ಗ್ಲೋಬಲ್ ಸ್ಟಾರ್ ರಾಮ್ ಚರಣ್ (Actor Ram Charan) ಅಭಿನಯದ ಗೇಮ್ ಚೇಂಜರ್ ಸಿನಿಮಾ (Game Changer) ತೆರೆ ಬರಲು ರೆಡಿಯಾಗಿದೆ. ಪೊಲಿಟಿಕಲ್ ಆ್ಯಕ್ಷನ್ ಡ್ರಾಮಾ ಇದಾಗಿದ್ದು, ಚಿತ್ರಕ್ಕೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (DCM Pawan Kalyan) ಕೂಡ ಸಾಥ್ ಕೊಟ್ಟಿದ್ದಾರೆ. ರಾಜಮಂಡ್ರಿಯಲ್ಲಿ ನಡೆದ ಗೇಮ್ ಚೇಂಜರ್ ಇವೆಂಟ್ನಲ್ಲಿ ಮಾತಾಡಿದ ಡಿಸಿಎಂ ಪವನ್ ಕಲ್ಯಾಣ್, ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ಅವರನ್ನು ಕೊಂಡಾಡಿದ್ರು. ಇದೇ ವೇಳೆ ನಟ ಅಲ್ಲು ಅರ್ಜುನ್ ಹೆಸರು ಕೂಡ ಹೇಳಿದ್ದಾರೆ. ಪುಷ್ಪರಾಜ್ ಬಗ್ಗೆ ಏನಂದ್ರು?
ಗೇಮ್ ಚೇಂಜರ್ ವೇದಿಕೆಯಲ್ಲಿ ‘ಪವರ್’ ಟಾಕ್!
ರಾಜಮಂಡ್ರಿಯಲ್ಲಿ ಆಯೋಜಿಸಿದ್ದ ಗೇಮ್ ಚೇಂಜರ್ ಇವೆಂಟ್ನಲ್ಲಿ ಭಾಗವಹಿಸಿದ ಡಿಸಿಎಂ ಪವನ್ ಕಲ್ಯಾಣ್, ಮಾತು ಆರಂಭಿಸುತ್ತಿದ್ದಂತೆ ಅಣ್ಣ ಚಿರಂಜೀವಿಯನ್ನು ಕೊಂಡಾಡಿದ್ರು. ಬಳಿಕ ನಟ ರಾಮ್ ಚರಣ್ ಗುಣಗಳ ಬಗ್ಗೆ ಕೂಡ ಮೆಚ್ಚುಗೆ ಮಾತಾಡಿದ್ರು. ಮೆಗಾಸ್ಟಾರ್ ನೆರಳಿನಲ್ಲಿ ನಾವು ಬೆಳೆದಿದ್ದೇವೆ ಎಂದ್ರು.
ಅಲ್ಲು ಅರ್ಜುನ್ ಬಗ್ಗೆ ಪವನ್ ಕಲ್ಯಾಣ್ ಮಾತು!
ಗೇಮ್ ಚೇಂಜರ್ ಇವೆಂಟ್ ವೇದಿಕೆ ಮೇಲೆ ಟಾಲಿವುಡ್ ಸಿನಿಮಾ ಹಾಗೂ ಟಾಲಿವುಡ್ ನಟರ ಬಗ್ಗೆ ಮಾತಾಡ್ತಿದ್ದ ಪವನ್ ಕಲ್ಯಾಣ್, ಕೆಲವು ಜನರಿಗೆ ಜೂನಿಯರ್ ಎನ್ಟಿಆರ್ ಇಷ್ಟಪಡುತ್ತಾರೆ. ಇನ್ನು ಕೆಲವರು ಅಲ್ಲು ಅರ್ಜುನ್ ಅವರನ್ನು ಇಷ್ಟಪಡುತ್ತಾರೆ. ಪ್ರಭಾಸ್ ಅವರಿಗೆ ಅವರದ್ದೇ ಫ್ಯಾನ್ಸ್ ಇದ್ದಾರೆ ಎಂದು ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ರು.
ಪುಷ್ಪರಾಜ್ ಫ್ಯಾನ್ಸ್ ಅಬ್ಬರ
ವೇದಿಕೆ ಮೇಲೆ ಡಿಸಿಎಂ ಪವನ್ ಕಲ್ಯಾಣ್, ನಟ ಅಲ್ಲು ಅರ್ಜುನ್ ಹೆಸರು ಹೇಳ್ತಿದ್ದಂತೆ ನೆರೆದಿದ್ದ ಜನರು ಜೋರಾಗಿ ಕೂಗಿದ್ರು. ಕೆಲ ಕ್ಷಣ ಸೈಲೆಂಟ್ ಆದ ಪವನ್, ಮತ್ತೆ ಮಾತು ಶುರು ಮಾಡಿದ್ರು. ಅಲ್ಲು ಅರ್ಜುನ್ ಬಗ್ಗೆ ಮತ್ತಷ್ಟು ಮಾತಾಡಬಹುದು ಅನ್ನೋ ನಿರೀಕ್ಷೆ ಜನರಲ್ಲಿತ್ತು.