ಚಾಮರಾಜನಗರ: ಅಣ್ಣ-ತಂಗಿ (Brother-Sister) ಬಾಂಧವ್ಯ ಅಂದ್ರೆ ಇನ್ನೊಬ್ಬರಿಗೆ ಮಾದರಿಯಾಗುವಂತಿರಬೇಕು. ಎಷ್ಟೋ ಸಿನಿಮಾಗಳು ಈ ಅಣ್ಣ-ತಂಗಿ ಬಾಂಧವ್ಯನ ತೋರಿಸುವಂತಹ ಪ್ರಯತ್ನ ಮಾಡಿದೆ. ಅದೇ ರೀತಿ ಸೂಪರ್‌ಹಿಟ್ ಕೂಡಾ ಆಗಿದೆ. ಆದ್ರೆ ಇಲ್ಲೊಂದು ಕಡೆ ಸ್ವಂತ ಅಣ್ಣನೇ ತಂಗಿಯನ್ನು ಕೊಚ್ಚಿ ಕೊಚ್ಚಿ ಕೊಂದು ಬಿಟ್ಟಿದ್ದಾನೆ. ಕೇವಲ ಸೌತೆಕಾಯಿ ವಿಚಾರಕ್ಕೆ ನಡೆದೇ ಹೋಯ್ತು ತಂಗಿಯ ಮರ್ಡರ್.
ಹೌದು, ಚಾಮರಾಜನಗರದಲ್ಲಿ ಅಣ್ಣನಿಂದಲೇ ತಂಗಿಯ ಬರ್ಬರವಾಗಿ ಹತ್ಯೆ ನಡೆದಿದೆ. ಕ್ಷುಲಕ ಕಾರಣಕ್ಕೆ ಶುರುವಾದ ಜಗಳ, ಅಂತ್ಯಗೊಂಡಿದ್ದು ತಂಗಿಯ ಸಾವಿನಲ್ಲಿ. ಹಾಗಿದ್ರೆ ಅಷ್ಟಕ್ಕೂ ತಂಗಿಯನ್ನು ಹತ್ಯೆ ಮಾಡಿದ್ದು ಏಕೆ? ಮನೆಯಲ್ಲಿ ಯಾರೂ ಇರಲಿಲ್ವಾ? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಅಣ್ಣನಿಂದಲೇ ತಂಗಿಯ ಬರ್ಬರ ಹತ್ಯೆ!
ಆತ ಸೈಯದ್ ಫರ್ಮಾನ್, ವಯಸ್ಸು 31. ಸೈಯದ್‌ಗೆ ವಿಪರೀತ ಬೆಟ್ಟಿಂಗ್ ಹುಚ್ಚು, ಇದರಿಂದ 5 ಲಕ್ಷಕ್ಕೂ ಅಧಿಕ ಕಳಕೊಂಡಿದ್ದ ಎಂದು ಆತನ ತಂದೆಯೇ ಹೇಳಿದ್ದಾರೆ. ಇನ್ನು ಈ ಹಣ ಕಳೆದುಕೊಂಡಿದ್ದರಿಂದ ಆಗಾಗ ಸೈಯದ್ ಟ್ರಿಗರ್ ಆಗುತ್ತಲೇ ಇದ್ದನಂತೆ. ಇದರಿಂದ ಆಗಾಗ ಮನೆಯಲ್ಲಿ ಜಗಳ ಮಾಡುತ್ತಲೇ ಇದ್ದನಂತೆ.
ಅದೇ ರೀತಿ ಇಂದು ಕೂಡಾ ಸೈಯದ್ ಫರ್ಮಾನ್ ಮನೆಯಲ್ಲಿ ನಿನ್ನೆ ರಾತ್ರಿ ಊಟ ಮಾಡುತ್ತಿದ್ದನಂತೆ. ಈ ವೇಳೆ ಸೈಯ್ಯದ್, ಅಣ್ಣನ ಮಗುವಿಗೆ ಸೌತೆಕಾಯಿ ತಿನ್ನಿಸುತ್ತಿದ್ದ ಎನ್ನಲಾಗಿದೆ. ಆದ್ರೆ ಮೊದ್ಲೆ ಮಗುವಿಗೆ ಜ್ವರ ಬಂದ ಕಾರಣ ಸೌತೆಕಾಯಿ ತಿನ್ನಿಸಬೇಡ ಅಂದಿದ್ರಂತೆ ಅತ್ತಿಗೆ ತಸ್ಲಿಮ್ ತಾಜ್.
ಇದೇ ವೇಳೆ ತಂಗಿ ಐಮಾನ್ ಭಾನು ಕೂಡಾ ಫರ್ಮಾನ್‌ಗೆ ಬೈದಿದ್ದಳು ಎಂದು ವರದಿಯಾಗಿದೆ. ತಂಗಿ ಬೈಯುತ್ತಿದ್ದಂತೆ ರೊಚ್ಚಿಗೆದ್ದ ಆರೋಪಿ ಸೈಯದ್ ಫರ್ಮಾನ್ ತಕ್ಷಣವೇ ಅಡುಗೆ ಮನೆಯಲ್ಲಿಂದ ಕತ್ತಿಯನ್ನು ತಂದು ತಂಗಿ ಐಮಾನ್ ಭಾನು ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ತಂಗಿಯ ಕುತ್ತಿಗೆಯನ್ನು ಅದೇ ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಅತ್ತಿಗೆ, ತಂದೆ ಮೇಲೂ ಹಲ್ಲೆ!
ಐಮಾನ್ ಭಾನು ಮೇಲೆ ಅಣ್ಣ ಸೈಯದ್ ಫರ್ಮಾನ್ ಹಲ್ಲೆ ಮಾಡುತ್ತಿದ್ದಂತೆಯೇ ತಕ್ಷಣವೇ ರಕ್ಷಣೆಗೆ ಬಂದ ಅತ್ತಿಗೆ ಮೇಲೂ ಈ ದುರಳ ಅಟ್ಯಾಕ್ ಮಾಡಿದ್ದಾನೆ. ಬಳಿಕ ಗಲಾಟೆಯ ಸದ್ದು ಕೇಳಿ ಬಂದ ತಂದೆಯ ಮೇಲು ಹಲ್ಲೆ ಹಂತಕ ಹೊಟ್ಟೆಗೆ ಒದ್ದು, ಕೈಮುರಿದು ತಳ್ಳಿದ್ದಾನೆ.