ಬೆಳಗಾವಿ

ಬೊಲ್ಯಾಂಡ್​-ಸ್ಟಾರ್ಕ್​ ದಾಳಿಗೆ ಭಾರತ ತತ್ತರ! ಸಿಡ್ನಿಯಲ್ಲಿ ಮೊದಲ ದಿನವೇ 185ಕ್ಕೆ ಆಲೌಟ್

IND vs AUS

ಭಾರತ ತಂಡ ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್ ಟ್ರೋಫಿಯ (Border Gavaskar Trophy) 5ನೇ ಪಂದ್ಯದಲ್ಲಿ ಮೊದಲ ದಿನವೇ ಮುಗ್ಗರಿಸಿದೆ. ಆಸೀಸ್​ ವೇಗಿಗಳ (Australia Pacers) ಮಾರಕ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 185ಕ್ಕೆ ಸರ್ವಫತನ ಕಂಡಿದೆ. ಇಡೀ ತಂಡದಲ್ಲಿ ಯಾವೊಬ್ಬ ಭಾರತೀಯ ಬ್ಯಾಟರ್ ಅರ್ಧಶತಕ ಸಿಡಿಸಿಲಿಲ್ಲ. ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) 40 ರನ್​ಗಳಿಸಿದ್ದೇ ಗರಿಷ್ಠ ಸ್ಕೋರ್ ಆದರೆ, ಜಡೇಜಾ 26 ಹಾಗೂ 10ನೇ ಬ್ಯಾಟರ್ ನಾಯಕ ಬುಮ್ರಾ 22 ರನ್​ಗಳಿಸಿದರು.

ಆರಂಭಿಕ ಆಘಾತ

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್​ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. ರೋಹಿತ್ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಕನ್ನಡಿಗ ರಾಹುಲ್ ಕೇವಲ 4 ರನ್​ಗಳಿಗೆ ಪೆವಿಲಿಯನ್​ಗೆ ಮರಳಿದರು. ನಂತರ ಕಳೆದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್​ಗಳಲ್ಲಿ ಅರ್ಧಶತಕ ಸಿಡಿಸಿದ್ದ ಜೈಸ್ವಾಲ್ 10 ರನ್​ಗಳಿಸಿ ಬೋಲ್ಯಾಂಡ್​ಗೆ ವಿಕೆಟ್ ಒಪ್ಪಿಸಿದರು.

ಕೊನೆ ಟೆಸ್ಟ್​​ನಲ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದ ಶುಭ್​ಮನ್​ ಗಿಲ್ (20)​ ಭೋಜನ ವಿರಾಮದ ಕೊನೆಯ ಎಸೆತದಲ್ಲಿ ಲಿಯಾನ್ ಬೌಲಿಂಗ್​ನಲ್ಲಿ ಸ್ಲಿಪ್​ ಫೀಲ್ಡರ್​ ಕೈಗೆ ಕ್ಯಾಚ್​ ನೀಡಿ ಔಟಾದರು. ದೌರ್ಬಲ್ಯ ಮೆಟ್ಟಿ ನಿಂತು 69 ಎಸೆತಗಳನ್ನು ತಾಳ್ಮೆಯಿಂದ ಎದುರಿಸಿದ್ದ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲೂ ಮತ್ತದೇ ತಪ್ಪು ಮಾಡಿ ವಿಕೆಟ್ ಕೈಚೆಲ್ಲಿದರು. ಬೊಲ್ಯಾಂಡ್ ಎಸೆತ ಔಟ್​ ಸೈಡ್ ಆಫ್​ ಸ್ಟಂಪ್​ ಎಸೆತವನ್ನ ಆಡಲು ಹೋಗಿ ಎಡ್ಜ್​ ಆಗಿ ಕ್ಯಾಚ್ ಔಟ್ ಆದರು.

ಈ ಹಂತದಲ್ಲಿ ಒಂದಾದ ಜಡೇಜಾ ಹಾಗೂ ರಿಷಭ್ ಪಂತ್​ 48 ರನ್​ಗಳ ಜೊತೆಯಾಟ ನಡೆಸಿದರು. 98 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 40 ರನ್​ಗಳಿಸಿದ್ದ ಪಂತ್ ಎಂದಿನಂತೆ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಸುಲಭವಾಗಿ ಕ್ಯಾಚ್ ನೀಡಿ ಔಟಾದರು. ಇವರ ವಿಕೆಟ್​ನೊಂದಿಗೆ ಭಾರತದ ಪತನಕ್ಕೆ ಕಾರಣವಾಯಿತು. ನಂತರದ ಎಸೆತದಲ್ಲಿ ನಿತೀಶ್ ರೆಡ್ಡಿ ಖಾತೆ ತೆರೆಯದೇ ಗೋಲ್ಡನ್ ಡಕ್ ಆದರೆ, ವಾಷಿಂಗ್ಟನ್ ಸುಂದರ್ 30 ಎಸೆತಗಳಲ್ಲಿ 14, ಪ್ರಸಿಧ್ ಕೃಷ್ಣ 3 ರನ್​ಗಳಿಗೆ ಔಟಾದರು, ನಾಯಕ ಬುಮ್ರಾ 17 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 22 ರನ್​ಗಳಿಸಿದರು.

You may also like

how to understand your loved ones not in love
ಬೆಳಗಾವಿ

ನೀವು ಪ್ರೀತಿಸುವ ವ್ಯಕ್ತಿ ನಿಮ್ಮನ್ನು ಇಷ್ಟಪಡುತ್ತಿಲ್ಲ ಅನ್ನೋದನ್ನು ತಿಳಿದುಕೊಳ್ಳೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಪ್ರತಿ ದಿನ ನಾವು ಅನೇಕ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಭೇಟಿ ಮಾಡುತ್ತೇವೆ ಮತ್ತು ಎಲ್ಲರೊಡನೆ ಚೆನ್ನಾಗಿಯೇ ಇರಲು ಬಯಸುತ್ತೇವೆ ಮತ್ತು ಅದಕ್ಕಾಗಿ ನಾವು ಮತ್ತು ಅವರು ಸಹ