಿದ್ದ ಪಂತ್ ಪಾರ್ಟ್​ ಟೈಮ್ ಬೌಲರ್​ ಟ್ರಾವಿಸ್ ಹೆಡ್​​ ಬೌಲಿಂಗ್​ನಲ್ಲಿ ದುಡುಕಿನ ಆಟವಾಡಿ ಬಿಗ್ ಶಾಟ್ ಮಾಡುವ ಯತ್ನದಲ್ಲಿ ಮಿಚೆಲ್​ ಮಾರ್ಷ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಪಂತ್​ ವಿಕೆಟ್​ ಬೀಳುತ್ತಿದ್ದಂತೆ ಭಾರತದ ಡ್ರಾ ಮಾಡಿಕೊಳ್ಳುವ ಯತ್ನಕ್ಕೂ ದೊಡ್ಡ ಹೊಡೆತ ಬಿತ್ತು. ಇಡೀ ಪಂದ್ಯ ಸಂಪೂರ್ಣ ಆಸ್ಟ್ರೇಲಿಯಾ ಪರ ತಿರುಗಿತು.

ನಂತರ ಬಂದಂತಹ ಜಡೇಜಾ 14 ಎಸೆತಗಳಲ್ಲಿ 2, ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ್ ನಿತೀಶ್ ಕುಮಾರ್ ರೆಡ್ಡಿ ಕೇವಲ 5 ಎಸೆತಗಳಲ್ಕಿ  1 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. ನಂತರ ಬಂದ ಆಕಾಶ್ ದೀಪ್​ 17 ಎಸೆತಗಳಲ್ಲಿ 7, ಜಸ್ಪ್ರೀತ್ ಬುಮ್ರಾ 8  ಮತ್ತು  ಮೊಹಮ್ಮದ್ ಸಿರಾಜ್ 2 ಎಸೆತಗಳಲ್ಲಿ ಡಕ್​ ಔಟ್ ಆದರು. ವಾಷಿಂಗ್ಟನ್ ಸುಂದರ್​ 45 ಎಸೆತಗಳನ್ನ ಎದುರಿಸಿ ಡ್ರಾ ಮಾಡಲು ಯತ್ನಿಸಿದರಾದರು, ಅವರ ಪ್ರಯತ್ನಕ್ಕೆ ಸೂಕ್ತ ಬೆಂಬಲ ಸಿಗದೇ ಭಾರತ 79.1 ಓವರ್​ಗಳಲ್ಲಿ ಆಲೌಟ್ ಆಯಿತು. ಭಾರತ ತಂಡ ಇನ್ನು 13 ಓವರ್​ ಆಡಿದ್ದರೆ ಪಂದ್ಯವನ್ನ ಡ್ರಾ ಸಾಧಿಸಬಹುದಿತ್ತು.

You may also like

wtc final
ಕ್ರೀಡೆ

 ಭಾರತದ ಪ್ರಾಬಲ್ಯ ಅಂತ್ಯಗೊಳಿಸಿ WTC ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ! ಈ ಸಾಧನೆ ಮಾಡಿದ ಎರಡನೇ ತಂಡ

ಭಾನುವಾರ ಅಂತ್ಯಗೊಂಡ 5 ಪಂದ್ಯಗಳ ಟೆಸ್ಟ್​ ಸರಣಿಯ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾವನ್ನ (India vs Australia) ಆರು ವಿಕೆಟ್‌ಗಳಿಂದ ಸೋಲಿಸಿ 3-1 ಸರಣಿಯನ್ನ