ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ್ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಮುಂದುವರಿಸಲು ನೈರುತ್ಯ ರೈಲ್ವೆ (Southwestern Railway Institute) ತೀರ್ಮಾನಿಸಿದೆ. ರೈಲು ಸಂಖ್ಯೆ 07363 ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ್ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಜನವರಿ 06 ರಿಂದ ಮುಂದಿನ ಆದೇಶದ ವರೆಗೆ ಪ್ರತಿ ಸೋಮವಾರ 20:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ (Hubballi News) ಹೊರಟು ಜನವರಿ 13 ಮತ್ತು 27, ಮತ್ತು ಫೆಬ್ರವರಿ 03,10 ಮತ್ತು 24, 2025 ರಂದು ಹೊರತುಪಡಿಸಿ ಬುಧವಾರ 23:30 ಗಂಟೆಗೆ ಯೋಗ ನಗರಿ ರಿಷಿಕೇಶ್ (City of Yoga Rishikesh) ತಲುಪಲಿದೆ.
ರೈಲು ಸಂಖ್ಯೆ 07364 ಯೋಗ ನಗರಿ ರಿಷಿಕೇಶ್ -ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಜನವರಿ 09 ರಿಂದ ಮುಂದಿನ ಆದೇಶದ ವರೆಗೆ ಪ್ರತಿ ಗುರುವಾರ 06:15 ಗಂಟೆಗೆ ಯೋಗ ನಗರಿ ಹೃಷಿಕೇಶದಿಂದ ಹೊರಟು ಜನವರಿ 16 ಮತ್ತು 30 ಮತ್ತು ಫೆಬ್ರವರಿ 06, 13 ಮತ್ತು 27, 2025 ಹೊರತುಪಡಿಸಿ ಶನಿವಾರ 06:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯನ್ನು ತಲುಪಲಿದೆ.
ಈ ರೈಲು ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್ ನಗರ, ಕೋಪರಗಾಂವ್, ಮನ್ಮಾಡ್ ಜಂಕ್ಷನ್, ಭೂಸಾವಲ್ ಜಂಕ್ಷನ್, ಹರ್ದಾ, ಇಟಾರ್ಸಿ ಜಂಕ್ಷನ್, ರಾಣಿ ಕಮಲಪತಿ, ಬೀನಾ ಜಂಕ್ಷನ್, ವಿರಂಗನಾ ಲಕ್ಷ್ಮಿಬಾಯಿ ಝಾನ್ಸಿ ರೈಲ್ವೆ ನಿಲ್ದಾಣ, ಗ್ವಾಲಿಯರ್ ಜಂಕ್ಷನ್, ಆಗ್ರಾ ಕಂಟೋನ್ಮೆಂಟ್, ಮಥುರಾ ಜಂಕ್ಷನ್, ಹಜರತ್ ನಿಜಾಮುದ್ದೀನ್ ಜಂಕ್ಷನ್, ಗಾಜಿಯಾಬಾದ್ ಜಂಕ್ಷನ್, ಮೀರತ್ ಸಿಟಿ ಜಂಕ್ಷನ್, ಮುಜಾಫರ್ ನಗರ, ದಿಯೋಬಂದ್, ತಾಪ್ರಿ ಜಂಕ್ಷನ್, ರೂರ್ಕಿ ಮತ್ತು ಹರಿದ್ವಾರ ನಿಲ್ದಾಣಗಲ್ಲಿ ನಿಲುಗಡೆ ಹೊಂದಿದೆ.
ಈ ವಿಶೇಷ ರೈಲು ನಾಲ್ಕು ಎಸಿ -3 ಟೈ ಸ್ಲೀಪರ್ ಮತ್ತು ಎರಡು ಗಾರ್ಡ್ಸ್ ಬ್ರೇಕ್ ವ್ಯಾನ್ ಮತ್ತು ಎಂಟು ಎಸಿ -3 ಟೈರ್ ಸೇರಿದಂತೆ 14 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈರುತ್ಯ ರೈಲ್ವೆ ಸಿ.ಪಿ.ಆರ್.ಒ. ಮಂಜುನಾಥ ಕನಮಡಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರೈಲುಗಳ ಮಾರ್ಗ ಬದಲಾವಣೆ
ರೈಲು ಸಂಖ್ಯೆ 06246 ಹರಿಹರ – ಹೊಸಪೇಟೆ ಪ್ಯಾಸೆಂಜರ್ ರೈಲು ಜನವರಿ 07, 14, 21 ಮತ್ತು 28, 2025 ರಿಂದ ಹರಿಹರ, ಅಮರಾವತಿ ಕಾಲೋನಿ ತೆಲಿಗಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲು ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಲುಗಡೆಯನ್ನು ತಪ್ಪಿಸುತ್ತದೆ.