ಚಿಕ್ಕಬಳ್ಳಾಪುರ

ಸಾಂದೀಪನಿ ಶಿಷ್ಯವೇತನ; ಬ್ರಾಹ್ಮಣ ವಿದ್ಯಾರ್ಥಿಗಳಿಗೆ 5.85 ಕೋಟಿ ರೂ ಶಿಷ್ಯವೇತನ ಬಿಡುಗಡೆ ಮಾಡಿದ ಸಿಎಂ

scholarship fort brahmin

ರಾಜ್ಯ ಸರ್ಕಾರವು ಬ್ರಾಹ್ಮಣ (Brahmin) ವಿದ್ಯಾರ್ಥಿಗಳಿಗೆ ಸುಮಾರು ₹5.85 ಕೋಟಿ ಶಿಷ್ಯವೇತನ ಬಿಡುಗಡೆ ಮಾಡಿದೆ. ಕರ್ನಾಟಕ (Karnataka) ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಾಂದೀಪನಿ ಶಿಷ್ಯವೇತನ ಯೋಜನೆಯಡಿ 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸುಮಾರು ₹5.85 ಕೋಟಿ ಶಿಷ್ಯವೇತನ ಬಿಡುಗಡೆಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ (State Government) ತಿಳಿಸಿದೆ.

ಎಕ್ಸ್​ನಲ್ಲಿ ಸಿದ್ದರಾಮಯ್ಯ ಮಾಹಿತಿ

ಶಿಷ್ಯವೇತನ ಬಿಡುಗಡೆ ಮಾಡಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸಾಂದೀಪನಿ ಶಿಷ್ಯವೇತನ ಯೋಜನೆಯಡಿ 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸುಮಾರು ₹5.85 ಕೋಟಿ ಶಿಷ್ಯವೇತನ ಬಿಡುಗಡೆಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟು 4474 ಅರ್ಜಿಗಳು ಸಲ್ಲಿಕೆ

ಸಾಂದೀಪನಿ ಶಿಷ್ಯವೇತನ ಯೋಜನೆಯಡಿ 2023-24 ನೇ ಸಾಲಿನಲ್ಲಿ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ವಿದ್ಯಾರ್ಥಿಗಳಿಗೆ ಮಂಡಳಿಯ ವತಿಯಿಂದ ಬಿಡುಗಡೆಯಾದ ಅನುದಾನ ವಿವರವನ್ನು ಸರ್ಕಾರ ಹಂಚಿಕೊಂಡಿದೆ. 2023-24 ನೇ ಸಾಲಿನಲ್ಲಿ ಒಟ್ಟು 4474 ಅರ್ಜಿಗಳು ಸಲ್ಲಿಕೆಯಾಗಿದ್ದು, ಶಿಷ್ಯವೇತನ ಪಾವತಿಸ ಬಹುದಾದ ಅರ್ಹ ಅರ್ಜಿಗಳ ಸಂಖ್ಯೆ 3958 ಎಂದು ತಿಳಿಸಿದೆ.

You may also like

how-to-change-date-of-birth-in-pan-card
ಚಿಕ್ಕಬಳ್ಳಾಪುರ

Pan Card ನಲ್ಲಿ ನಿಮ್ಮ Date of Birth ತಪ್ಪಾಗಿದ್ಯಾ? ಆನ್‌‌ಲೈನ್‌‌ನಲ್ಲಿ ಹೀಗೆ ಚೇಂಜ್‌ ಮಾಡಿ!

ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (Pan Cared) ಎಷ್ಟು ಮುಖ್ಯ ಎಂದು ಹೇಳಬೇಕಾಗಿಲ್ಲ. ಸರ್ಕಾರಿ ಕೆಲಸದಿಂದ (Government Job) ಹಿಡಿದು ಹಣಕಾಸಿನ ವಹಿವಾಟಿನವರೆಗೆ ಇದು ಅನಿವಾರ್ಯವಾಗಿದೆ. ಆದರೆ,