ಇಂದಿನ ಜಗತ್ತಿನಲ್ಲಿ ಹಲವಾರು ಜನರು ತಮ್ಮ ತಂದೆ – ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಈ ವೇಳೆ ಅವರು ತಂದೆ (Father) – ತಾಯಿಯ (Mother) ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ. ಇನ್ನು ಕೆಲವು ವೇಳೆ ತಂದೆ – ತಾಯಿಯ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಅವರನ್ನು ವೃದ್ಧಾಶ್ರಮಕ್ಕೂ (Old Age Home) ಸೇರಿಸದೆ ಮನೆಯಿಂದ ಹೊರ ಹಾಕುತ್ತಾರೆ ಅಥವಾ ಅವರನ್ನು ಮನೆಯಲ್ಲಿಯೇ ಕೂಡಿಟ್ಟು ಚಿತ್ರ ಹಿಂಸೆ ಕೊಡುತ್ತಾರೆ. ಆದರೆ ಇದೀಗ ದೇಶದ ಸರ್ವೋಚ್ಚ ನ್ಯಾಯಾಲಯವು (Supreme Court) ಇದಕ್ಕೆ ತಡೆಯೊಡ್ಡಿದೆ.
ಹೌದು ಮಕ್ಕಳು ಪೋಷಕರನ್ನು ಸರಿಯಾಗಿ ನಡೆಸಿಕೊಳ್ಳದೆ ಹೋದರೆ ಅವರ ಆಸ್ತಿಯ ಮೇಲೂ ಮಕ್ಕಳಿಗೆ ಹಕ್ಕು ಇಲ್ಲ ಎಂದು ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿದೆ. ಹೌದು ಸುಪ್ರಿಂ ಕೋರ್ಟ್ ತನ್ನ ತೀರ್ಪಿನಲ್ಲಿ ತಂದೆ – ತಾಯಿ ಯಿಂದ ಆಸ್ತಿಯನ್ನು ಬರೆಸಿಕೊಂಡ ನಂತರ ಅವರನ್ನು, ಚೆನ್ನಾಗಿ ನೋಡಿ ಕೊಳ್ಳಲಿಲ್ಲ ಎಂದರೆ ಪುನಃ ಅವರಿಗೆ ಆಸ್ತಿಯನ್ನು ವಾಪಸ್ಸ್ ಕೊಡ ಬೇಕು ಎಂದು ಹಿರಿಯ ನಾಗರೀಕರ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನು ಈ ವೇಳೆ ಒತ್ತಿ ಹೇಳಿದೆ. “ಮಕ್ಕಳು ಪೋಷಕರನ್ನು ನೋಡಿಕೊಳ್ಳಲು ವಿಫಲವಾದರೆ, ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯಡಿಯಲ್ಲಿ ಪೋಷಕರು ಅವರಿಗೆ ನೀಡಿದ ಆಸ್ತಿ ಮತ್ತು ಉಡುಗೊರೆಗಳನ್ನು ರದ್ದುಗೊಳಿಸಬಹುದು” ಎಂದು ಹೇಳಿದೆ.
ಇದೇ ವೇಳೆ ಮಕ್ಕಳು ಅವರ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೆ ಹೋದರೆ ಅವರ ಆಸ್ತಿಯನ್ನು ಪುನಃ ಅವರಿಗೆ ವಾಪಸ್ಸ್ ಕೋಡಿಸುವ ಹಕ್ಕನ್ನು ಸುಪ್ರಿಂ ಕೋರ್ಟ್ ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007 ರ ಅಡಿಯಲ್ಲಿ ರಚಿಸಲಾದ ನ್ಯಾಯಮಂಡಳಿಗಳಿಗೆ ಅಧಿಕಾರವನ್ನು ನೀಡಿದೆ. ಇದು ವಯಸ್ಸಾದ ನಾಗರಿಕರನ್ನು ಭಾವನಾತ್ಮಕ ನಿರ್ಲಕ್ಷ್ಯ ಮತ್ತು ದೈಹಿಕ ಮತ್ತು ಆರ್ಥಿಕ ಬೆಂಬಲದ ಕೊರತೆಯಿಂದ ರಕ್ಷಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠವು ಅಭಿಪ್ರಾಯ ಪಟ್ಟಿ, ಪುತ್ರ ಹಾಗೂ ಪುತ್ರಿ ರಿಬ್ಬರು ತಮ್ಮ ತಂದೆ ಹಾಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಸೂಚಿಸಿದೆ.