ತುಮಕೂರು

ಮಹಾಕುಂಭದ ಆಧ್ಯಾತ್ಮಿಕ ಮಹತ್ವವೇನು ಗೊತ್ತಾ? ನೀವು ಇಷ್ಟು ಮಾಡಿದ್ರೆ ಸಾಕು ನಿಮ್ಮ ಜೀವನ ಪಾವನ ಆಗುತ್ತೆ!

kumbhamela

ಮೊದಲೇ ಹೇಳಿದಂತೆ 12 ವರ್ಷಗಳಿಗೊಮ್ಮೆ (12 Years)  ಕುಂಭಮೇಳ (Kumbha Mela) ನಡೆಯುತ್ತದೆ. ಈ ಹಿಂದೆ 2013 ರಲ್ಲಿ ಕುಂಭಮೇಳ ನಡೆದಿತ್ತು. ಇದೀಗ 12 ವರ್ಷದ ನಂತರ ಅಂದರೆ 2025 ರ ಜನವರಿ (January) 13ರಿಂದ ಫೆಬ್ರುವರಿ (February) 26 ರ ವರೆಗೆ ಮಹಾ ಕುಂಭಮೇಳ ನಡೆಯಲಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಕುಂಭಮೇಳ ನಡೆಯುತ್ತದೆ.

ಮಹಾಕುಂಭದ ಆಧ್ಯಾತ್ಮಿಕ ಮಹತ್ವ ಕುರಿತು ಇಲ್ಲಿದೆ ಮಾಹಿತಿ

ಕುಂಭಮೇಳವನ್ನು ಪ್ರತಿ 3 ವರ್ಷಗಳಿಗೊಮ್ಮೆ, ಅರ್ಧ ಕುಂಭಮೇಳವನ್ನು ಪ್ರತಿ 6 ವರ್ಷಗಳಿಗೊಮ್ಮೆ ಮತ್ತು ಮಹಾ ಕುಂಭಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. 2013ರಲ್ಲಿ ಕೊನೆಯ ಮಹಾಕುಂಭಮೇಳವನ್ನು ಆಯೋಜಿಸಲಾಗಿತ್ತು. ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಮಹತ್ವದ್ದಾಗಿದೆ. ಆದರೆ ಮಹಾಕುಂಭದ ಸಮಯದಲ್ಲಿ ಪವಿತ್ರ ರಾಜ ಸ್ನಾನವನ್ನು ತೆಗೆದುಕೊಳ್ಳುವುದರಿಂದ, ವ್ಯಕ್ತಿಯು ದೈಹಿಕ ಮಾತ್ರವಲ್ಲದೆ ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧಿಯನ್ನು ಪಡೆಯುತ್ತಾನೆ. ಕುಂಭದ ಸಮಯದಲ್ಲಿ ಗಂಗಾ, ಯಮುನಾ, ಗೋದಾವರಿ ಮತ್ತು ಶಿಪ್ರಾ ಮುಂತಾದ ಪವಿತ್ರ ನದಿಗಳ ನೀರು ಅಮೃತದಂತೆ ಶುದ್ಧವಾಗುತ್ತದೆ ಎಂದು ನಂಬಲಾಗಿದೆ.

ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಉತ್ಸವ

ಕುಂಭಮೇಳದ ಸಮಯದಲ್ಲಿ ಪ್ರವಿತ್ರ ದಿನಗಳಲ್ಲಿ ಸ್ನಾನ ಮಾಡುವುದರಿಂದ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ. ಲಕ್ಷಾಂತರ ಮಂದಿ ಭಾಗವಹಿಸುವ ಕುಂಭಮೇಳದಲ್ಲಿ ನಾಗಸಾಧುಗಳು ಕಾಣಿಸುವುದು ವಿಶೇಷ. ಪುಷ್ಯ ಹುಣ್ಣಿಮೆ ದಿನದಿಂದ ಕುಂಭಮೇಳ ಆರಂಭವಾಗುತ್ತದೆ. ಫೆಬ್ರುವರಿ 26 ರ ಮಹಾ ಶಿವರಾತ್ರಿ ದಿನಕ್ಕೆ ಕುಂಭಮೇಳ ಮುಕ್ತಾಯವಾಗುತ್ತದೆ. ಕುಂಭಮೇಳಕ್ಕೆ ವಿಶ್ವದಲ್ಲಿ ನಡೆಯುವ ಅತಿ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವ ಎಂಬ ಹೆಸರೂ ಇದೆ.

You may also like

deep-meaning-of-yellow-color
ತುಮಕೂರು

ಹಳದಿ ಬಣ್ಣ ಕೇವಲ ಬಣ್ಣವಾಗಿರದೇ ಅಗಾಧವಾದ ಅರ್ಥವನ್ನು ಹೊಂದಿದೆ! ಏನ್ ಹೇಳುತ್ತೆ ಮನೋವಿಜ್ಞಾನ?

ನಮ್ಮಲ್ಲಿರುವ ಅನೇಕ ರೀತಿಯ ಬಣ್ಣಗಳಲ್ಲಿ ಹಳದಿ ಬಣ್ಣವು ತಕ್ಷಣವೇ ಎಲ್ಲರ ಗಮನವನ್ನು ಸೆಳೆಯುತ್ತದೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಹಳದಿ ಬಣ್ಣ ಎಂದ ತಕ್ಷಣವೇ ನಮಗೆ ಸೂರ್ಯಕಾಂತಿ,