ಈಗಾಗಲೇ ಹೊಸ ವರ್ಷ (New Year) ಆರಂಭವಾಗಿದೆ. ಪುಷ್ಯ ತಿಂಗಳಲ್ಲಿ ಶುಭ ಕಾರ್ಯಗಳನ್ನು (Functions) ನಡೆಸಲಾಗುವುದಿಲ್ಲ. ಮಕರ ಸಂಕ್ರಾಂತಿಯು ಗ್ರಹಗಳ ರಾಜನಾದ ಸೂರ್ಯ (Sun) ದೇವರು ಮಕರ ರಾಶಿಯನ್ನು ಪ್ರವೇಶಿಸುವ ದಿನವಾಗಿದೆ. ಆ ದಿನದ ನಂತರ, ಮದುವೆ, ನಿಶ್ಚಿತಾರ್ಥ, ಮನೆ ಪ್ರವೇಶ ಮುಂತಾದ ಶುಭ ಚಟುವಟಿಕೆಗಳು ಪ್ರಾರಂಭವಾಗುತ್ತವೆ.
ಮದುವೆಗೆ 10 ಶುಭ ಮುಹೂರ್ತ
ಇನ್ನು ಹೊಸ ವರ್ಷದ ಮೊದಲ ತಿಂಗಳಲ್ಲಿ, ಅಂದರೆ ಜನವರಿಯಲ್ಲಿ ಮದುವೆಗೆ 10 ಶುಭ ಮುಹೂರ್ತಗಳಿವೆ. ತಿರುಪತಿ ಜ್ಯೋತಿಷಿ ಕೃಷ್ಣ ಕುಮಾರ್ ಭಾರ್ಗವ ಅವರಿಂದ ಜನವರಿ ತಿಂಗಳಲ್ಲಿನ ಮದುವೆಯ ಶುಭ ಸಮಯವನ್ನು ತಿಳಿದುಕೊಳ್ಳೋಣ ಬನ್ನಿ.
ರಾತ್ರಿ ಇರಲಿದೆ 7 ವಿವಾಹ ಮುಹೂರ್ತ
ಜನವರಿಯಲ್ಲಿ ಮದುವೆಗೆ 10 ಶುಭ ಮುಹೂರ್ತಗಳಿವೆ, ಆದರೆ ಈ 10 ದಿನಗಳಲ್ಲಿ, 7 ಶುಭ ಮುಹೂರ್ತಗಳು ರಾತ್ರಿ ಇದೆ. ದಿನದಲ್ಲಿ 3 ಶುಭ ಮುಹೂರ್ತಗಳು ಇರುತ್ತವೆ. ಇದರ ಪ್ರಕಾರ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಈ ಕೆಳಗಿನ ವಿವಾಹ ಮುಹೂರ್ತವನ್ನು ಆಯ್ಕೆ ಮಾಡಬಹುದು.