ಹಿರಿಯರ ಪಾದ ಮುಟ್ಟಿ ನಮಸ್ಕಾರ ಮಾಡೋದು ಏಕೆ? ಇದರ ಹಿಂದಿದೆ 90% ಜನರಿಗೆ ಗೊತ್ತಿರದ ಆ ಮಹತ್ವದ ಕಾರಣ!
ಸನಾತನ ಧರ್ಮದಲ್ಲಿ ಅನೇಕ ನಂಬಿಕೆಗಳು ಮತ್ತು ಸಂಪ್ರದಾಯಗಳಿವೆ, ಅವುಗಳನ್ನು ಶತಮಾನಗಳಿಂದ ಅನುಸರಿಸಲಾಗುತ್ತಿದೆ. ಈ ಸಂಪ್ರದಾಯಗಳಲ್ಲಿ ಒಂದಾದ ಹಿರಿಯರ ಕಾಲಿಗೆ ಎರಗಿ (Belief) ನಮಸ್ಕಾರ ಮಾಡುವ ಸಂಪ್ರದಾಯವು (Culture) ಇಂದಿನ ಆಧುನಿಕ ಯುಗದಲ್ಲಿಯೂ ಸ್ವಲ್ಪ ಕಡಿಮೆಯಾದರೂ ಅಲ್ಲಲ್ಲಿ ಇಂದಿಗೂ ಅನುಸರಿಸಲ್ಪಡುತ್ತದೆ. ಅಂದಹಾಗೆ, ಪ್ರತಿ ದಿನ ಬೆಳಗ್ಗೆ ಎದ್ದು ತಂದೆ ತಾಯಿಯರ ಪಾದ ಮುಟ್ಟಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಜ್ಜಿಯರು ಮಕ್ಕಳಿಗೆ ಬಾಲ್ಯದಿಂದಲೂ ಈ ಗುಣವನ್ನು ಕಲಿಸುತ್ತಾರೆ, ಅವರು ಹಿರಿಯರ ಪಾದಗಳನ್ನು ಮುಟ್ಟಬೇಕು ಮತ್ತು ಆಶೀರ್ವಾದ ಪಡೆಯಬೇಕು ಎಂದು ಹೇಳುತ್ತಾರೆ. […]