ಮನುಷ್ಯನ ಆರೋಗ್ಯಕ್ಕೆ (Human Health) ನೀರು ತುಂಬಾ ಮುಖ್ಯ. ಪ್ರತಿದಿನ ಹೆಚ್ಚಾಗಿ ನೀರು (Water) ಕುಡಿದರೆ ಮಾತ್ರ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡುತ್ತವೆ ಮತ್ತು ದೇಹವು ಸಕ್ರಿಯವಾಗಿರುತ್ತದೆ. ಆದರೆ ಪ್ರತಿನಿತ್ಯ ನೀರು ಕುಡಿಯುವುದು ಎಷ್ಟು ಮುಖ್ಯವೋ ಅದನ್ನು ಸರಿಯಾಗಿ ಕುಡಿಯುವುದು ಅಷ್ಟೇ ಮುಖ್ಯ. ಹಾಗಾದ್ರೆ ಯಾವಾಗ ನೀರು ಕುಡಿಯಬೇಕು? ಯಾವ ಸಮಯದಲ್ಲಿ ಕುಡಿಯಬಾರದು ಎಂಬುದನ್ನು ಎಲ್ಲರೂ ತಿಳಿದಿರಬೇಕು. ತಿಂದ ತಕ್ಷಣ ನೀರು ಕುಡಿಯುವುದು, ನಿಂತಲ್ಲೇ ನೀರು ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ. ಅದರಲ್ಲೂ ಮೂತ್ರ ವಿಸರ್ಜನೆಯ ನಂತರ ನೀರು ಕುಡಿಯುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ಬಗ್ಗೆ ತಜ್ಞರು ಒಂದಷ್ಟು ಮಾಹಿತಿ ನೀಡಿದ್ದಾರೆ. ಮೂತ್ರ ವಿಸರ್ಜನೆ (Urinating) ಮಾಡಿದ ತಕ್ಷಣ ನೀರು ಕುಡಿದರೆ ಕಿಡ್ನಿ ಮೇಲೆ ಹೊರೆ ಬೀಳುತ್ತದೆ ಹಾಗೂ ದೀರ್ಘಾವಧಿಯಲ್ಲಿ ಈ ಚಟ ಕಿಡ್ನಿ ರೋಗಗಳಿಗೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಮೂತ್ರ ವಿಸರ್ಜನೆ ನಂತರ ಏಕೆ ನೀರು ಕುಡಿಯಬಾರದು?
ಮೂತ್ರ ವಿಸರ್ಜನೆಯ ನಂತರ ತಕ್ಷಣ ನೀರು ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಆಯುರ್ವೇದ ಹಾಗೂ ಆಧುನಿಕ ವಿಜ್ಞಾನ ಹೇಳುತ್ತದೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿರುವ ರಕ್ತ ಮತ್ತು ಕಲ್ಮಶಗಳನ್ನು ಶೋಧಿಸುತ್ತವೆ. ಇದು ಕಲ್ಮಶಗಳನ್ನು ಫಿಲ್ಟರ್ ಮಾಡುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಮೂತ್ರಪಿಂಡಗಳು ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಫಿಲ್ಟರ್ ಮಾಡಿದ ನಂತರ, ಉಳಿದ ಮೂತ್ರವನ್ನು ಮೂತ್ರಕೋಶಕ್ಕೆ ಕಳುಹಿಸಲಾಗುತ್ತದೆ. ಇದರಿಂದಾಗಿ ಮೂತ್ರ ವಿಸರ್ಜಿಸುವಾಗಲೂ ಮೂತ್ರಪಿಂಡಗಳು ಮೂತ್ರನಾಳದ ಜೊತೆಗೆ ಮೂತ್ರನಾಳದಲ್ಲಿರುವ ಮೂತ್ರವನ್ನು ಹೊರಹಾಕಲು ಶ್ರಮಿಸುತ್ತವೆ. ಆದರೆ ಮೂತ್ರ ವಿಸರ್ಜನೆಯ ನಂತರ ಮತ್ತೆ ನೀರು ಕುಡಿಯುವುದು ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮೂತ್ರಕೋಶದಲ್ಲಿನ ಮೂತ್ರವನ್ನು ಹೊರಹಾಕಲು ಶ್ರಮಿಸಿದ ಮೂತ್ರಪಿಂಡಗಳಿಗೆ ಸ್ವಲ್ಪ ವಿಶ್ರಾಂತಿ ಬೇಕು. ಆಗ ಮಾತ್ರ ಮತ್ತೆ ಕ್ರಿಯಾಶೀಲರಾಗಲು ಸಾಧ್ಯ.
ಅಲ್ಲದೇ, ಮೂತ್ರ ವಿಸರ್ಜನೆ ಮಾಡಿದ ತಕ್ಷಣ ನೀರು ಕುಡಿಯುವುದರಿಂದ ಮೂತ್ರಪಿಂಡದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ. ಇದರಿಂದ ವಿಶ್ರಾಂತಿ ಇಲ್ಲದೇ ಮೂತ್ರಪಿಂಡಗಳು ಕೆಲಸ ಮಾಡುತ್ತದೆ. ಇದು ದೀರ್ಘಾವಧಿಯಲ್ಲಿ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಮೂತ್ರ ವಿಸರ್ಜನೆ ಮಾಡಿದ ತಕ್ಷಣ ನೀರು ಕುಡಿಯುವುದು ಮೂತ್ರಪಿಂಡದ ಆರೋಗ್ಯಕ್ಕೆ ಹಾನಿಕರ ಎಂದು ತಜ್ಞರು ಹೇಳುತ್ತಾರೆ.