ಹಿಂದೂ ಧರ್ಮದಲ್ಲಿ (Hindu Religion) ವಾಸ್ತು ಶಾಸ್ತ್ರ (Vastu Shastra) ಬಹಳ ಮುಖ್ಯ. ಮನೆಯ (Home) ನಿರ್ಮಾಣದಿಂದ ಹಿಡಿದು ಅದರ ಅಲಂಕಾರದವರೆಗೆ ವಾಸ್ತುವನ್ನು ನೋಡಿಕೊಳ್ಳಲಾಗುತ್ತದೆ. ಮನೆಯಲ್ಲಿ ಶೂ ಮತ್ತು ಚಪ್ಪಲಿ ಇಡುವುದರಿಂದ ಹಿಡಿದು ಬಟ್ಟೆ ಇಡುವವರೆಗೂ ವಾಸ್ತು ಮುಖ್ಯವಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಪಾದರಕ್ಷೆ, ಚಪ್ಪಲಿ ಇಡಲು ನಿಯಮಗಳಿವೆ. ಅದರ ಪ್ರಕಾರ, ಮನೆಯಲ್ಲಿ ಶೂ ಮತ್ತು ಚಪ್ಪಲಿಯನ್ನು ಇಡಲು ವಾಸ್ತು ಏನು ಹೇಳುತ್ತದೆ ಎಂದು ನೋಡೋಣ ಬನ್ನಿ.
ಇದನ್ನು ನಿರ್ಲಕ್ಷಿಸಬೇಡಿ
ಸನಾತನ ಧರ್ಮದಲ್ಲಿ ಅನೇಕ ಜ್ಯೋತಿಷ್ಯ ಪರಿಹಾರಗಳಿವೆ. ಇದು ಒಬ್ಬ ವ್ಯಕ್ತಿಗೆ ಸಂಭವಿಸುವ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ. ಆದ್ದರಿಂದ ದೈನಂದಿನ ಜೀವನದಲ್ಲಿ ಉಪಯುಕ್ತವಾದ ಎಲ್ಲದಕ್ಕೂ ನಿಯಮಗಳಿವೆ. ಈ ನಿಯಮಗಳನ್ನು ನಿರ್ಲಕ್ಷಿಸುವುದು ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸಬಹುದು. ದೈಹಿಕ, ಮಾನಸಿಕ ಮತ್ತು ಆರ್ಥಿಕ ನಷ್ಟಗಳ ಹೊರತಾಗಿ, ಕುಟುಂಬದಲ್ಲಿ ಯಾವಾಗಲೂ ಜಗಳಗಳು ಆಗಬಹುದು.
ಅದೃಷ್ಟ ನಿಮಗೆ ಸಿಗಲ್ಲ
ನಿಮ್ಮ ಚಪ್ಪಲಿ ಅಥವಾ ಬೂಟುಗಳನ್ನು ಇಟ್ಟುಕೊಳ್ಳಲು ನಿಯಮಗಳಿವೆ. ಚಪ್ಪಲಿಗಳನ್ನು ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಇರಿಸಬೇಕು ಎಂಬುದರ ಬಗ್ಗೆ ಒಂದಿಷ್ಟು ತಿಳಿದುಕೊಂಡರೆ ಉತ್ತಮ. ವಾಸ್ತವವಾಗಿ, ಪಾದರಕ್ಷೆಗಳು ನಿಮ್ಮ ಅದೃಷ್ಟ ಮತ್ತು ದುರದೃಷ್ಟಕ್ಕೆ ಸಂಬಂಧಿಸಿವೆ. ಆದ್ದರಿಂದ ಮನೆಯಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದು ಸಹ ಬಹಳ ಮುಖ್ಯವಾಗುತ್ತೆ.