ವಿದ್ಯಾರ್ಥಿ ವರದಿಗಾರರ ಮಾರ್ಗಸೂಚಿಗಳು
ವಿದ್ಯಾರ್ಥಿ ವಾಣಿಯೊಂದಿಗೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿ ವರದಿಗಾರನು ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
1. ವರದಿ ಮಾಡುವ ವಿಷಯವು ಸಾರ್ವಜನಿಕ ಹಿತಾಸಕ್ತಿ ಮತ್ತು ಕಲಿಕೆ ಉದ್ದೇಶ ಹೊಂದಿರಬೇಕು
2. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಆರೋಪಾತ್ಮಕ ವಿಷಯ ಬರೆಯುವ ಮೊದಲು ಸಂಪಾದಕೀಯ ಅನುಮತಿ ಕಡ್ಡಾಯ
3. ವದಂತಿ, ಊಹಾಪೋಹ ಅಥವಾ ಪರಿಶೀಲಿಸದ ಮಾಹಿತಿಯನ್ನು ಸಲ್ಲಿಸುವಂತಿಲ್ಲ
4. ಫೀಲ್ಡ್ ರಿಪೋರ್ಟಿಂಗ್ ಸಮಯದಲ್ಲಿ ಶಿಸ್ತು ಮತ್ತು ಕಾನೂನು ಪಾಲನೆ ಕಡ್ಡಾಯ
5. ಫೋಟೋ, ವೀಡಿಯೋ ಅಥವಾ ದಾಖಲೆಗಳನ್ನು ನೈತಿಕವಾಗಿ ಬಳಸಬೇಕು
6. ಅವಾಚ್ಯ, ಅವಮಾನಕಾರಿ ಅಥವಾ ಪ್ರಚೋದನಾತ್ಮಕ ಭಾಷೆ ನಿಷೇಧ
7. ಇದು ತರಬೇತಿ ವೇದಿಕೆ ಎಂಬ ಅರಿವಿನೊಂದಿಗೆ ವರ್ತಿಸಬೇಕು
ನಿಯಮ ಉಲ್ಲಂಘಿಸಿದಲ್ಲಿ ವಿದ್ಯಾರ್ಥಿ ವರದಿಗಾರರ ಸ್ಥಾನವನ್ನು ರದ್ದುಪಡಿಸುವ ಹಕ್ಕು ವಿದ್ಯಾರ್ಥಿ ವಾಣಿಗೆ ಇರುತ್ತದೆ.
