ಸಾಮಾನ್ಯವಾಗಿ ಯಾವುದಾದರೂ ಎರಡು ರಾಜ್ಯಗಳು ನದಿ ನೀರು ಹಂಚಿಕೆಗಾಗಿಯೊ ಅಥವಾ ಗಡಿ ಭಾಗದ ಗ್ರಾಮಗಳಿಗಾಗಿ ಕಿತ್ತಾಡುತ್ತಾರೆ. ಆದರೆ ಇಲ್ಲೊಂದು ಎಮ್ಮೆವೊಂದರ ಸಮಸ್ಯೆ ಎರಡು ರಾಜ್ಯಗಳ ನಡುವೆ ಉಲ್ಬಣಗೊಂಡಿದ್ದು, ಎರಡು ರಾಜ್ಯಗಳು ಗ್ರಾಮಸ್ಥರು ಒಬ್ಬರ ವಿರುದ್ದ ಮತ್ತೊಬ್ಬರು ದೂರು ದಾಖಲಿಸಿಕೊಂಡಿದ್ದಾರೆ. ಹೌದು ನಮ್ಮ ರಾಜ್ಯದ ಬಳ್ಳಾರಿ (Bellary) ಜಿಲ್ಲೇಯ ಬೊಮ್ಮನಹಾಳ್ (Bommanahal) ಗ್ರಾಮದ ಎಮ್ಮೆ ಒಂದರ ಮೇಲಿನ ಹಕ್ಕಿಗಾಗಿ ನರೆಯ ಆಂಧ್ರ ಪ್ರದೇಶದ (Andhra Pradesh) ಮೆದಹಾಳ್ (Medahal) ಗ್ರಾಮಸ್ಥರು ಮೋಕಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಪ್ರಕರಣ ಕೇಸ್ ದಾಖಲಾಗುವುದರೊಂದಿಗೆ ನಿಂತಿಲ್ಲ ಎರಡು ಗ್ರಾಮಗಳ ಜನರು ಡಿಎನ್ಎ ಪರೀಕ್ಷೆಗಾಗಿ ಪಟ್ಟು ಇಡಿದಿವೆ.
ಎರೆಡು ಊರಿನವರಿಂದ ಹಕ್ಕು ಮಂಡನೆ
ಜನವರಿಯಲ್ಲಿ ನಿಗದಿಯಾಗಿದ್ದ ಸಕ್ಕಮಾದೇವಿ ಜಾತ್ರೆಗೆಂದು ಬೊಮ್ಮನಹಾಳ್ ಗ್ರಾಮದ ಜನರು ಐದು ವರ್ಷದ ಎಮ್ಮೆಯನ್ನು ಬಿಡಾದಿ ಬಿಟ್ಟಿದ್ದರು. ನಂತರ ಈ ಎಮ್ಮೆಯೂ ಬೊಮ್ಮನಹಾಳ್ ಗ್ರಾಮದಿಂದ 20 ಕೀ.ಮಿ. ದೂರವಿರುವ ಪಕ್ಕದ ಆಂಧ್ರದ ಮೆದಹಾಳ್ ಗ್ರಾಮಕ್ಕೆ ತೆರಳಿರುತ್ತದೆ. ನಂತರದ ಇದನ್ನು ತೀಳಿದ ಬೊಮ್ಮನಹಾಳ್ ಗ್ರಾಮಸ್ಥರು ಮೆದಹಾಳ ಗ್ರಾಮಕ್ಕೆ ತೆರಳಿದ್ದು, ನಂತರ ಮೆದಹಾಳ ಗ್ರಾಮದ ಜನರು ಈ ಎಮ್ಮೆ ನಮ್ಮ ಊರಿನದ್ದು ಎಂದು ಹಕ್ಕು ಸಾಧಿಸಿದ್ದಾರೆ.
ಮತ್ತೊಂದೆಡೆ ಆಂಧ್ರದ ಮೆದಹಾಳ್ ಗ್ರಾಮದ ಗ್ರಾಮಸ್ಥರು ಈ ಎಮ್ಮೆಯನ್ನು ನಾವು ದ್ಯಾವಮ್ಮ ದೇವಿಯ ಜಾತ್ರೆಗೆಂದು ಬಿಡಾದಿ ಬಿಟ್ಟಿದ್ದೇವೆ ಎನ್ನುತ್ತಾ, ಎಂಟಕ್ಕೂ ಹೆಚ್ಚು ಮಂದಿ ಆ ಎಮ್ಮೆಯನ್ನು ಕಾವಲು ಕಾಯುತ್ತಿದ್ದಾರೆ. ಇದಕ್ಕೆ ಬೊಮ್ಮನಹಾಳ್ ಗ್ರಾಮದ ಜನರು ಈ ಎಮ್ಮೆ ನಮ್ಮದು ಎನ್ನುತ್ತಾ ಸಕ್ಕಮಾದೇವಿಗೆ ಹರಕೆ ತೀರಿಸುವುದಾಗಿ ಹಠ ಹಿಡಿದಿವೆ.
ಸಮಸ್ಯೆ ಪರಿಹರಿಸಲು ಅಧಿಕಾರಿಗಳ ಹರಸಾಹಸ
ಏತನ್ಮಧ್ಯೆ ಜನವರಿಯಲ್ಲಿ ನಡೆಯುತ್ತಿರುವ ಎರಡು ಗ್ರಾಮದ ಜಾತ್ರೆಗಳು ಬಹಳ ಸಮಯದ ನಂತರ ನಡೆಯುತ್ತಿರುವುದರಿಂದ ಈ ಸಮಸ್ಯೆಯಾಗಿದ್ದು, ಬಳ್ಳಾರಿಯ ಬೊಮ್ಮನಹಾಳ್ ಗ್ರಾಮದ ಸಕ್ಕಮಾದೇವಿ ಜಾತ್ರೆ ಐದು ವರ್ಷಗಳ ನಂತರ ನಡೆಯುತ್ತಿದ್ದರೆ, ಆಂಧ್ರದ ಮೆದಹಾಳ್ ಗ್ರಾಮದ ದ್ಯಾವಮ್ಮ ದೇವಿಯ ಜಾತ್ರೆಯು ಮೂರು ವರ್ಷಗಳ ನಂತರ ಜರಗುತ್ತಿದೆ. ಈ ಕಾರಣದಿಂದ ಎರಡು ಗ್ರಾಮಗಳಿಗೆ ಎಮ್ಮೆ ಪ್ರತಿಷ್ಠಯಾಗಿದ್ದು, ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಹರಸಾಹಸ ಪಡುತ್ತಿದ್ದಾರೆ.