ಲಾಕ್‌ಡ್ ಡೌನ್, ದ ಪ್ರಿನ್ಸಸ್ ಡೈರೀಸ್, ಇಂಟರ್‌ಸ್ಟೆಲ್ಲರ್ ಸಿನಿಮಾ ನೋಡಿದವರಿಗೆ ಈ ನಟಿ ಯಾರು ಎಂದು ಹೇಳಬೇಕಂತನೇ ಇಲ್ಲ. ಹಾಲಿವುಡ್‌ನ (Hollywood) ಬಹುಬೇಡಿಕೆಯ ನಟಿಯರಲ್ಲಿ ಇವರೂ ಒಬ್ಬರು. ಇಂದು ನಾವು ಹಾಲಿವುಡ್ ಸ್ಟಾರ್ ಅನ್ನಿ ಹಾಥ್‌ವೇ ಬಗ್ಗೆ ಹೇಳುತ್ತಿದ್ದೇವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅನ್ನಿ ಹಾಥ್‌ವೇ (Anne Hathway) ಮತ್ತು ಜನಪ್ರಿಯ ಬಾಣಸಿಗ ವಿಕಾಸ್ ಖನ್ನಾ (Chef Vikas Khunna) ಫೋಟೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಅನ್ನಿ ಹಾಥ್‌ವೇ, ಜನಪ್ರಿಯ ಚೆಫ್ ವಿಕಾಸ್ ಖನ್ನಾ ಅವರ ನ್ಯೂಯಾರ್ಕ್ ಮೂಲದ ರೆಸ್ಟೋರೆಂಟ್‌ಗೆ ಹೋಗಿದ್ದಾರೆ.
ಹೌದು, ಹಾಲಿವುಡ್ ಸ್ಟಾರ್ ಅನ್ನಿ ಹಾಥ್‌ವೇ, ಫೇಮಸ್ ಚೆಫ್ ವಿಕಾಸ್ ಖನ್ನಾ ಅವರ ನ್ಯೂಯಾರ್ಕ್ ಮೂಲದ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದು, ಇಲ್ಲಿ ಭಾರತೀಯ ಆಹಾರವನ್ನು ಸೇವಿಸಿದ್ದಾರೆ. ಈ ಪ್ರೀತಿಗಾಗಿ ವಿಕಾಸ್ ಖನ್ನಾ, ಅನ್ನಿ ಹಾಥ್‌ವೇಗೆ ನಮ್ಮ ಕರ್ನಾಟಕದ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್ ನೀಡಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್ ಆಗುತ್ತಿದೆ.
ಸೆಲೆಬ್ರಿಟಿಗಳ ಫೇವರೀಟ್ ರೆಸ್ಟೋರೆಂಟ್!
ಫೇಮಸ್ ಚೆಫ್ ವಿಕಾಸ್ ಖನ್ನಾ ಅವರ ನ್ಯೂಯಾರ್ಕ್ ಮೂಲದ ರೆಸ್ಟೋರೆಂಟ್ ಇಂದು ಸೆಲೆಬ್ರಿಟಿಗಳ ನೆಚ್ಚಿನ ಸ್ಥಳ ಎಂದರೆ ತಪ್ಪಾಗದು. ಶಾರುಖ್ ಖಾನ್‌ನಿಂದ ಜೆಫ್ ಬೆಜೋಸ್‌ವರೆಗೆ, ಪ್ರಸಿದ್ಧ ಗಣ್ಯರು ಈ ಹೆಸರಾಂತ ರೆಸ್ಟೋರೆಂಟ್‌ಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇತ್ತೀಚೆಗೆ ಹಾಲಿವುಡ್ ನಟಿ ಅನ್ನಿ ಹಾಥ್ ವೇ ಈ ಪ್ರತಿಷ್ಠಿತ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದರು. ಈ ಬಗ್ಗೆ ವಿಕಾಸ್ ಖನ್ನಾ ಪೋಸ್ಟ್ ಒಂದನ್ನೂ ಹಂಚಿಕೊಂಡಿದ್ದಾರೆ
ಹಾಲಿವುಡ್ ಸ್ಟಾರ್‌ಗೆ ಮೈಸೂರು ಸ್ಯಾಂಡಲ್ ಗಿಫ್ಟ್!
ಖನ್ನಾ ಅವರ ರೆಸ್ಟೊರೆಂಟ್‌ನಲ್ಲಿ ಹ್ಯಾಥ್‌ವೇ ಕೆಲವು ರುಚಿಕರವಾದ ಭಾರತೀಯ ಆಹಾರವನ್ನು ಸೇವಿಸಿದರು. ಇನ್ನು ಹಾಥ್‌ವೇ ಖನ್ನಾ ಅವರ ರೆಸ್ಟೋರೆಂಟ್‌ಗೆ ಆಗಮಿಸಿದಕ್ಕಾಗಿ, ಅವರಿಗೆ ವಿಕಾಸ್ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಆಗ್ರಾದ ಕರಕುಶಲ ಅಮೃತಶಿಲೆಯ ಪೆಟ್ಟಿಗೆಯೊಂದಿಗೆ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದರು.
ಈ ಹಿಂದೆ, ಹಾಲಿವುಡ್ ಸ್ಟಾರ್ ಕ್ಯಾರಿ ಬ್ರಾಡ್‌ಶಾ ಕೂಡ ಈ ಬಂಗಲೆಗೆ ಭೇಟಿ ನೀಡಿ ಊಟ ಮಾಡಿದ್ದರು ಮತ್ತು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರೆಸ್ಟೋರೆಂಟ್‌ನಲ್ಲಿನ ತನ್ನ ಆರೋಗ್ಯಕರ ಅನುಭವದ ಬಗ್ಗೆ ಮಾತನಾಡಿದ್ದರು. ಇದೀಗ ಮತ್ತೊಬ್ಬರು ಸ್ಟಾರ್ ಭೇಟಿ ನೀಡಿದ್ದು, ಇವರಿಗೆ ಮೈಸೂರು ಸ್ಯಾಂಡಲ್ ಸೋಪ್ ನೀಡಿರುವುದು ಮತ್ತಷ್ಟು ಪ್ರಶಂಸೆಗೆ ಪಾತ್ರವಾಗಿದೆ ಮತ್ತು ಕರ್ನಾಟಕಕ್ಕೂ ಹೆಮ್ಮೆ ಎಂಬಂತಾಗಿದೆ.