ರೆಬಲ್ ಸ್ಟಾರ್ ಅಂಬರೀಶ್ (Ambareesh) ಅವರ ಮೊಮ್ಮಗನ ಭಾವ ಚಿತ್ರ (Grandson Photos) ರಿವೀಲ್ ಆಗಿದೆ. ಆದರೆ, ಈ ಒಂದು ಫೋಟೋದಲ್ಲಿ ಮಗುವಿನ ಮುಖ ಕಾಣೋದಿಲ್ಲ. ಬದಲಾಗಿ ಕೈ ಮಾತ್ರ ಕಾಣಿಸುತ್ತದೆ. ಮಗನ ಈ ಒಂದು ವಿಶೇಷ ಫೋಟೋವನ್ನ ಅಂಬರೀಶ್ (Ambareesh) ಸೊಸೆ ಅವಿವಾ ಬಿದ್ದಪ್ಪ ರಿವೀಲ್ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿಯೇ ಈ ಒಂದು ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದ ಜೊತೆಗೆ ಒಂದೆರಡು ವಿಶೇಷ ಲೈನ್ ಕೂಡ ಬರೆದುಕೊಂಡಿದ್ದಾರೆ. ಈ ಲೈನ್ ಅಲ್ಲಿ ಡ್ರ್ಯಾಗನ್ ಬಾಯ್ (Dragon Boy) ಅನ್ನೋ ಪದ ಕೂಡ ಇದೆ. ಹಾಗೆ ಈ ಒಂದು ಫೋಟೋಗೆ ಅಭಿಷೇಕ್ ಅಂಬರೀಶ್ ಕೂಡ ಒಂದು ಕಾಂಪ್ಲಿಮೆಂಟ್ ಹಾಕಿದ್ದಾರೆ. ಅದು ಏನು ಗೊತ್ತೇ? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ನನ್ನ ರಾಜ ನನ್ನ ಮಗ…
ಅಭಿಷೇಕ್ ಅಂಬರೀಶ್ ತಮ್ಮ ಮಗನನ್ನ ‘ನನ್ನ ರಾಜ’ ಅಂತಲೇ ಕರೆದಿದ್ದಾರೆ. ಪತ್ನಿ ಅವಿವಾ ಬಿದ್ದಪ್ಪ ಸೋಷಿಯಲ್ ಮೀಡಿಯಾದಲ್ಲಿ ಹಾಕಿರೋ ಫೋಟೋಗೇನೆ ಈ ರೀತಿ ಅಭಿಷೇಕ್ ಅಂಬರೀಶ್ ಕಾಮೆಂಟ್ ಬಾಕ್ಸ್ ಅಲ್ಲಿ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಹಾಗೇನೆ ಪತ್ನಿ ಬರೆದ ಲೈನ್ ಅನ್ನೂ ಓದಿದ್ದಾರೆ.
ಡ್ರ್ಯಾಗನ್ ಬಾಯ್
ಅಭಿಷೇಕ್ ಅಂಬರೀಶ್ ಪತ್ನಿ ಅವಿತಾ ಬಿದ್ದಪ್ಪ ತಮ್ಮ ಮಗನನ್ನ ಡ್ರ್ಯಾಗನ್ ಬಾಯ್ ಅಂತಲೇ ಕರೆದಿದ್ದಾರೆ. ಹಾಗೇನೆ ರೆಬೆಲ್ ಫ್ಯಾಮಿಲಿ ತೋರಿದ ಪ್ರೀತಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಹಾಗೇನೆ ಹೊಸ ವರ್ಷದ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ.
ಮಗನ ಫೋಟೋ ಶೇರ್
ಅವಿತಾ ಬಿದ್ದಪ್ಪ ತಮ್ಮ ಮಗನ ಫೋಟೋ ಶೇರ್ ಮಾಡಿದ್ದಾರೆ. ಆದರೆ, ಈ ಒಂದು ಫೋಟೋದಲ್ಲಿ ಮಗನ ಮುಖವೇನೂ ಕಾಣಿಸೋದಿಲ್ಲ. ಆದರೆ, ಪುಟ್ಟ ಕೈ ಮಾತ್ರ ಕಾಣಿಸುತ್ತದೆ. ಚೂರೇ ಚೂರು ಅನ್ನೋ ಹಾಗೆ ಮುಖವೂ ಕಂಡಂತಾಗುತ್ತದೆ. ಅದು ಬಿಟ್ರೆ, ಜೂನಿಯರ್ ರೆಬಲ್ ಜೋರಾಗಿಯೇ ಇದ್ದಂತೆ ಫೀಲ್ ಆಗುತ್ತದೆ.
ಜೂನಿಯರ್ ರೆಬಲ್ ಸೂಪರ್
ಅವಿತಾ ಬಿದ್ದಪ್ಪ ಹಂಚಿಕೊಂಡ ಮಗನ ಫೋಟೋಗೆ ಕಾಂಪ್ಲಿಮೆಂಟ್ಸ್ ಬಂದಿವೆ. ಜೂನಿಯರ್ ರೆಬಲ್ ಸೂಪರ್ ಅನ್ನೋ ಸಾಲುಗಳನ್ನ ಇಲ್ಲಿ ಬರೆಯಲಾಗಿದೆ. ಇಬ್ಬರಿಗೂ ಅಭಿನಂದನೆಗಳು ಅಂತಲೂ ಅದ್ಯಾರೋ ಕಾಮೆಂಟ್ ಬಾಕ್ಸ್ ಅಲ್ಲಿಯೇ ತಿಳಿಸಿದ್ದಾರೆ.