ಬೆಂಗಳೂರು ನಗರ

 ಈ ಮಾರ್ಗಗಳನ್ನು ಅನುಸರಿಸಿದರೆ ನೀವು ನೈಸರ್ಗಿಕವಾಗಿ ಕಾಲಜನ್ ಅಂಶವನ್ನು ಹೆಚ್ಚಿಸಿಕೊಳ್ಳಬಹುದು

super easy skin care tips

ಕಾಲಜನ್ (collagen) ನಮ್ಮ ದೇಹದ ಸ್ನಾಯುಗಳು, ಮೂಳೆಗಳು, ಚರ್ಮ, ರಕ್ತನಾಳಗಳು, ಜೀರ್ಣಕಾರಿ ಅಂಗಗಳು ಇತ್ಯಾದಿಗಳಲ್ಲಿ ಕಂಡು ಬರುವ ಒಂದು ರೀತಿಯ ಪ್ರೋಟೀನ್ (Protein) ಆಗಿದೆ. ಈ ರೀತಿಯ ಪ್ರೋಟೀನ್ ನಮ್ಮ ದೇಹದಲ್ಲಿ ವಿಶೇಷವಾಗಿ ಹೇರಳವಾಗಿರುತ್ತದೆ. ನಮ್ಮ ಮೂಳೆಗಳು, ಚರ್ಮ, ಕೂದಲು, ಉಗುರುಗಳು ಇತ್ಯಾದಿಗಳಿಗೆ ದೃಢವಾದ ರಚನೆ ಮತ್ತು ಶಕ್ತಿಯನ್ನು ಒದಗಿಸುತ್ತದೆ.

ದೇಹಕ್ಕೆ ಕಾಲಜನ್‌ನ ಪ್ರಾಮುಖ್ಯತೆ

ಕಾಲಜನ್ ಸರಿಯಾದ ಪ್ರಮಾಣದಲ್ಲಿದ್ದರೆ ನಮ್ಮ ಚರ್ಮವು ನಯವಾಗಿ, ಮೃದುವಾಗಿ ಮತ್ತು ದೃಢವಾಗಿ ಉಳಿಯುತ್ತದೆ. ಆದರೆ ವಯಸ್ಸಾದಂತೆ, ಕಾಲಜನ್ ಉತ್ಪಾದನೆಯು ಕಡಿಮೆಯಾಗುತ್ತದೆ. ಮತ್ತು ಚರ್ಮದ ಸ್ಥಿತಿಸ್ಥಾಪಕತ್ವದ ನಷ್ಟವಾಗುತ್ತದೆ. ಪರಿಣಾಮ ನಮ್ಮ ಚರ್ಮವು ಸುಕ್ಕುಸುಕ್ಕಾಗಲು ಪ್ರಾರಂಭಿಸುತ್ತದೆ ಮತ್ತು ಮುಖದ ಮೇಲೆ ಸೂಕ್ಷ್ಮವಾದ ಗೆರೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಕೆಲವು ಹಣ್ಣು ತರಕಾರಿಗಳು ಹೆಚ್ಚಿನ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತವೆ.

ಪೌಷ್ಟಿಕತಜ್ಞ ಸಿಮ್ರುನ್ ಚೋಪ್ರಾ ನಿಯಮಿತವಾಗಿ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಒಳನೋಟಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ, ಸಿಮ್ರುನ್ ದೇಹದಲ್ಲಿ ಕಾಲಜನ್ ಉತ್ಪಾದನೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ವಿಧಾನಗಳ ಕುರಿತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಬನ್ನಿ ಈ ಕುರಿತು ತಿಳಿಯೋಣ.

“ಕೊಲಾಜೆನ್‌ ದೇಹದಲ್ಲಿ ಅತ್ಯಂತ ಹೇರಳವಾಗಿರುವ ಪ್ರೋಟೀನ್ ಆಗಿದೆ ಏಕೆಂದರೆ ಇದನ್ನು ಸ್ನಾಯುಗಳು, ಮೂಳೆಗಳು, ಸ್ನಾಯುರಜ್ಜುಗಳು, ರಕ್ತನಾಳಗಳು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿಯೂ ಬಳಸಲಾಗುತ್ತದೆ. ನೀವು ಸಾಕಷ್ಟು ಪ್ರೋಟೀನ್ ಸೇವಿಸಿದರೆ, ನೀವು ಸಾಕಷ್ಟು ಕಾಲಜನ್ ಅನ್ನು ಪಡೆಯುತ್ತಿದ್ದೀರಿ ಎಂದರ್ಥ” ಎಂದು ಅವರು ತಮ್ಮ ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ.

ನಮಗೆ ವಯಸ್ಸಾದಂತೆ, ನಮ್ಮ ದೇಹವು ಕಡಿಮೆ ಗುಣಮಟ್ಟದ ಕಾಲಜನ್ ಅನ್ನು ಉತ್ಪಾದಿಸುತ್ತದೆ. ಇದು ನಮ್ಮ ಸುಕ್ಕುಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳುವುದರಿಂದ ನಮ್ಮ ಚರ್ಮವು ಸಡಿಲಗೊಳ್ಳಲು ಕಾರಣವಾಗಬಹುದು.ಆದ್ದರಿಂದ, ನೀವು ಪೂರಕಗಳನ್ನು ಖರೀದಿಸುವ ಮೊದಲು, ಈ ಐದು ಸಲಹೆಗಳನ್ನು ಒಮ್ಮೆ ಪ್ರಯತ್ನಿಸಿ,” ಎಂದು ಸಿಮ್ರುನ್ ಅವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಿಮ್ರುನ್ ಅವರ ಐದು ಸಲಹೆಗಳು

ಕಾಲಜನ್ ಉತ್ಪಾದನೆಗೆ ವಿಟಮಿನ್ ಸಿ

ವಿಟಮಿನ್ ಸಿ ದೇಹದಿಂದ ನೈಸರ್ಗಿಕವಾಗಿ ಉತ್ಪತ್ತಿಯಾಗುವುದಿಲ್ಲ. ಸಿಟ್ರಸ್ ಹಣ್ಣುಗಳು, ಕೊತ್ತಂಬರಿ ಸೊಪ್ಪು, ಕೆಂಪು ಮತ್ತು ಹಸಿರು ಬೆಲ್ ಪೆಪರ್ ಮತ್ತು ಕ್ಯಾಪ್ಸಿಕಂ ಅನ್ನು ಸೇವಿಸುವುದರಿಂದ ವಿಟಮಿನ್ ಸಿ ಅನ್ನು ಆಹಾರದಲ್ಲಿ ನೀವು ಸೇರಿಸಿ ಸೇವಿಸಬೇಕು. ಚರ್ಮಕ್ಕೆ ವಿಟಮಿನ್ ಸಿ ಸೀರಮ್‌ಗಳನ್ನು ಸೇರಿಸುವುದು ‌ಕೂಡ ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

You may also like

invest this on your wife name to get profit
ಬೆಂಗಳೂರು ನಗರ

ನಿಮ್ಮ ಹೆಂಡ್ತಿ ಹೆಸ್ರಲ್ಲಿ ಇಲ್ಲಿ 1000 ರೂಪಾಯಿ ಹೂಡಿಕೆ ಮಾಡಿ! ಅವ್ರ ಜೊತೆ ನಿಮ್ಮ ಭವಿಷ್ಯನೂ ಭದ್ರವಾಗುತ್ತೆ!

ನಿವೃತ್ತಿಯ (Retierment) ನಂತರ ಅನೇಕ ಜನರು ಆರಾಮವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಬಯಸುತ್ತಾರೆ. ಕೆಲಸ ಮಾಡಲು ಸಾಧ್ಯವಾಗದ ವಯಸ್ಸಿನಲ್ಲಿ ಸಾಕಷ್ಟು ಆದಾಯವನ್ನು ಖಚಿತಪಡಿಸಿಕೊಳ್ಳಲು ಕಾಳಜಿ ವಹಿಸಲಾಗುತ್ತದೆ. ಭವಿಷ್ಯದ