ಧ್ಯಾನವು (Meditation) ದೇಹ (Body) ಮತ್ತು ಮನಸ್ಸನ್ನು (Mind) ಶಾಂತಗೊಳಿಸುವ (Calms) ಅತ್ಯಂತ ಪ್ರಾಚೀನ ಅಭ್ಯಾಸಗಳಲ್ಲಿ ಒಂದಾಗಿದೆ, ಇದು ಇಂದಿಗೂ ತುಂಬಾನೇ ಪ್ರಸ್ತುತವಾಗಿದೆ. ಇದು ಕೇವಲ ಮನಸ್ಸನ್ನು ಶಾಂತಗೊಳಿಸುವುದಲ್ಲದೆ, ಮಾನಸಿಕ ಸ್ಪಷ್ಟತೆ (Mental Clarity) ನೀಡುತ್ತದೆ, ಒಳಗಿನಿಂದ ನಿಮ್ಮನ್ನು ಗುಣಪಡಿಸುತ್ತದೆ. ಧ್ಯಾನ ಎಂಬುದು ನಿಮ್ಮನ್ನು ಭಾವನಾತ್ಮಕವಾಗಿ ಬಲಪಡಿಸುತ್ತದೆ ಮತ್ತು ಆರೋಗ್ಯಕರ ಜೀವನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಧ್ಯಾನ ಮಾಡಲು ಶಾಂತವಾದ ಸ್ಥಳ ಹುಡುಕಿಕೊಳ್ಳಿ
ಯಶಸ್ವಿ ಧ್ಯಾನದ ಮೊದಲ ಹಂತವೆಂದರೆ ನೀವು ಸಂಪೂರ್ಣವಾಗಿ ಶಾಂತ ಮತ್ತು ವಿಶ್ರಾಂತಿ ಪಡೆಯುವ ಸ್ಥಳವನ್ನು ಕಂಡುಕೊಳ್ಳುವುದು. ಆ ಸ್ಥಳ ತುಂಬಾನೇ ಪ್ರಶಾಂತವಾಗಿರಬೇಕು ಮತ್ತು ಅಲ್ಲಿ ಯಾವುದೇ ರೀತಿಯ ಸದ್ದು ಗದ್ದಲಗಳಿರಬಾರದು. ಅದು ಸುರಕ್ಷಿತ ಮತ್ತು ನಿಮ್ಮ ಮನಸ್ಸು ಮತ್ತು ದೇಹಕ್ಕೆ ಪರಿಚಿತವಾಗಿರಬೇಕು. ಶಾಂತವಾದ, ಪರಿಚಿತ ಜಾಗದಲ್ಲಿರುವಾಗ, ನಿಮ್ಮ ದೇಹವನ್ನು ವಿಶ್ರಾಂತಿ ಕ್ರಮದಲ್ಲಿ ಇರಿಸಲು ಮತ್ತು ನಿಮ್ಮ ಧ್ಯಾನಕ್ಕೆ ನೇರವಾಗಿ ಧುಮುಕುವುದು ಸುಲಭವಾಗುತ್ತದೆ.
ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ
ಧ್ಯಾನ ಮಾಡುವ ಮುನ್ನ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಆರಾಮವಾಗಿ ಮತ್ತು ಸರಿಯಾದ ಭಂಗಿಯಲ್ಲಿ ಕುಳಿತುಕೊಂಡು ಧ್ಯಾನ ಮಾಡುವುದರಿಂದ ನಿಮ್ಮಲ್ಲಿರುವ ಒತ್ತಡ ಹೊರ ಹೋಗುತ್ತದೆ ಮತ್ತು ಯಾವುದೇ ರೀತಿಯ ಆಯಾಸ ಮತ್ತು ಒತ್ತಡ ನಿಮಗೆ ಆಗುವುದಿಲ್ಲ. ಅಡ್ಡಾದಿಡ್ಡಿಯಾಗಿ ಕುಳಿತುಕೊಂಡು ಧ್ಯಾನ ಮಾಡುವುದರಿಂದ ದೇಹದ ಮೇಲೆ ಒತ್ತಡ ಉಂಟಾಗುತ್ತದೆ ಮತ್ತು ಅದು ನಿಮ್ಮನ್ನು ಧ್ಯಾನದ ಮೇಲೆ ಪೂರ್ತಿಯಾಗಿ ಗಮನ ಹರಿಸಲು ಬಿಡುವುದಿಲ್ಲ.
ಚೆನ್ನಾಗಿ ಉಸಿರಾಡಿ
ನಿಮ್ಮ ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಮುಂದಿನ ಹಂತವಾಗಿದೆ. ಉಸಿರಾಟದ ತಂತ್ರಗಳು ಧ್ಯಾನದ ಒಂದು ಪ್ರಮುಖ ಭಾಗವಾಗಿದೆ ಮತ್ತು ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನೀವು ಶಾಂತವಾಗಿ, ಕೇಂದ್ರಿತವಾಗಿ ಮತ್ತು ಕ್ಷಣದಲ್ಲಿ ಪ್ರಸ್ತುತವಾಗಿರಬಹುದು. ಆದ್ದರಿಂದ, ಒಮ್ಮೆ ನೀವು ಆರಾಮವಾಗಿ ಕುಳಿತು, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಆಳವಾಗಿ ಉಸಿರಾಡಲು ಪ್ರಾರಂಭಿಸಿ, ಮತ್ತು ನೀವು ಉಸಿರು ತೆಗೆದುಕೊಳ್ಳುವಾಗ ಮತ್ತು ಬಿಡುವಾಗ ನಿಮ್ಮ ದೇಹವು ಹೇಗೆ ಭಾಸವಾಗುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ನಿಮ್ಮ ಗಮನವಿರಲಿ.
ಅನಗತ್ಯ ಆಲೋಚನೆಗಳನ್ನು ತೆರವುಗೊಳಿಸಿ
ಈಗ, ನಿಮ್ಮ ಧ್ಯಾನದ ಅವಧಿ ಮುಗಿದ ನಂತರ ವಿಚಲಿತರಾಗುವುದು ಮತ್ತು ನೀವು ಮಾಡಬೇಕಾದ ಮುಂದಿನ ಕೆಲಸಗಳ ಬಗ್ಗೆ ಯೋಚಿಸುವುದು ಸಹಜ. ಆದರೆ, ಜಾಗರೂಕರಾಗಿರಲು ಪ್ರಯತ್ನಿಸಿ ಮತ್ತು ನಿಮ್ಮ ಮನಸ್ಸು ದೂರ ಸರಿದಿದೆ ಎಂದು ನೀವು ಅರಿತುಕೊಂಡ ತಕ್ಷಣ, ಅದನ್ನು ಒಂದು ವರ್ಗಕ್ಕೆ ಹಿಂತಿರುಗಿಸಿ ಮತ್ತು ಮತ್ತೆ ಉಸಿರಾಟದತ್ತ ಗಮನ ಹರಿಸಿ. ನಿಮ್ಮ ಮನಸ್ಸು ಅಲೆದಾಡುವುದು ಸಹಜ ಎಂಬುದನ್ನು ನೆನಪಿಡಿ, ಹೀಗಾಗಿ ಅದನ್ನು ಮತ್ತೆ ಕೇಂದ್ರೀಕರಿಸುವುದು ಹೇಗೆ ಎಂಬುದನ್ನು ಕಲಿಯುವುದು ನಿಮಗೆ ಮುಖ್ಯವಾಗಿದೆ.